TATA: ಇದು ಸಿಯೆರಾ ಅಲ್ಲ.. 8 ಲಕ್ಷ ರೂಪಾಯಿ? ಸದ್ದಿಲ್ಲದೇ ಮತ್ತೊಂದು ಹೊಸ ಟಾಟಾ ಕಾರು ರೆಡಿಯಾಗುತ್ತಿದೆ!
ಮುಂಬೈನಲ್ಲಿ ಶನಿವಾರ ಜರುಗಿದ ಅದ್ದೂರಿ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್ (Tata Motors), ಹೊಚ್ಚ ಹೊಸ ಇಂಧನ ಚಾಲಿತ ಸಿಯೆರಾ (Sierra) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಮುಂದಿನ ವಾರವೇ (ನವೆಂಬರ್ 25) ಮಾರಾಟಕ್ಕೂ ತರಲಿದೆ. ಸದ್ಯ, ಕಂಪನಿಯು 'ಸ್ಕಾರ್ಲೆಟ್' ಬ್ಯಾಡ್ಜ್‌ನಡಿ ಮತ್ತೊಂದು ನೂತನ ಕಾರೊಂದನ್ನು ಸಿದ್ಧಗೊಳಿಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದು ನೆಕ್ಸಾನ್‌ನಂತೆಯೇ ಸಬ್-4 ಮೀಟರ್ ಎಸ್‌ಯುವಿಯಾಗಿರಬಹುದು ಎನ್ನಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹೊಸ ಟಾಟಾ ಸ್ಕಾರ್ಲೆಟ್ (Tata Scarlet) ಕಾರು ಹೆಚ್ಚು ಅತ್ಯಾಧುನಿಕವಾಗಿರಲಿದೆ. ಸಿಯೆರಾದಿಂದ ವಿನ್ಯಾಸದ ಅಂಶಗಳನ್ನು ಎರವಲು ಪಡೆದಿದ್ದರೂ, ಸಣ್ಣ ಗಾತ್ರದಲ್ಲಿರಲಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. ಜೊತೆಗೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ.

ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಲು ಸಾಧ್ಯವಾಗಲಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ದೊಡ್ಡ ಗಾತ್ರದ ಬೂಟ್ ಸ್ಪೇನ್‌ನ್ನು ಪಡೆದಿರಬಹುದು ಎನ್ನಲಾಗಿದೆ.
ಇದು ನೆಕ್ಸಾನ್ ಕಾರಿನಂತೆಯೇ ಪವರ್‌ಟ್ರೇನ್‌ನ್ನು ಪಡೆದಿರಲಿದೆ. 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 1.5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ನು ಒಳಗೊಂಡಿರಲಿದೆ. 17 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ಚಾಲಿತ ರೂಪದಲ್ಲೂ ಪರಿಚಯಗೊಳ್ಳಬಹುದು ಎಂದು ಹೇಳಲಾಗಿದೆ.
ನೂತನ 'ಟಾಟಾ ಸ್ಕಾರ್ಲೆಟ್' ಎಸ್‌ಯುವಿ, ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬೃಹದಾಕಾರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪ್ರೀಮಿಯಂ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಹಾಗೂ ಹೆಡ್-ಅಪ್ ಡಿಸ್‌ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿರಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.
ಹೊಸ 'ಸ್ಕಾರ್ಲೆಟ್' 2026 ಅಥವಾ 2027 ರಲ್ಲಿ ಬಿಡುಗಡೆಗೊಳ್ಳಬಹುದು ಎನ್ನಲಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗಬಹುದು. ಕನಿಷ್ಠ ರೂ.8 ಲಕ್ಷ ಹಾಗೂ ಗರಿಷ್ಠ ರೂ.14 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳು ಇರಲಿವೆ. ವಿಶೇಷವಾಗಿ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್ ಎಸ್‌ಯುವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಬಹುನಿರೀಕ್ಷಿತ 'ಟಾಟಾ ಸಿಯೆರಾ' ವಿಶೇಷತೆಗಳೇನು:
ಇದು ರೂ.11 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಬಹುದು ಎಂದು ಹೇಳಲಾಗಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಮತ್ತು ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 5 ಆಸನಗಳನ್ನು ಒಳಗೊಂಡಿದೆ.
ನೂತನ ಕಾರು, 1.5-ಲೀ. ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯುವ ನಿರೀಕ್ಷೆಯಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಹಾಗೂ ಆಟೋಮೆಟಿಕ್ ವೈಪರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








