34 Km ಮೈಲೇಜ್.. ಬಡವರ ಕಾರಿದು.. ಮಾರುತಿ ಆಲ್ಟೊ ಕೆ10 ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, ಇಎಂಐ ಏನು?

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಜನಮೆಚ್ಚಿನ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದ್ದು, ಶ್ರೀಸಾಮಾನ್ಯರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಅಗ್ಗದ ಬೆಲೆಯಲ್ಲಿ ಲಭ್ಯವಿದ್ದರೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಹೊಚ್ಚ ಹೊಸ 'ಆಲ್ಟೊ ಕೆ10'ನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ, ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಈ ನೂತನ ಕಾರು ಹಲವು ರೂಪಾಂತರಗಳೊಂದಿಗೂ (ವೇರಿಯೆಂಟ್) ಲಭ್ಯವಿದೆ. ಇದರ 'ಸ್ಟ್ಯಾಂಡರ್ಡ್' (ಪೆಟ್ರೋಲ್) ರೂಪಾಂತರ ರೂ.4.70 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಪಡೆದಿದೆ. ರೂ.1.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.3.20 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿಯನ್ನು ಹಾಕಿ, 5 ವರ್ಷಗಳಿಗೆ ಮಾಸಿಕ ರೂ.6,500 ವರೆಗೆ ಇಎಂಐ ಕಟ್ಟಬೇಕು.

New Maruti Alto K10 Car On Road Price And Emi Details

ಇದೇ ಹ್ಯಾಚ್‌ಬ್ಯಾಕ್‌ನ ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.5.50 ಲಕ್ಷವರೆಗೆ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.1.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.4 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.8,000 ವರೆಗೆ ಇಎಂಐ ಪಾವತಿ ಮಾಡಬೇಕು.

ಮತ್ತೊಂದು ವಿಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.5.80 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.1.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡಿದರೆ, ರೂ.4.30 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿಯನ್ನು ಹಾಕಿ, 5 ವರ್ಷಗಳಿಗೆ ಮಾಸಿಕ ರೂ.8,800 ವರೆಗೆ ಇಎಂಐ ಕಟ್ಟಬೇಕು.

New Maruti Alto K10 Car On Road Price And Emi Details

ಇನ್ನೊಂದು ಎಲ್ಎಕ್ಸ್ಐ (ಸಿಎನ್‌ಜಿ) ರೂಪಾಂತರ, ರೂ.6.50 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.1.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.5 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.10,000 ವರೆಗೆ ಇಎಂಐ ಪಾವತಿಸಬೇಕು.

ಮಾರುತಿ ಆಲ್ಟೊ ಕೆ10 ವಿಶೇಷತೆಗಳೇನು:

ಈ ಕಾರು ಪುಟ್ಟದಾಗಿದ್ದು, ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಪ್ರೀಮಿಯಂ ಅರ್ಥ್ ಗೋಲ್ಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಮತ್ತು ಮೆಟಾಲಿಕ್ ಸ್ಪೀಡಿ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಜೊತೆಗೆ 167 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2380 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

New Maruti Alto K10 Car On Road Price And Emi Details

ನೂತನ ಆಲ್ಟೊ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 24 ರಿಂದ 33.85 ಕಿ.ಮೀವರೆಗೂ ಮೈಲೇಜ್ ಕೊಡುತ್ತದೆ. 27 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.

ಇದು 4/ 5 ಆಸನಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 14 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಕನೆಕ್ಟಿವಿಟಿ, ಕೀಲೆಸ್ ಎಂಟ್ರಿ, 4-ಸ್ಪೀಕರ್‌ ಮ್ಯೂಸಿಕ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು 3 ಪಾಯಿಂಟ್ ಸೀಟ್ ಬೆಲ್ಟ್‌ಗಳಿವೆ.

ನಿಮ್ಮ ಗಮನಕ್ಕೆ.. ಈ ಕಾರಿನ ಕೆಲವೇ ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಮಾತ್ರ ತಿಳಿಸಿಕೊಟ್ಟಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Wednesday, July 30, 2025, 8:26 [IST]
English summary
Maruti suzuki alto k10 car on road price and emi details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+