Tata Sierra: ಪವರ್ ತೋರಿಸಲು ಟಾಟಾ ಸಿದ್ಧ.. ಶೋರೂಂಗೆ ಬಂದೆ ಬಿಡ್ತು ಹೊಸ ಸಿಯೆರಾ, ಬೆಲೆ ಎಷ್ಟು.. ಹೇಗಿದೆ?

ಈಚೆಗೆ ಹೊಸ ಟಾಟಾ ಸಿಯೆರಾ (Tata Sierra) ಕಾರನ್ನು ಬಿಡುಗಡೆಗೊಳಿಸಲಾಯಿತು. ಇದೊಂದು ಎಸ್‌ಯುವಿಯಾಗಿದೆ. ಸಖತ್ ಸ್ಟೈಲಿಶ್ ಆಗಿದ್ದು, ನಾನಾ ಬಗೆಯ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಶುರುವಾಗಲಿದ್ದು, 2026ರ ಜನವರಿ 15ರಿಂದ ವಿತರಣಾ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆ. ಸದ್ಯ, ದೇಶಾದ್ಯಂತ ಶೋರೂಂಗಳಿಗೆ ಈ ಕಾರನ್ನು ತಲುಪಿಸುವುದಕ್ಕೂ ಕಂಪನಿಯು ಆರಂಭಿಸಿದೆ. ಬನ್ನಿ, ನೂತನ 'ಸಿಯೆರಾ'ದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

'ಟಾಟಾ ಸಿಯೆರಾ' ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ಕನಿಷ್ಠ ರೂ.11.49 ಲಕ್ಷ ಹಾಗೂ ಗರಿಷ್ಠ ರೂ.18.49 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ.

New Tata sierra Suv Reaching Showroom Details

ಇದು ಹೆಚ್ಚು ಅತ್ಯಾಧುನಿಕವಾದ ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಕಾಂಪ್ಲಿಶ್ಡ್ ಮತ್ತು ಅಕಾಂಪ್ಲಿಶ್ಡ್ ಪ್ಲಸ್ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ಭರ್ಜರಿಯಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಈ ಎಸ್‌ಯುವಿಯು ಕಣ್ಣು ಕುಕ್ಕುವಂತಹ ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಮತ್ತು ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,730 ಮಿ.ಮೀ ವೀಲ್‌ಬೇಸ್‌ ಒಳಗೊಂಡಿದೆ.

ಹೊಚ್ಚ ಹೊಸ 'ಟಾಟಾ ಸಿಯೆರಾ' ಎಸ್‌ಯುವಿ, ಸಾಮಾನ್ಯ ಕಾರುಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ & 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 20 ಕಿಲೋಮಿಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

ಇದರ ಕ್ಯಾಬಿನ್ ವಿನ್ಯಾಸವು ಬೊಂಬಾಟ್ ಆಗಿದೆ. 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 622 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್‌, 12 ಸ್ಪೀಕರ್ ಸೌಂಡ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ರೇರ್ ಎಸಿ ವೆಂಟ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ನೂತನ 'ಸಿಯೆರಾ' ಸುರಕ್ಷತೆಯಿಂದಲೂ ಮನೆ ಮಾತಾಗಿದೆ. 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಕ್ಕೆ ಹ್ಯುಂಡೈ ಕ್ರೆಟಾ, ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

ಟಾಟಾ ಸಿಯೆರಾ ಇವಿ (Tata Sierra EV) ಕೂಡ ಮಾರಾಟಕ್ಕೆ ಬರಲಿದೆ:

ಇದು ಅತಿ ಶೀಘ್ರದಲ್ಲೇ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದೆ. 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಭರ್ತಿ ಚಾರ್ಜ್‌ನಲ್ಲಿ 538 ರಿಂದ 627 ಕಿಲೋಮಿಟರ್‌ವರೆಗೆ ರೇಂಜ್ (ಮೈಲೇಜ್) ಕೊಡುವ ಸಾಧ್ಯತೆಯಿದೆ.

Image Source: Wheels Escort (Youtube)

More from DriveSpark

Article Published On: Friday, December 12, 2025, 8:30 [IST]
English summary
New tata sierra suv reaching showroom details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+