Tata: ಬಿಡುಗಡೆಯೇ ಆಗಿಲ್ಲ, ಆಗಲೇ ಹೊಸ ಟಾಟಾ ಕಾರು ಬಹಿರಂಗ: ಹ್ಯಾಚ್‌ಬ್ಯಾಕ್‌ಗೆ ಫುಲ್ ಡಿಮ್ಯಾಂಡ್ ಗುರೂ!

ಟಾಟಾ ಮೋಟಾರ್ಸ್‌ನ ಬಹುಬೇಡಿಕೆಯ ಕಾರಾಗಿರುವ ಆಲ್ಟ್ರೋಜ್ (Tata Altroz), 2020 ರಲ್ಲಿ ಮೊದಲ ಬಾರಿಗೆ ಪರಿಚಯಿಸಿದಾಗಿನಿಂದ ಉತ್ತಮ ಮಾರಾಟ ಕಾಣುತ್ತಿದೆ. ಕಾಲಾನಂತರದಲ್ಲಿ, ಆಲ್ಟ್ರೋಜ್ ಶ್ರೇಣಿಯು 2021 ರಲ್ಲಿ ಡಾರ್ಕ್ ಎಡಿಷನ್, 2022 ರಲ್ಲಿ ಡ್ಯುಯಲ್-ಕ್ಲಚ್ ಡಿಸಿಎ, 2023 ರಲ್ಲಿ ಟ್ವಿನ್-ಸಿಲಿಂಡರ್ ಸಿಎನ್‌ಜಿ ಮತ್ತು 2024 ರಲ್ಲಿ ರೇಸರ್ ಎಡಿಷನ್‌ನೊಂದಿಗೆ ಗ್ರಾಹಕರ ಮನಗೆದ್ದಿದೆ. ಇದೀಗ 2025 ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆದರೆ ಅಧಿಕೃತ ಬಿಡುಗಡೆಗೂ ಮುನ್ನವೇ ಕಾರಿನ ಸಂಪೂರ್ಣ ಡಿಸೈನ್ ಬಹಿರಂಗವಾಗಿದೆ.

ಟಾಟಾ ಮೋಟಾರ್ಸ್ ತನ್ನ 2025 ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರನ್ನು ಅಧಿಕೃತ ಬಿಡುಗಡೆ ಮುಂಚಿತವಾಗಿ ಭಾರತದಲ್ಲಿ ಬಹಿರಂಗಪಡಿಸಿದೆ. ಆಲ್ಫಾ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಿಸಲಾದ ಮೊದಲ ಟಾಟಾ ಕಾರಾಗಿ ತನ್ನ ಆರಂಭಿಕ ದಿನಗಳಿಂದಲೂ, ಆಲ್ಟ್ರೊಜ್ ಸೇಫ್ಟಿಯಲ್ಲಿ ಉತ್ತಮ ಕಾರಾಗಿ ಮುಂದುವರಿಯುತ್ತಿದೆ. ಇದೀಗ ಮುಂಬರಲಿರುವ ಕಾರು ಇನ್ನಷ್ಟು ಸುರಕ್ಷಿತ ಕಾರಾಗಿ ಎಂಟ್ರಿಕೊಡುತ್ತಿದೆ.

new-tata-altroz-facelift-revealed-ahead-of-launch

ಅಂದಹಾಗೆ ಇದೀಗ ಹೊಸ ಫೇಸ್‌ಲಿಫ್ಟ್‌ ಮಾದರಿ ಬಹಿರಂಗಗೊಂಡಿದ್ದು, ಡಿಸೈನ್ ಕುರಿತ ಟಾಪ್ ಹೈಲೆಟ್‌ಗಳನ್ನು ನೋಡೋಣ. ಹೊರಭಾಗವು ಹೊಸ ಗ್ರಿಲ್ ವಿನ್ಯಾಸ ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ ಗಳನ್ನು ಒಳಗೊಂಡಿದ್ದರೆ, 'ಲುಮಿನೇಟ್' ಎಂದು ಕರೆಯಲ್ಪಡುವ ಮುಂಭಾಗದ ಎಲ್ಇಡಿ ಲೈಟ್‌ಗಳನ್ನು ನೀಡಿದ್ದರೇ, ಹಿಂಭಾಗದಲ್ಲಿ ಈಗ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಗಮನಾರ್ಹ ಬದಲಾವಣೆಗಳನ್ನು ಮಾಡೆಲಾಗಿದೆ, ಡ್ಯುಯಲ್ 26.03 ಸೆಂ.ಮೀ HD ಸ್ಕ್ರೀನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ. ಆಂಬಿಯೆಂಟ್ ಲೈಟಿಂಗ್, ಹೊಸ ಅಪ್ಹೋಲ್ಸ್ಟರಿ ಮತ್ತು ಏರ್ ಪ್ಯೂರಿಫೈಯರ್‌ನಂತಹ ಪ್ರಮುಖ ಫೀಚರ್ಸ್ ಸೇರಿಸಲಾಗಿದೆ.

Take a Poll

ಎಂಜಿನ್ ಆಯ್ಕೆ ವಿವರಗಳು: 2025ರ ಟಾಟಾ ಆಲ್ಟ್ರೋಜ್ ಮೊದಲಿನಂತೆ ಅದೇ 1.2-ಲೀಟರ್ NA ಎಂಜಿನ್, 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಹಾಗೆಯೇ ಮುಂದುವರಿಸಲಾಗಿದೆ. ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಬಿಡುಗಡೆಯ ಬಳಿಕ ಹ್ಯುಂಡೈ ಐ 20, ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ ಕಾರುಗಳಿಗೆ ಪೈಪೋಟಿ ನೀಡಲಿದೆ.

ಆಲ್ಟ್ರೊಜ್‌ನ ಎಲ್ಲಾ ಮೂರು ಪ್ರತಿಸ್ಪರ್ಧಿಗಳನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ನೀಡಲಾಗುತ್ತದೆ, ಆಲ್ಟ್ರೋಜ್ ಈ ವಿಭಾಗದಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಏಕೈಕ ಕಾರು ಆಗಿದೆ. ಕಂಪನಿ ಹೇಳಿಕೊಂಡಿರುವಂತೆ ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳ 22 ರಂದು ಬಿಡುಗಡೆ ಮಾಡಲಾಗುವುದು.

new-tata-altroz-facelift-revealed-ahead-of-launch

ನಿರೀಕ್ಷೆಗಳು: 360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್ ಗಳು, ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ ಪ್ರಯಾಣಿಕರಿಗೆ ಎಸಿ ವೆಂಟ್ ಗಳು, ವಾಯ್ಸ್ ಆಕ್ಟಿವೇಟೆಡ್ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ. ಜೊತೆಗೆ ಟಾಟಾ ADAS ಸಹ ಪರಿಚಯಿಸುವ ನಿರೀಕ್ಷೆಯಿದೆ, ಆದರೆ ಈ ಬಗ್ಗೆ ಹೆಚ್ಚಿನ ವಿವರಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, May 13, 2025, 12:46 [IST]
English summary
New tata altroz facelift revealed ahead of launch
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+