5-ಸ್ಟಾರ್ ಸೇಫ್ಟಿ ರೇಟಿಂಗ್‌ನ ನೂತನ ಸ್ಕೋಡಾ ಕೈಲಾಕ್ ಕಾರಿನ ಮೊದಲ ಅಪಘಾತ ವರದಿ.. ಏನಾಯ್ತು?

ಜೆಕ್ ರಿಪಬ್ಲಿಕ್‌ ಮೂಲದ ಸ್ಕೋಡಾ (Skoda) ಜನಪ್ರಿಯ ಕಾರು ತಯಾರಕ ಕಂಪನಿ ಗುರುತಿಸಿಕೊಂಡಿದೆ. ಡಿಸೆಂಬರ್ 2ರಂದು ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕೈಲಾಕ್ (Kylaq) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಕಾರಿಗೆ ಖರೀದಿದಾರರು ಕೂಡ ಮನಸೋತಿದ್ದು, ಬರೋಬ್ಬರಿ 10,000ಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ನೂತನ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, 'ಭಾರತ್ ಎನ್‌ಸಿಎಪಿ' ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಗಳಿಸಿದೆ. ಇತ್ತೀಚೆಗೆ ಕೈಲಾಕ್ ಕಾರಿನ ಮೊದಲ ಅಪಘಾತ ವರದಿಯಾಗಿದೆ.

'ಸೇಫ್ ಕಾರ್ಸ್ ಇಂಡಿಯಾ' ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಹೊಸ 'ಸ್ಕೋಡಾ ಕೈಲಾಕ್' ಎಸ್‌ಯುವಿ ಅಪಘಾತಕ್ಕೆ ತುತ್ತಾಗಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಕೈಲಾಕ್ ಕಾರು ಪೆಟ್ರೋಲ್ ಪಂಪ್‌ನಿಂದ ಹೊರಬರುತ್ತಿದ್ದಾಗ ಟ್ರಕ್​ವೊಂದರ ಬದಿಗೆ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ನೂತನ ಕಾರಿನ ಡೋರ್‌ಗೆ ಕೊಂಚ ಮಟ್ಟಿಗೆ ಹಾನಿಯಾಗಿದ್ದು, ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

New Skoda Kylaq Suv First Accident Report What Happened Details

ಈ ಅಪಘಾತ ಕಾರು ಚಾಲಕ ಅಥವಾ ಟ್ರಕ್ ಚಾಲಕನ ತಪ್ಪಿನಿಂದ ನಡೆಯಿತೇ ಎಂಬುದನ್ನು ತಿಳಿಸಲು ಯಾವುದೇ ಪ್ರತ್ಯಕ್ಷದರ್ಶಿಗಳು ಮಾತನಾಡಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಶೀರ್ಷಿಕೆ ರೂಪದಲ್ಲಿ ಬರೆದಿರುವುದು ಎಲ್ಲವು ನಿಖರವಾದ ವಿವರವೆಂದು ನಂಬಲು ಸಾಧ್ಯವಿಲ್ಲ. ಹಾಗೆಯೇ ​ಈ ಘಟನೆ ಎಲ್ಲಿ ಸಂಭವಿಸಿತು ಎಂಬುದರ ಬಗ್ಗೆಯೂ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ. ಈ ಅಪಘಾತದ ಹಿನ್ನೆಲೆಯ ಸತ್ಯಾಸತ್ಯತೆ ಪರಿಶೀಲಿಸಿದಾಗ ಮಾತ್ರ ಸ್ಪಷ್ಟವಾದ ಉತ್ತರ ಸಿಗಲಿದೆ.

ಯಾವುದೇ ಕಾರು 'ಸುರಕ್ಷಿತ' ಎಂಬುದನ್ನು ಅದರ 'ಬಾಡಿ'ಯನ್ನು ಅವಲಂಭಿಸಿ ನಿರ್ಣಯಿಸಲಾಗುವುದಿಲ್ಲ.. ಆ ಕಾರಿನ ಚಾಸಿಸ್ & ಏರ್‌ಬ್ಯಾಗ್ ಒಳಗೊಂಡಂತೆ ಇತರೆ ರಕ್ಷಣಾತ್ಮಕ ಸಾಧನಗಳಿಂದ ಸಹ ತೀರ್ಮಾನ ಮಾಡಲಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದ ನಂತರವಷ್ಟೇ ದೇಶದಲ್ಲಿ ವಾಹನಗಳ ಸುರಕ್ಷತಾ ಪರೀಕ್ಷೆ ನಡೆಸುವ 'ಭಾರತ್ ಎನ್‌ಸಿಎಪಿ' ಸಂಸ್ಥೆಯೂ ಸ್ಟಾರ್ ರೇಟಿಂಗ್‌ನ್ನು ಕೊಡುತ್ತದೆ.

New Skoda Kylaq Suv First Accident Report What Happened Details

ನೂತನ ಕೈಲಾಕ್ ಎಸ್‌ಯುವಿಯು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಚೈಲ್ಡ್ ಸೀಟ್ ಮೌಂಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೊಸ ಸ್ಕೋಡಾ ಕೈಲಾಕ್ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ಕನಿಷ್ಠ ರೂ.7.89 ಲಕ್ಷ ಮತ್ತು ಗರಿಷ್ಠ ರೂ.14.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಲಾವಾ ಬ್ಲೂ, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಹಾಗೂ ಟೊರ್ನಾಡೊ ರೆಡ್ ಬಣ್ಣಗಳೊಂದಿಗೂ ಸಿಗುತ್ತದೆ. ಈ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಕಾರು, 1.0-ಲೀಟರ್ ಟಿಎಸ್‌ಟಿ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 15 ರಿಂದ 18 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಟು ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ರೂಫ್, ಕೀಲೆಸ್ ಎಂಟ್ರಿ ಹಾಗೂ ವೈರ್‌ಲೆಸ್ ಚಾರ್ಜರ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 28, 2025, 14:19 [IST]
English summary
New skoda kylaq suv first accident report what happened details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+