Kia syros: ಡೀಲರ್‌ಶಿಪ್ ತಲುಪಿದ ಹೊಸ 'ಕಿಯಾ ಸೈರಸ್': ಫುಲ್ ಡಿಮ್ಯಾಂಡ್... ಮುಗಿಬಿದ್ದ ಜನ!
ಕಿಯಾ ಮೋಟಾರ್ಸ್ (Kia Motors) ಡಿಸೆಂಬರ್ 19 ರಂದು ತನ್ನ ಹೊಸ 'ಸೈರಸ್' (Kia syros) ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಇತ್ತೀಚೆಗೆ, ಕಂಪನಿಯು ಈ ಕಾರಿನ ಬುಕ್ಕಿಂಗ್ ಅನ್ನು ಕೂಡ ತೆರೆದಿತ್ತು. ಇದೀಗ ಅಧಿಕೃತ ಬಿಡುಗಡೆ ಮುನ್ನವೇ ಈ ಕಾರು ಶೋರೂಂಗಳನ್ನು ತಲುಪಲು ಆರಂಭಿಸಿದೆ. ಕೇರಳದ ಕೊಚ್ಚಿಯಲ್ಲಿರುವ ಇಂಚಿಯಾನ್ ಕಿಯಾ ಶೋರೂಮ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹೊಸ ಕಿಯಾ ಸೈರಸ್ ಎಸ್‌ಯುವಿಯನ್ನು ಅನಾವರಣಗೊಳಿಸಲಾಯಿತು. ಕಾರನ್ನು ನೋಡಿದ ಅಲ್ಲಿನ ಸಿಬ್ಬಂದಿ ಹೊಸ ಎಸ್‌ಯುವಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ತಂತ್ರಜ್ಞಾನ ಉತ್ಸಾಹಿಗಳು ಮತ್ತು ನಗರ ಚಾಲಕರಿಗಾಗಿ ವಿನ್ಯಾಸಗೊಳಿಸಲಾದ ಈ ಹೊಸ ಮಾದರಿಯು ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ವಿನ್ಯಾಸ, ತಂತ್ರಜ್ಞಾನದಲ್ಲಿ ಇದು ಕ್ರಾಂತಿಕಾರಿ ಮಾದರಿಯಾಗಿದೆ, ಸೈರಸ್‌ನೊಂದಿಗೆ ಕಿಯಾ ಇಂಡಿಯಾ ತನ್ನ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಉತ್ತಮ ಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕ ಕೇಂದ್ರಿತ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಾವುದೆ ಸಂದೇಹವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ಸೈರಸ್ ಡ್ಯುಯಲ್ ಪೇನ್ ಪನೋರಮಿಕ್ ಸನ್‌ರೂಫ್ ಮತ್ತು 16 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ADAS ಅನ್ನು ಒಳಗೊಂಡಿದೆ. ಒಳಾಂಗಣದ ಪ್ರಮುಖ ಮುಖ್ಯಾಂಶಗಳಲ್ಲಿ 76.2 ಸೆಂ.ಮೀ (30") ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ ಪ್ಯಾನೆಲ್, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 64 - ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಸೇರಿವೆ.
ಮತ್ತೊಂದು ಎದ್ದುಕಾಣುವ ವೈಶಿಷ್ಟ್ಯವೆಂದರೆ ಸೈರಸ್‌ನ ಸ್ಲೈಡಿಂಗ್, ರಿಕ್ಲೈನಿಂಗ್ ಮತ್ತು ಹಿಂಭಾಗದ ವೆಂಟಿಲೇಟೆಡ್ ಸೀಟುಗಳು ಮತ್ತಷ್ಟು ಪ್ರೀಮಿಯಂ ಅನುಭವ ಹೆಚ್ಚಿಸುತ್ತವೆ. ಇದು 2 ಪವರ್‌ಟ್ರೇನ್ ಆಯ್ಕೆಯೊಂದಿಗೆ ಖರೀದಿಗೆ ದೊರೆಯಲಿದೆ. 1 - ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 6-ಸ್ಪೀಡ್ ಎಂಟಿ (ಮ್ಯಾನುವಲ್), 6-ಸ್ಪೀಡ್ ಎಟಿ (ಆಟೋಮೆಟಿಕ್) ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್ - ಸ್ಟಾರ್ಟ್ ಅಸಿಸ್ಟ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಲೇನ್ - ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್-ವ್ಯೂ ಮಾನಿಟರ್‌ನೊಂದಿಗೆ 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಹೆಚ್ಚುವರಿಯಾಗಿ, ಸೈರೋಸ್ ಓವರ್ - ದಿ - ಏರ್ ಸಾಫ್ಟ್‌ವೇರ್ ನವೀಕರಣಗಳನ್ನು ಒಳಗೊಂಡಿದೆ. ಕಿಯಾ ಸೈರಸ್‌ನ ಬೆಲೆಯನ್ನು ಫೆಬ್ರವರಿ 3 ರಂದು ಘೋಷಿಸಲಾಗುವುದು.
ಈಗಾಗಲೇ, ಜನವರಿ 17 ರಿಂದಲೇ ಹೊಸ ಕಿಯಾ ಸೈರಸ್ ಎಸ್‌ಯುವಿಗಳ ಉತ್ಪಾದನೆ ಶುರುವಾಗಿದ್ದು, ಈ ಕಾರು, ರೂ.9 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಕಿಯಾ ಸೈರಸ್ ಈಗಾಗಲೇ ಬರೋಬ್ಬರಿ 10,000 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಅದರಲ್ಲಿ ಸರಿ ಸುಮಾರು ಶೇಕಡ 60%ಗೂ ಅಧಿಕ ಗ್ರಾಹಕರು ಪೆಟ್ರೋಲ್ ಚಾಲಿತ ಮಾಡೆಲ್‌ಗಳನ್ನು ಬುಕ್ ಮಾಡಿದ್ದಾರೆ.

ಆಕರ್ಷಕ ವಿನ್ಯಾಸದೊಂದಿಗೆ ಬರುವ ಈ ಕಾರು ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫ್ಲಾಟ್ ಟೈಲ್‌ಗೇಟ್, 17 - ಇಂಚಿನ ಅಲಾಯ್ ವೀಲ್‌ಗಳು ಮತ್ತು ಫ್ಲಶ್ - ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿದೆ. ಹೊಸ ಕಾರು ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್ & ಹೆಚ್‌ಟಿಎಕ್ಸ್ ಸೇರಿದಂತೆ ವಿವಿಧ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








