Nissan: ಮೊದಲೇ ಮೈಲೇಜ್ SUV... ಇದೀಗ CNG ಆವೃತ್ತಿಯಲ್ಲಿ ಬರಲಿದೆ! ಎಲ್ಲಾ ಕಾರುಗಳು ಉಡೀಸ್!

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಜನಪ್ರಿಯ ಬ್ರಾಂಡ್‌ಗಳು ತಮ್ಮ ಪ್ರಮುಖ ಮಾಡಲ್‌ಗಳನ್ನು ಸಿಎನ್‌ಜಿ ಆವೃತ್ತಿಯಲ್ಲಿ ಪರಿಚಯಿಸುತ್ತಿವೆ. ನಿಸ್ಸಾನ್ (Nissan) ಕೂಡ ಇತರ ಅನೇಕ ಕಂಪನಿಗಳಂತೆ ಸಿಎನ್‌ಜಿ ವಿಭಾಗವನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಮತ್ತು ಟಾಟಾ ನಂತರ, ಈಗ ನಿಸ್ಸಾನ್ ಇಂಡಿಯಾ ಕೂಡ ತನ್ನ ಮೊದಲ ಸಿಎನ್‌ಜಿ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಸಿಎನ್‌ಜಿ ಕಿಟ್‌ನೊಂದಿಗೆ ರಸ್ತೆಗಳಲ್ಲಿ ಮ್ಯಾಗ್ನೈಟ್ ಕಾರನ್ನು ಪರೀಕ್ಷಿಸುವ ವೇಳೆ ಹಲವು ಬಾರಿ ಈ ಕಾರು ಕಾಣಿಸಿಕೊಂಡಿದೆ.

ಕೊನೆಗೂ ಅಂತಿಮ ಹಂತ ತಲುಪಿರುವ ಹೊಸ ಮ್ಯಾಗ್ನೈಟ್ ಸಿಎನ್‌ಜಿ ಆವೃತ್ತಿಯು, ಮುಂದಿನ ತಿಂಗಳು (ಏಪ್ರಿಲ್) ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೊಸ ಸಿಎನ್‌ಜಿ ಕಿಟ್ ಅನ್ನು ಮ್ಯಾಗ್ನೈಟ್ ಕಾರಿನ 1.0-ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ನೀಡಲಾಗುವುದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಬರಲಿದೆ. ಈ ಸಿಎನ್‌ಜಿ ಆವೃತ್ತಿಯು ಪ್ರತಿ ಕೆ.ಜಿಗೆ 22 ಕಿ.ಮೀ.ವರೆಗೆ ಮೈಲೇಜ್ ನೀಡುವ ನಿರೀಕ್ಷೆಯಿದೆ.

new-nissan-magnite-cng-car-to-be-launch-in-april

ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತೆ ವಿಚಾರಕ್ಕೆ ಬಂದರೆ, 6 ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ಹೈಸ್ಪೀಡ್ ವಾರ್ನಿಂಗ್ ಸಿಸ್ಟಮ್, ಚೈಲ್ಡ್ ಸೀಟ್ ಮೌಂಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಕಂಟ್ರೋಲ್ ಮತ್ತು ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಸಿಎನ್‌ಜಿ ಕಿಟ್ ಅನ್ನು ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ಡೀಲರ್ ಮಟ್ಟದ ಅಕ್ಸೆಸೊರಿಯಾಗಿ ಅಳವಡಿಸಲಾಗುವುದು. ಇದರ ಬೆಲೆ 75,000 ರೂ.ಗಳಿಂದ 79,500 ರೂ.ಗಳವರೆಗೆ ಇರಬಹುದು ಎಂಬ ಸುದ್ದಿಯೂ ಹರಿದಾಡುತ್ತಿದೆ. ಸಿಎನ್‌ಜಿ ಕಿಟ್ 1 ವರ್ಷದ ಡೀಲರ್ ವಾರಂಟಿಯೊಂದಿಗೆ ಬರಲಿದೆ. ಭಾರತದಲ್ಲಿ, ಇದು ಟಾಟಾ ಪಂಚ್ ಗೆ ಪೈಪೋಟಿ ನೀಡಲಿದೆ.

new-nissan-magnite-cng-car-to-be-launch-in-april

ಉಳಿದಂತೆ ಹೊಸ ಮುಂಬರಲಿರುವ ನಿಸ್ಸಾನ್ ಮ್ಯಾಗ್ನೈಟ್ ಸಿಎನ್‌ಜಿ ಕಾರಿನ ಪವರ್ ಮತ್ತು ಟಾರ್ಕ್ ಔಟ್ ಪುಟ್ ಸೇರಿದಂತೆ ಇತರ ವಿಶೇಷಣಗಳ ಬಗ್ಗೆ ವಿವರಗಳು ಇನ್ನೂ ಹೊರಬಂದಿಲ್ಲ. ಆದರೆ ಈ ಕಾರು ಮೊದಲೇ ಹೇಳೆದಂತೆ ಪ್ರತಿ ಕೆ.ಜಿಗೆ 22 ಕಿ.ಮೀ ವರೆಗೆ ಮೈಲೇಜ್ ನೀಡಯುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತಿವೆ.

ನಿಸ್ಸಾನ್ ಮ್ಯಾಗ್ನೈಟ್ ಸಿಎನ್‌ಜಿ ಕಾರು, ಟಾಟಾ ಪಂಚ್ ಸಿಎನ್‌ಜಿ ಕಾರಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತದೆ. ಟಾಟಾ ಪಂಚ್ ಸಿಎನ್‌ಜಿ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು 210 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಇದು ಸಿಎನ್‌ಜಿ ಹೊರತಾಗಿಯು ಉತ್ತಮ ಬೂಟ್ ಸ್ಥಳ ಹೊಂದಿರುವ ಕಾರು ಎಂದು ಹೇಳಲಾಗುತ್ತದೆ.

Take a Poll

ಟಾಟಾ ಪಂಚ್ ಸಿಎನ್‌ಜಿ ಕಾರು ಪ್ರತಿ ಕೆ.ಜಿ.ಗೆ 26.99 ಕಿ.ಮೀ ಮೈಲೇಜ್ ನೀಡುತ್ತದೆ. ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72.49 ಬಿಹೆಚ್ ಪವರ್ ಮತ್ತು 103 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 27, 2025, 12:43 [IST]
English summary
New nissan magnite cng car to be launch in april
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+