Maruti Suzuki: 7-ಸೀಟರ್.. ಹೊಸ ಫ್ಯಾಮಿಲಿ ಕಾರಿನ ಪರೀಕ್ಷೆ, ಶೀಘ್ರದಲ್ಲೇ ಬಿಡುಗಡೆ.. ಬೆಲೆ ಎಷ್ಟಿರಲಿದೆ, ಯಾವುದು?
ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಗ್ರಾಹಕರನ್ನು ಸೆಳೆಯುವ ಸಲುವಾಗಿ ಪ್ರತಿವರ್ಷ ಒಂದಿಲ್ಲೊಂದು ಕಾರುಗಳನ್ನು ಮಾರಾಟಕ್ಕೆ ತರುತ್ತಲೇ ಇರುತ್ತದೆ. ಸದ್ಯ 7-ಆಸನ ಆಯ್ಕೆ ವ್ಯವಸ್ಥೆಯಲ್ಲಿ ಹೊಚ್ಚ ಹೊಸ ಫ್ಯಾಮಿಲಿ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲು ಕಂಪನಿಯು ಭರದಿಂದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮಾರುತಿ ಸುಜುಕಿಯು 7-ಆಸನಗಳನ್ನು ಹೊಂದಿರುವ ನೂತನ ಗ್ರ್ಯಾಂಡ್ ವಿಟಾರಾ (Grand Vitara) ಎಸ್‌ಯುವಿಯನ್ನು ಮತ್ತೊಮ್ಮೆ ಪರೀಕ್ಷಿಸಿದೆ. ಅದರ ಸ್ಪೈ ವಿಡಿಯೋ ಹಾಗೂ ಫೋಟೋಗಳು ಆನ್‌ಲೈನ್‌ನಲ್ಲಿ ಕೂಡ ಸೋರಿಕೆಯಾಗಿವೆ. ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಸ ಕಾರು ಇ-ವಿಟಾರಾದಂತೆ ವಿನ್ಯಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಈ 7-ಆಸನಗಳ ಗ್ರ್ಯಾಂಡ್ ವಿಟಾರಾ ಕಾರು ಎಲ್‌ಇಡಿ ಟೈಲ್‌ಲೈಟ್‌ಗಳು, ಕನೆಕ್ಟ್ಡ್ ಲೈಟ್ ಬಾರ್, ಸೈಡ್ ಪ್ರೊಫೈಲ್‌ನಲ್ಲಿ ಹೊಸದಾದ ಅಲಾಯ್ ವೀಲ್‌ಗಳ ಸೆಟ್, ರೇರ್ ಫೆಂಡರ್‌ಗಳು ಮತ್ತು ಸಿ-ಪಿಲ್ಲರ್‌ಗಳನ್ನು ಹೊಂದಿರುವುದನ್ನು ನೋಡಬಹುದು. ಜೊತೆಗೆ ಮುಂಭಾಗ (ಫ್ರಂಟ್) & ಹಿಂಭಾಗ (ಹಿಂಭಾಗ) ನವೀಕೃತ ಬಂಪರ್‌ಗಳು, ಹೊಸದಾದ ಹೆಡ್‌ಲೈಡ್‌ಗಳು ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಪಡೆದುಕೊಂಡಿರುವ ನಿರೀಕ್ಷೆಯೂ ಇದೆ.
ನೂತನ 7-ಆಸನಗಳ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಈಗಿರುವ ಮಾಡೆಲ್‌ನಂತೆ, 1.5-ಲೀ. ಮೈಲ್ಡ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್), 1.5-ಲೀ. ಸ್ಟ್ರಾಂಗ್ ಹೈಬ್ರಿಡ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ & ಇ-ಸಿವಿಟಿ ಗೇರ್‌ಬಾಕ್ಸ್‌ನೊಂದಿಗೂ ಲಭ್ಯವಾಗಬಹುದು ಎನ್ನಲಾಗಿದೆ.

ಈ ಕಾರು ಸಹ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು), ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಹೆಡ್ಸ್ ಅಪ್ ಡಿಸ್‌ಪ್ಲೇ ಸೇರಿದಂತೆ ಒಳಗೊಂಡನಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಹೊಸ ಕಾರು 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 360-ಡಿಗ್ರಿ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಪ್ಯಾಸೆಂಜರ್ 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಹಿಲ್ - ಹೋಲ್ಡ್, ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.
ಇನ್ನು, ಮಾರುತಿ ಸುಜುಕಿ ಹೊರತರಲಿರುವ 7 ಆಸನಗಳ ನೂತನ ಗ್ರ್ಯಾಂಡ್ ವಿಟಾರಾ ಎಸ್‌ಯುವಿ ರೂ.22 ಲಕ್ಷದಿಂದ ರೂ.27 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಈ ಕಾರಿಗೆ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಸಫಾರಿ ಹಾಗೂ ಕಿಯಾ ಕ್ಯಾರೆನ್ಸ್ ಎಸ್‌ಯುವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಹೊಸ ಗ್ರ್ಯಾಂಡ್ ವಿಟಾರಾ ಬಿಡುಗಡೆಯಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Rushlane


Click it and Unblock the Notifications