ನವೆಂಬರ್ 4ಕ್ಕೆ ಹೊಸ ಹ್ಯುಂಡೈ SUV ಬಿಡುಗಡೆಗೆ ಸಜ್ಜು: ಪ್ರತಿಸ್ಪರ್ಧಿಗಳಿಗೆ ನಡುಕ ಶುರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ, ತನ್ನ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಎಸ್‌ಯುವಿ ಹೊಸ ತಲೆಮಾರಿನ ಹುಂಡೈ ವೆನ್ಯೂ (VENUE) ಅನ್ನು ನವೆಂಬರ್ 04, 2025 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇತ್ತೀಚೆಗೆ ಈ ಕಾರಿಗಾಗಿ ಬುಕಿಂಗ್ ‌ಗಳನ್ನು ಕೂಡ ತೆರೆದಿದೆ. ಆಸಕ್ತ ಗ್ರಾಹಕರು ಹುಂಡೈ ಡೀಲರ್‌ಶಿಪ್‌ನಲ್ಲಿ ರೂ. 25,000 ಆರಂಭಿಕ ಬುಕಿಂಗ್ ಮೊತ್ತದೊಂದಿಗೆ ಹೊಚ್ಚ ಹೊಸ ಹುಂಡೈ ವೆನ್ಯೂ ಅನ್ನು ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಹೊಸ ತಲೆಮಾರಿನ ಹುಂಡೈ ವೆನ್ಯೂ ವಿಶೇಷತೆಗಳು ಇಲ್ಲಿವೆ.

ಹ್ಯುಂಡೈ ವೆನ್ಯೂ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಈ ಮೂಲಕ ಭಾರತದಲ್ಲಿ ಕಾಂಪ್ಯಾಕ್ಟ್ SUV ಜಾಗವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಹೊಸ ತಲೆಮಾರಿನ ಹುಂಡೈ ವೆನ್ಯೂ ಗ್ರಾಹಕರ ಹೃದಯಗಳನ್ನು ಗೆಲ್ಲುವುದು ಪಕ್ಕಾ ಎಂಬ ವಿಶ್ವಾಸದಲ್ಲಿ ಕಂಪನಿಯಿದೆ. ಮುಂಬರುವ ಹೊಸ ಹುಂಡೈ ವೆನ್ಯೂ 6 ಸಿಂಗಲ್ ಟೋನ್ ಮತ್ತು 2 ಸೊಗಸಾದ ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

new-hyundai-suv-set-to-launch-on-november-4th

ಎಂಜಿನ್: ಹೊಸ ಹುಂಡೈ ವೆನ್ಯೂ ಕಪ್ಪಾ 1.2 l MPi ಪೆಟ್ರೋಲ್, ಕಪ್ಪಾ 1.0 l ಟರ್ಬೊ GDi ಪೆಟ್ರೋಲ್ ಮತ್ತು U2 1.5 l CRDi ಡೀಸೆಲ್ ಎಂಬ ಮೂರು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಆಟೋಮ್ಯಾಟಿಕ್ ಮತ್ತು ಡ್ಯುಯಲ್ - ಕ್ಲಚ್ ಟ್ರಾನ್ಸ್ಮಿಷನ್ (DCT) ಗೇರ್‌ಬಾಕ್ಸ್‌ ಆಯ್ಕೆಗಳಿವೆ, ಇವು ಎಲ್ಲಾ ರೀತಿಯ ಚಾಲಕರಿಗೂ ಕ್ರಿಯಾತ್ಮಕ ಅನುಭವವನ್ನು ಖಚಿತಪಡಿಸುತ್ತದೆ.

ಈ ಎಸ್‌ಯುವಿ ಡಾರ್ಕ್ ಕ್ರೋಮ್ ರೇಡಿಯೇಟರ್ ಗ್ರಿಲ್, R16 (D= 405.6 mm) ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಟ್ವಿನ್ ಹಾರ್ನ್ LED DRL ಗಳು, ಕ್ವಾಡ್ ಬೀಮ್ LED ಹೆಡ್‌ಲ್ಯಾಂಪ್‌ಗಳು, ಸೇತುವೆ ಮಾದರಿಯ ರೂಫ್ ರೈಲ್‌ಗಳು ಮತ್ತು ಕೆತ್ತಿದ ಅಕ್ಷರ ರೇಖೆಗಳು ಮತ್ತು ಗಾಜಿನಿಂದ ಮಾಡಿದ VENUE ಲಾಂಛನದಂತಹ ವಿನ್ಯಾಸ ಅಂಶಗಳನ್ನು ಹೊಂದಿದೆ.

new-hyundai-suv-set-to-launch-on-november-4th

ಸ್ಟೈಲಿಶ್ ಇಂಟೀರಿಯರ್: ಎಲೆಕ್ಟ್ರಿಕ್ 4 - ವೇ ಡ್ರೈವರ್ ಸೀಟುಗಳು, ಡಿ - ಕಟ್ ಸ್ಟೀರಿಂಗ್ ವೀಲ್ ಮತ್ತು ಟೆರಾಝೋಟೆಕ್ಸ್ಚರ್ಡ್ ಕ್ರ್ಯಾಶ್ ಪ್ಯಾಡ್ ಗಾರ್ನಿಶ್ ಪ್ರೀಮಿಯಂ ಸ್ಪರ್ಶವನ್ನು ಸೇರಿಸುತ್ತದೆ. ಒಟ್ಟಾರೆ ಸಮಕಾಲೀನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಡ್ಯುಯಲ್ ಟೋನ್ ಒಳಾಂಗಣ (ಡಾರ್ಕ್ ನೇವಿ & ಡವ್ ಗ್ರೇ) ಮತ್ತು ಕಾಫಿ - ಟೇಬಲ್ ಸೆಂಟರ್ ಕನ್ಸೋಲ್, ಆಂಬಿಯೆಂಟ್ ಲೈಟಿಂಗ್ (ಮೂನ್ ವೈಟ್) ಬೆಚ್ಚಗಿನ ಮತ್ತು ಆಕರ್ಷಕ ಕ್ಯಾಬಿನ್ ವಾತಾವರಣವನ್ನು ಸೃಷ್ಟಿಸುತ್ತದೆ.

ಪ್ರಯಾಣಿಕರಿಗೆ ಅತ್ಯಂತ ಸೌಕರ್ಯವನ್ನು ಒದಗಿಸಲು 2 - ಹಂತದ ರೀಕ್ಲೈನಿಂಗ್ ಸೀಟುಗಳು, ವೆನ್ಯೂ ಬ್ರ್ಯಾಂಡಿಂಗ್ ‌ನೊಂದಿಗೆ ಡ್ಯುಯಲ್ ಟೋನ್ ಲೆದರ್ ಸೀಟುಗಳು, ಹಿಂಭಾಗದ ವಿಂಡೋ ಸನ್‌ಶೇಡ್‌ಗಳು, ಹಿಂಭಾಗದ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಕ್ಯಾಬಿನ್‌ನ ಮಧ್ಯಭಾಗದಲ್ಲಿ ಡ್ಯುಯಲ್ 62.5 ಸೆ.ಮೀ (12.3" + 12.3") ಬಾಗಿದ ಪನೋರಮಿಕ್ ಡಿಸ್ಪ್ಲೇಯು ಇನ್ಫೋಟೈನ್ ‌ಮೆಂಟ್ ಮತ್ತು ಕ್ಲಸ್ಟರ್ ಅನ್ನು ಒಳಗೊಂಡಿದೆ.

new-hyundai-suv-set-to-launch-on-november-4th

ಹೊಸ ಹುಂಡೈ ವೆನ್ಯೂ ಅನ್ನು ಪ್ರಸ್ತುತಪಡಿಸುತ್ತಾ, ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ತರುಣ್ ಗರ್ಗ್ ಮಾತನಾಡಿ, ಹುಂಡೈ ವೆನ್ಯೂ ಭಾರತದ ಅತ್ಯಂತ ಪ್ರೀತಿಯ ಎಸ್ಯುವಿಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಹುಂಡೈ ವೆನ್ಯೂ ಇಂದಿನ ಹೊಸ ಯುಗದ ಗ್ರಾಹಕರ ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಸುಧಾರಿತ ತಂತ್ರಜ್ಞಾನವನ್ನು ಸಂಯೋಜಿಸುವ ಜೊತೆಗೆ ದಿಟ್ಟ ವಿನ್ಯಾಸ ಮತ್ತು ಆಧುನಿಕ ಪ್ರೀಮಿಯಂ ಅನುಭವ ನೀಡುತ್ತದೆ.

ವಿನ್ಯಾಸ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣಕ್ಕಾಗಿ 7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದನ್ನು ಆಯ್ಕೆ ಮಾಡಿದ್ದಾರೆ. ಹೊಚ್ಚ ಹೊಸ ಹುಂಡೈ ವೆನ್ಯೂನೊಂದಿಗೆ, ನಾವು ಈ ಯಶಸ್ಸಿನ ಕಥೆಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಜೀವನಶೈಲಿಗೆ ಕ್ರಿಯಾತ್ಮಕ ಮತ್ತು ಆಳವಾಗಿ ಸಂಪರ್ಕ ಹೊಂದಿದ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಹೇಳಿದರೆ.

More from DriveSpark

Article Published On: Sunday, October 26, 2025, 12:38 [IST]
English summary
New hyundai suv set to launch on november 4th
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+