Nissan: ಭಾರತದಲ್ಲಿ ನಿಸ್ಸಾನ್‌ಗೆ ಆಧಾರಸ್ತಂಭವಾದ ಕಾರು: ಮೂಲೆ ಗುಂಪಾಗಿದ್ದ ಕಂಪನಿಗೆ ಮರುಜೀವ!
ನಿಸ್ಸಾನ್ (Nissan) ಮೋಟಾರ್ ಇಂಡಿಯಾ ಪ್ರೈ. ಲಿಮಿಟೆಡ್ (NMIPL) ಭಾರತದಲ್ಲಿ ಸ್ಥಿರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಮುಂದುವರೆಸಿದೆ, ಕಳೆದ ಏಳು ವರ್ಷಗಳಲ್ಲಿ ಹಿಂದೆಂದು ಸಾಧಿಸದ ಮಾರಾಟವನ್ನು 2024-25ನೇ ಹಣಕಾಸು ವರ್ಷದಲ್ಲಿ ಸಾಧಿಸಿದೆ. ಈ ವರ್ಷವು ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ನಿರಂತರ ಯಶಸ್ಸಿನಿಂದ ಈ ಮಾರಾಟವು ಹೆಚ್ಚಾಗಿದೆ. 2024-25ನೇ ಹಣಕಾಸು ವರ್ಷದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ 28,000 ಕ್ಕೂ ಹೆಚ್ಚು ಯುನಿಟ್ ಕಾರುಗಳ ಒಟ್ಟು ದೇಶೀಯ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ ಅಕ್ಟೋಬರ್ 2024 ರಲ್ಲಿ ಪರಿಚಯಿಸಲಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕೂಡ ಇದೆ.
ರಫ್ತು ವಿಷಯದಲ್ಲಿ, ಕಂಪನಿಯು ತನ್ನ ಕಾರ್ಯಾಚರಣೆಗಳನ್ನು 20 ಮಾರುಕಟ್ಟೆಗಳಿಂದ 65 ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಿದೆ. 71,000 ಕ್ಕೂ ಹೆಚ್ಚು ಯುನಿಟ್ ಕಾರುಗಳ ರಫ್ತು ಮಾರಾಟವನ್ನು ನೋಂದಾಯಿಸಿದೆ. ಇದು ಜಾಗತಿಕವಾಗಿ ನಿಸ್ಸಾನ್‌ಗೆ ಬೆಳೆಯುತ್ತಿರುವ ಉತ್ಪಾದನಾ ಮತ್ತು ರಫ್ತು ಕೇಂದ್ರವಾಗಿ ಭಾರತವನ್ನು ಮತ್ತಷ್ಟು ಬಲಪಡಿಸಿದೆ. ಇದು 2024-25ನೇ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟವನ್ನು 99,000 ಕ್ಕೂ ಹೆಚ್ಚು ಕಾರುಗಳಿಗೆ ತರುತ್ತದೆ ಎಂದು ಕಂಪನಿ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಿಸ್ಸಾನ್ ಇಂಡಿಯಾ ಕಾರ್ಯಾಚರಣೆಗಳ ಅಧ್ಯಕ್ಷ ಫ್ರಾಂಕ್ ಟೊರೆಸ್, "ನಿಸ್ಸಾನ್ ಮ್ಯಾಗ್ನೈಟ್‌ನ ನಿರಂತರ ಯಶಸ್ಸಿನಿಂದಾಗಿ ಭಾರತವು ನಿಸ್ಸಾನ್‌ಗೆ ಬೆಳವಣಿಗೆಯ ಬಲವಾದ ಆಧಾರಸ್ತಂಭವಾಗಿ ಉಳಿದಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ರಫ್ತು ಈ ವರ್ಷ LHD (ಎಡಗೈ ಸ್ಟೀರಿಂಗ್) ಮಾರುಕಟ್ಟೆಗಳು ಸೇರಿದಂತೆ 65 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಿದೆ.
ಒಂದು ಹೊಸ B- MPV ಮತ್ತು ಎರಡು ಹೊಸ C-SUV ಗಳನ್ನು ಪರಿಚಯಿಸುವ ಯೋಜನೆಯಿದೆ. ನಮ್ಮ ಒಂದು ಕಾರು, ಒಂದು ಪ್ರಪಂಚ ಯೋಜನೆಯ ಪ್ರಕಾರ ಪ್ರಪಂಚದ ಇತರ ಭಾಗಗಳಿಗೆ ವಾಹನಗಳನ್ನು ರಫ್ತು ಮಾಡುವ ನಮ್ಮ ಯೋಜನೆಗಳನ್ನು ನಾವು ಮುಂದುವರಿಸುತ್ತೇವೆ. "ನಮ್ಮ ಜಾಗತಿಕ ಟರ್ನರೌಂಡ್ ಕ್ರಮಗಳ ಭಾಗವಾಗಿ, ವಿಶ್ವಾದ್ಯಂತ ಚುರುಕಾದ ಕಂಪನಿಯಾಗಲು ನಮ್ಮ ಪ್ರಯತ್ನಗಳು ನಡೆಯುತ್ತಿವೆ ಎಂದರು."

ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಮಾತನಾಡಿ, "ಈ ವರ್ಷ ಆಟೋ ಉದ್ಯಮಕ್ಕೆ ಸವಾಲಿನ ವರ್ಷವಾಗಿದೆ. ಇದರ ಹೊರತಾಗಿಯೂ, ಹೊಸ ಮ್ಯಾಗ್ನೈಟ್ ಬಿ-ಎಸ್‌ಯುವಿ ಗ್ರಾಹಕರಲ್ಲಿ ಬಲವಾದ ನೆಚ್ಚಿನ ಕಾರಾಗಿ ಉಳಿದಿದೆ. ಇತ್ತೀಚೆಗೆ ಹೊಸ 7-ಆಸನಗಳ ಬಿ-ಎಂಪಿವಿ ಮತ್ತು 5-ಆಸನಗಳ ಸಿ-ಎಸ್‌ಯುವಿ ಸೇರ್ಪಡೆಯ ಘೋಷಣೆಯೊಂದಿಗೆ ನಮ್ಮ ನೆಟ್‌ವರ್ಕ್ ಅನ್ನು ಮತ್ತಷ್ಟು ವಿಸ್ತರಿಸುವತ್ತ ಗಮನಹರಿಸಿದ್ದೇವೆ ಎಂದರು.
ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಕಂಪನಿಗಳಂತೆ ನಿಸ್ಸಾನ್ ಮೋಟಾರ್ ಇಂಡಿಯಾ ಕೂಡ ಏಪ್ರಿಲ್ 1, 2025 ರಿಂದ ಎಲ್ಲಾ ಟ್ರಿಮ್‌ಗಳಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್‌ನ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ನಿಸ್ಸಾನ್ ಮ್ಯಾಗ್ನೈಟ್ ತನ್ನ ವಿಭಾಗದಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದೆ. ಆಗಸ್ಟ್ 2024 ರಲ್ಲಿ, ನಿಸ್ಸಾನ್ ಮ್ಯಾಗ್ನೈಟ್ 1,50,000 ಯುನಿಟ್ ಕಾರುಗಳ ಸಂಚಿತ ಮಾರಾಟವನ್ನು ದಾಟಿದೆ. ಅಕ್ಟೋಬರ್ 2024 ರಲ್ಲಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆಯಾಯಿತು, ನಂತರ ಇನ್ನೂ ಬಲವಾದ ವೇಗ ಮತ್ತು ಜಾಗತಿಕ ಆಕರ್ಷಣೆಯನ್ನು ಗಳಿಸಿತು.
ಚೆನ್ನೈ ಸ್ಥಾವರದಲ್ಲಿ ತಯಾರಿಸಲಾದ ಹೊಸ ಮ್ಯಾಗ್ನೈಟ್ ಭಾರತದಲ್ಲಿ 20 ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಮತ್ತು ದಿಟ್ಟ ಹೊಸ ವಿನ್ಯಾಸವನ್ನು ಒಳಗೊಂಡಿದೆ. ಅದರ ಸುಸ್ಥಿರತೆಯ ಬದ್ಧತೆಯನ್ನು ಬಲಪಡಿಸುವ ಮೂಲಕ, ಇದು ಈಗ ಸಂಪೂರ್ಣವಾಗಿ E20 ಇಂಧನಕ್ಕೆ ಅನುಗುಣವಾಗಿದೆ. ಸೌದಿ ಅರೇಬಿಯಾದಲ್ಲಿ ಮೊದಲ ಎಡಗೈ ಡ್ರೈವ್ (LHD) ಮಾರುಕಟ್ಟೆಯಾಗಿ ಇತ್ತೀಚೆಗೆ ಬಿಡುಗಡೆಯಾದ ಮೂಲಕ ಹೊಸ ಮ್ಯಾಗ್ನೈಟ್‌ನ ಯಶಸ್ಸನ್ನು ವರ್ಧಿಸಲಾಗಿದೆ.


Click it and Unblock the Notifications








