Suzuki: ಜನ ಕ್ಯೂ ನಿಲ್ಲುವರು.. ಖರ್ಚು ಕಮ್ಮಿ, ದುಡ್ಡು ಉಳಿತಾಯ.. ಹೊಸ ಇಂಧನ ಆಯ್ಕೆಯ ವಿಕ್ಟೋರಿಸ್ ಕಾರು ಅನಾವರಣ!

ಮಾರುತಿ ಸುಜುಕಿ ಇಂಡಿಯಾದ ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಸ್ವಂತ ದೇಶ ಜಪಾನ್‌ನಲ್ಲಿ ಆಯೋಜಿಸರುವ 'ಮೋಟಾರ್ ಶೋ'ನಲ್ಲಿ ವಿವಿಧ ಕಾರುಗಳನ್ನು ಪ್ರದರ್ಶಿಸುತ್ತಿದೆ. ಅದರ ಭಾಗವಾಗಿ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 'ಮಾರುತಿ ಸುಜುಕಿ ವಿಕ್ಟೋರಿಸ್' ಎಸ್‌ಯುವಿಯನ್ನು ಹೊಸ ಇಂಧನ ಆಯ್ಕೆಯಲ್ಲಿ ಅನಾವರಣಗೊಳಿಸಿದೆ. ನೂತನ ಕಾರಿಗೆ 'ಸುಜುಕಿ ವಿಕ್ಟೋರಿಸ್' ಎಂಬ ಹೆಸರನ್ನು ಇಡಲಾಗಿದೆ.

ನೂತನ ಸುಜುಕಿ ವಿಕ್ಟೋರಿಸ್ (Suzuki Victoris), ಸಿಬಿಜಿ (ಕಂಪ್ರೆಸ್ಡ್ ಬಯೋಮೀಥೇನ್ ಗ್ಯಾಸ್) ಇಂಧನ ನೆರವಿನಿಂದ ಕಾರ್ಯನಿರ್ವಹಿಸಬಲ್ಲದು. ಇದು 'ಮಾರುತಿ ವಿಕ್ಟೋರಿಸ್'ನ ಸಿಎನ್‌ಜಿ ತಂತ್ರಜ್ಞಾನವನ್ನೇ ಆಧರಿಸಿದೆ. ವಿಶೇಷವಾಗಿ ಗೃಹೋಪಯೋಗಿ ಕಸ ಹಾಗೂ ಸಗಣಿ ಮುಂತಾದ ಡೈರಿ ತಾಜ್ಯ ಬಳಸಿ ಬಯೋಮೀಥೇನ್ ಗ್ಯಾಸ್ ತಯಾರಿಸಲಾಗುತ್ತದೆ. ಹೀಗಾಗಿ, ನಿರ್ವಹಣಾ ವೆಚ್ಚವು ಅಗ್ಗವಾಗಿರಲಿದೆ.

New Suzuki Victoris Biomethane Fuel Suv Unveiled Details

ಹೊಚ್ಚ ಹೊಸ ಸಿಬಿಜಿ ಚಾಲಿತ 'ಸುಜುಕಿ ವಿಕ್ಟೋರಿಸ್' ಎಸ್‌ಯುವಿಯ ವಿನ್ಯಾಸ & ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ 'ಮಾರುತಿ ವಿಕ್ಟೋರಿಸ್' ಕಾರಿಗೆ ನೂರಕ್ಕೆ ನೂರರಷ್ಟು ಹೋಲಿಕೆಯಾಗಲಿದ್ದು, ಅದರ ತದ್ರೂಪದಂತಿದೆ. ಸದ್ಯಕ್ಕೆ ಈ ಕಾರಿನ ಬಿಡುಗಡೆ ಕುರಿತಂತೆ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಎಲ್ಲವು ಅಂದುಕೊಂಡಂತೆ ನಡೆದರೆ, ದೇಶೀಯವಾಗಿಯೂ ಮಾರಾಟಕ್ಕೆ ಬರುವುದರಲ್ಲಿ ಕೂಡ ಯಾವುದೇ ಸಂದೇಹವಿಲ್ಲ.

ಭಾರತದಲ್ಲಿ ಸಿಗುವ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ವಿಶೇಷತೆಗಳೇನು:

ಇದೊಂದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಅರೆನಾ ಡೀಲರ್‌ಶಿಪ್‌ ಮುಖಾಂತರ ಮಾರಾಟಗೊಳಿಸಲಾಗುತ್ತದೆ. ಈ ಕಾರು ರೂ.10.50 ಲಕ್ಷದಿಂದ ರೂ.9.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ, ಝಡ್ಎಕ್ಸ್ಐ (ಒ), ಝಡ್ಎಕ್ಸ್ಐ ಪ್ಲಸ್ ಮತ್ತು ಝಡ್ಎಕ್ಸ್ಐ (ಒ) ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ವಿಕ್ಟೋರಿಸ್' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ಅದು ನೋಡುಗರ ಕಣ್ಮನ ಸೆಳೆಯುತ್ತದೆ. ಸ್ಪ್ಲೆಂಡಿಡ್ ಸಿಲ್ವರ್, ಸಿಜ್ಲಿಂಗ್ ರೆಡ್, ಮ್ಯಾಗ್ಮಾ ಗ್ರೇ, ಆರ್ಕ್ಟಿಕ್ ವೈಟ್ ಮತ್ತು ಮಿಸ್ಟಿಕ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಜೊತೆಗಿದು 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,600 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 1305 ಕೆಜಿ ತೂಕವಿದೆ.

ಈ ಕಾರು 3 ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.5-ಲೀ. ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ & ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 21 ರಿಂದ 28.65 ಕಿ.ಮೀವರಗೆ ಮೈಲೇಜ್ ನೀಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 14 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 373 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1 ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, 64 ಕಲರ್ ಆಂಬಿಯೆಂಟ್ ಲೈಟಿಂಗ್, ಫೋನ್ ಚಾರ್ಜರ್ ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ 'ವಿಕ್ಟೋರಿಸ್' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

More from DriveSpark

Article Published On: Thursday, October 30, 2025, 11:17 [IST]
English summary
New suzuki victoris biomethane fuel suv unveiled details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+