Kia Syros: ನೂತನ ಕಿಯಾ ಸೈರಸ್ ಕಾರು ಬಿಡುಗಡೆ.. ಬೆಲೆ ಇಷ್ಟೇನಾ.. ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು!
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ (Kia Motors), ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಶನಿವಾರ (ಫೆ.1) ಹೊಚ್ಚ ಹೊಸ 'ಸೈರಸ್' ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಇದು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ.. ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ನೂತನ ಕಿಯಾ ಸೈರಸ್ (Kia Syros) ಎಸ್‌ಯುವಿ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದು ರೂ.8.99 ಲಕ್ಷದಿಂದ ರೂ.17.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಈಗಾಗಲೇ, ಬುಕ್ಕಿಂಗ್ ಕೂಡ ಶುರುವಾಗಿದ್ದು, ಖರೀದಿದಾರರು ಸಹ ತಾಮುಂದು - ನಾಮುಂದು ಎಂಬಂತೆ ಆರ್ಡರ್ ಮಾಡುತ್ತಿದ್ದಾರೆ. ಬರೋಬ್ಬರಿ 10,000ಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಕಾರು ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್, ಹೆಚ್‌ಟಿಎಕ್ಸ್ ಪ್ಲಸ್ (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಫ್ರಾಸ್ಟ್ ಬ್ಲೂ, ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಪ್ಯೂಟರ್ ಆಲಿವ್, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಎಂಬ ಬಣ್ಣಗಳನ್ನು ಪಡೆದಿದೆ.
ಹೊಸ ಕಿಯಾ ಸೈರಸ್ ಎಸ್‌ಯುವಿ, ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಡ್ರಾಪ್-ಡೌನ್ ಎಲ್ಇಡಿ ಡಿಆರ್‌ಎಲ್‌ಗಳು, 'ಎಲ್' ಅಕ್ಷರದ ರೀತಿಯಲ್ಲಿರುವ ಎಲ್ಇಡಿ ಟೈಲ್ ಲೈಟ್‌ಗಳು, ಫ್ಲಾಟ್ ಟೈಲ್‌ಗೇಟ್, 17-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು.

ನೂತನ ಕಿಯಾ ಸೈರಸ್ ಕಾರು ಎರಡು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಇದು 1-ಲೀಟರ್ ಟರ್ಬೊ ಪೆಟ್ರೋಲ್ & 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಎಂಟಿ (ಮ್ಯಾನುವಲ್ ಟ್ರಾಸ್ಮಿಷನ್), 6-ಸ್ಪೀಡ್ ಎಟಿ (ಆಟೋಮೆಟಿಕ್ ಟ್ರಾಸ್ಮಿಷನ್) ಮತ್ತು 7-ಸ್ಪೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಈ ಕಾರು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್-ಜೋನ್ ಎಸಿ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಹಾಗೂ ಆಂಬಿಯೆಂಟ್ ಲೈಟಿಂಗ್ ಪನೊರೊಮಿಕ್ ಸನ್‌ರೂಫ್‌ನ್ನು ಒಳಗೊಂಡಿದೆ.

ಹೊಸ ಕಿಯಾ ಸೈರಸ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್ - 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








