500+ ಕಿ.ಮೀ ರೇಂಜ್: ಟಾಟಾಗೆ ನಡುಕ ಹುಟ್ಟಿಸಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಹೇಗಿದೆ ಗೊತ್ತಾ?
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತಡವಾದರೂ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಿಸಲು ರೆಡಿಯಾಗಿದ್ದಾರೆ. 2025ರ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ ಇ-ವಿಟಾರಾ ಕಾರನ್ನು ಅನಾವರಣಗೊಳಿಸಿದೆ.
ಈ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಇ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ. 2023ರ ಜನವರಿ ಭಾರತದ ಆಟೋ ಎಕ್ಸ್‌ಪೋದಲ್ಲಿ ಮತ್ತು ನಂತರ ಅಕ್ಟೋಬರ್‌ನಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾದ ಮಾರುತಿ ಇವಿಎಕ್ಸ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ. ಪರಿಸರ ಸ್ನೇಹಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಉದ್ದಳತೆ: ಹೊಸ ಮಾರುತಿ ಸುಜುಕಿ ಇ-ವಿಟಾರಾ 4,275 ಎಂಎಂ ಉದ್ದ, 1,800 ಎಂಎಂ ಅಗಲ, 1,635 ಎಂಎಂ ಎತ್ತರ, 2,700 ಎಂಎಂ ವೀಲ್‌ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಈ ಎಲೆಕ್ಟ್ರಿಕ್ ಎಸ್‍ಯುವಿಯ AWD ಸಿಸ್ಟಂ ವಾಹನದ ಟ್ರ್ಯಾಕ್ಷನ್ ಅನ್ನು ನಿರ್ವಹಿಸುತ್ತದೆ ಮತ್ತು ಸಿಲುಕಿಕೊಳ್ಳುವುದನ್ನು ತಪ್ಪಿಸುತ್ತದೆ.
ವಿನ್ಯಾಸ: ಈ ಎಲೆಕ್ಟ್ರಿಕ್ ಕಾರಿನ ಹೊರಭಾಗದಂತೆಯೇ ಒಳಾಂಗಣವನ್ನು ಸ್ಟೈಲಿಶ್ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನಲ್ಲಿ ಒನ್-ಪೀಸ್ ಡಿಸ್ ಪ್ಲೇ, ಸೆಂಟರ್ ಕನ್ಸೋಲ್‌ಗೆ ವಿನ್ಯಾಸ, ವರ್ಟಿಕಲ್ ಏರ್ ವೆಂಟ್‌ಗಳು ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಸುಜುಕಿ ಇವಿಟಾರಾ (eVitara) ವಿನ್ಯಾಸವು ಒರಟಾದ ಎಸ್‍ಯುವಿ ಅಂಶಗಳೊಂದಿಗೆ ಹೈಟೆಕ್ ಫೀಚರ್ಸ್ ಗಳನ್ನು ಹೊಂದಿವೆ. ಈ ಮಾದರಿಯು ದೊಡ್ಡ ಟೈರ್‌ಗಳು, ಉದ್ದವಾದ ವೀಲ್‌ಬೇಸ್ ಮತ್ತು ಸಾಹಸಮಯ ಡ್ರೈವ್‌ಗಾಗಿ ದೃಢವಾದ ನಿಲುವನ್ನು ಹೊಂದಿದೆ.

ಫೀಚರ್ಸ್: ಈ ಮಾರುತಿ ಎಲೆಕ್ಟ್ರಿಕ್ ಕಾರಿನಲ್ಲಿ ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸ್ವಯಂ-ಹೋಲ್ಡ್ ಫಂಕ್ಷನ್‌ನೊಂದಿಗೆ EPB, ವೈರ್‌ಲೆಸ್ ಮೊಬೈಲ್ ಚಾರ್ಜರ್, ಆಟೋಮ್ಯಾಟಿಲ್ ಕ್ಲೈಮೆಂಟ್ ಕಂತ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಇನು ಈ ಕಾರು ADAS ಸೂಟ್ ಅನ್ನು ಪಡೆದ ಮೊದಲ ಮಾರುತಿ ಕಾರು ಮತ್ತು ಇಲ್ಲಿ ಇದು ಲೆವೆಲ್ 2 ಆವೃತ್ತಿಯನ್ನು ಪಡೆಯುತ್ತದೆ.
ಇದರೊಂದಿಗೆ 10-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹಿಂಬದಿ ಸೀಟ್‌ಗಳಿಗೆ ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಫಂಕ್ಷನ್, ಏಳು ಏರ್‌ಬ್ಯಾಗ್‌ಗಳು, ಹರ್ಮನ್ ಕಾರ್ಡನ್ ಮೂಲದ ಮ್ಯೂಸಿಕ್ ಸಿಸ್ಟಂ, ಡ್ರೈವ್ ಮೋಡ್‌ಗಳು, ಆಂಬಿಯೆಂಟ್ ಲೈಟಿಂಗ್, 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಇನ್ಸ್ಟ್ರುಮೆಂಟ್ ಕನ್ಸೋಲ್ ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ TPMS, ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬ್ಯಾಟರಿ ಪ್ಯಾಕ್: ಮಾರುತಿ ಇ-ವಿಟಾರಾ ಎಲೆಕ್ಟ್ರಿಕ್ ಕಾರು ಈ ಮಾರುತಿ ಎಲೆಕ್ಟ್ರಿಕ್ ಕಾರು 49kWh ಮತ್ತು 61kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುತ್ತದೆ, ಪ್ರತಿಯೊಂದೂ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಚಿಕ್ಕ ಘಟಕವು 142bhp ಅನ್ನು ಉತ್ಪಾದಿಸುತ್ತದೆ, ಆದರೆ ದೊಡ್ಡ ಘಟಕವು 172bhp ಅನ್ನು ಅಭಿವೃದ್ಧಿಪಡಿಸುತ್ತದೆ. 192Nm ನ ಟಾರ್ಕ್ ಔಟ್ಪುಟ್ ಎರಡೂ ಆವೃತ್ತಿಗಳಿಗೆ ಸಾಮಾನ್ಯವಾಗಿದೆ.
ಈ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರ್ 500ಕ್ಕೂ ಹೆಚ್ಚು ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಇವಿಟಾರಾ ಕಾರಿನಲ್ಲಿ ಸುಧಾರಿತ BEV ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ. ಇದು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾದ ಲಿಥಿಯಂ ಐರನ್-ಫಾಸ್ಫೇಟ್ ಬ್ಯಾಟರಿಗಳಿಂದ ನಡೆಸಲ್ಪಡುವ ಮೋಟಾರ್ ಮತ್ತು ಇನ್ವರ್ಟರ್ ಅನ್ನು ಸಂಯೋಜಿಸುವ ದಕ್ಷವಾದ ಎಕ್ಸಲ್ ಅನ್ನು ಬಳಸುತ್ತದೆ. ಈ ಸೆಟಪ್ ಸ್ಟಾಪ್ ಆಗಿರುವುದಕ್ಕೆ ಎಕ್ಸೆಲೆಟರ್ ಮಾಡುತ್ತದೆ ಮತ್ತು ಇದು ಪ್ರಬಲವಾದ ಓವರ್‌ಟೇಕಿಂಗ್ ಪವರ್ ನೀಡುತ್ತದೆ.


Click it and Unblock the Notifications








