ಹೊಸ ಹ್ಯುಂಡೈ ವೆನ್ಯೂ vs ಟಾಟಾ ನೆಕ್ಸಾನ್: ಬೆಲೆ & ವಿಶೇಷತೆಗಳ ನಡುವೆ ಹೋಲಿಕೆ.. ಯಾವುದು ಬೆಸ್ಟ್, ನೀವೇ ಹೇಳಿ!

ನಿನ್ನೆಯಷ್ಟೇ ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಈ ಕಾರು ನೋಡಲು ತುಂಬಾ ಚೆನ್ನಾಗಿದ್ದು, ಪ್ರತಿಯೊಬ್ಬರ ಕಣ್ಣು ಕುಕ್ಕುವಂತಿದೆ. ಇದಕ್ಕೆ ಟಾಟಾ ನೆಕ್ಸಾನ್ (Tata Nexon) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಮಗ್ರವಾದ ಹೋಲಿಕೆ ಮಾಡಿದ್ದೇವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬೆಲೆ (Price):

ನೂತನ 'ಹ್ಯುಂಡೈ ವೆನ್ಯೂ' ರೂ.7.89 ಲಕ್ಷದಿಂದ ರೂ.15.48 ಲಕ್ಷ ದರವನ್ನು ಪಡೆದಿದೆ. ಟಾಟಾ ನೆಕ್ಸಾನ್ ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ದರ ವಿಚಾರದಲ್ಲಿ 'ನೆಕ್ಸಾನ್' ಕಾರು ಕೊಂಚ ಮಟ್ಟಿಗೆ ಅಗ್ಗವಾಗಿದೆ ಎಂದು ಹೇಳಬಹುದು.

New Hyundai Venue vs Tata Nexon Suv Price Specs And Features Comparison Details

ವಿನ್ಯಾಸ (Design):

ನೂತನ 'ವೆನ್ಯೂ' ಎಸ್‌ಯುವಿಯು ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್‌ಗಳು, ಮರುವಿನ್ಯಾಸಕ್ಕೆ ಒಳಪಡಿಸಲಾದ ಬಂಪರ್, ಬ್ರಿಡ್ಜ್-ಟೈಪ್ ರೂಫ್ ರೈಲ್‌ಗಳು, ವೀಲ್ ಆರ್ಚ್‌ಗಳು ಮತ್ತು 16 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಅದೇ ರೀತಿಯಲ್ಲಿ 'ನೆಕ್ಸಾನ್' ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 17 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಇವೆರೆಡು ಕಾರುಗಳು ವಿನ್ಯಾಸದಲ್ಲಿ ಒಂದಕ್ಕಿಂತ ಒಂದು ಉತ್ತಮವಾಗಿವೆ.

ಸುತ್ತಳತೆ (Dimensions):

ಈ ಎಸ್‌ಯುವಿಗಳು ಹೆಚ್ಚು ವಿಶಾಲ ಗಾತ್ರದಲ್ಲಿವೆ. 'ಹ್ಯುಂಡೈ ವೆನ್ಯೂ' ಕಾರು 3,995 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಮತ್ತು 1,665 ಮಿಮೀ ಎತ್ತರವಿದೆ. 195 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,520 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 1,225 ಕೆಜಿ ತೂಕವಿದೆ.

ಹಾಗೆಯೇ 'ಟಾಟಾ ನೆಕ್ಸಾನ್' 3,995 ಮಿ.ಮೀ ಉದ್ದ, 1,804 ಮಿ.ಮೀ ಅಗಲ ಹಾಗೂ 1,620 ಮಿ.ಮೀ ಎತ್ತರವಿದೆ. 208 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,498 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 1,240 ಕೆಜಿ ತೂಕವಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಇವೆರೆಡು ಕಾರುಗಳು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 'ನೆಕ್ಸಾನ್' 350 ಲೀಟರ್ ಹಾಗೂ 'ವೆನ್ಯೂ' 375 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Performance):

ಹೊಚ್ಚ ಹೊಸ ಹ್ಯುಂಡೈ ವೆನ್ಯೂ ಹಾಗೂ ಟಾಟಾ ನೆಕ್ಸಾನ್ ಎಸ್‌ಯುವಿಗಳೆರಡು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿವೆ. 'ವೆನ್ಯೂ' ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಡಿಸೇಲ್ ಮತ್ತು 1.0-ಲೀಟರ್ ಟರ್ಬೊ ಪೆಟೋಲ್ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17 ರಿಂದ 20 ಕಿ.ಮೀ ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ.

ವಿಶೇಷವಾಗಿ 'ನೆಕ್ಸಾನ್' ಎಸ್‌ಯುವಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ & 1.2-ಲೀಟರ್ ಪೆಟ್ರೋಲ್ + ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 17 ರಿಂದ 24 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ವೈಶಿಷ್ಟ್ಯಗಳು (Features):

ಈ ಕಾರುಗಳು ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ನೂತನ 'ಹ್ಯುಂಡೈ ವೆನ್ಯೂ' ಎಸ್‌ಯುವಿಯು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ ಡಿಸ್‌ಪ್ಲೇಗಾಗಿ ಡುಯಲ್ 12.3 ಇಂಚಿನ ಸ್ಕ್ರೀನ್‌ಗಳು, 8-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಟಾಟಾ 'ನೆಕ್ಸಾನ್' ಕಾರು 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಸನ್‌ರೂಫ್‌ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾನ್ನು ಹೊಂದಿದೆ.

More from DriveSpark

Article Published On: Wednesday, November 5, 2025, 13:30 [IST]
English summary
New hyundai venue vs tata nexon suv price specs and features comparison details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+