Tata: 28 ಕಿ.ಮೀ ಮೈಲೇಜ್.. 2025ರ ಟಾಟಾ ಟಿಯಾಗೊ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು.. EMI ಏನು?

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ನವೀಕರಿಸಿದ 2025ರ 'ಟಿಯಾಗೊ' ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಿತ್ತು. ನೀವು ಹೊಚ್ಚ ಹೊಸ ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ನೂತನ ಟಾಟಾ ಟಿಯಾಗೊ ಉತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ನೂತನ ಕಾರಿನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ (Tata Tiago) ಹ್ಯಾಚ್‌ಬ್ಯಾಕ್‌, ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಎಕ್ಸ್ಇ (ಪೆಟ್ರೋಲ್) ರೂಪಾಂತರ, ರೂ.6 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಈ ಕಾರನ್ನು ರೂ.2 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.4 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ.8,000 ವರೆಗೆ ಇಎಂಐ ಕಟ್ಟಬೇಕು.

New Tata Tiago On Road Price And Emi Details

ಈ ಕಾರಿನ ಎಕ್ಸ್ಎಂ ರೂಪಾಂತರ, ರೂ.7 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಇದನ್ನು ರೂ.2 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿ ಮಾಡಿದರೆ, ರೂ.5 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.10,000 ವರೆಗೆ ಇಎಂಐ ಪಾವತಿ ಮಾಡಬೇಕು.

ಟಾಟಾ ಟಿಯಾಗೊ ಎಕ್ಸ್‌ಟಿ ರೂಪಾಂತರ, ರೂ.7.80 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಈ ಕಾರನ್ನು ರೂ.2 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.5.80 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ.11,800 ವರೆಗೆ ಇಎಂಐ ಕಟ್ಟಬೇಕು.

ನೂತನ ಟಿಯಾಗೊ ಕಾರಿನ ಎಕ್ಸ್‌ಝಡ್ಎ ರೂಪಾಂತರ, ರೂ.9.20 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಪಡೆದಿದೆ. ಇದನ್ನು ರೂ.2 ಲಕ್ಷ ಡೌನ್-ಪೇಮೆಂಟ್ ಕಟ್ಟಿ ತೆಗೆದುಕೊಂಡಿದರೆ, ರೂ.7.20 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿಯನ್ನು ಹಾಕಿ, 5 ವರ್ಷದ ಅವಧಿಗೆ ಮಾಸಿಕ ರೂ.14,600 ವರೆಗೆ ಇಎಂಐ ಪಾವತಿಸಬೇಕು.

ಈ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಎಕ್ಸ್‌ಝಡ್ ಸಿಎನ್‌ಜಿ ರೂಪಾಂತರ, ರೂ.9.80 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಈ ಕಾರನ್ನು ರೂ.2 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.7.80 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ.15.800 ವರೆಗೆ ಇಎಂಐ ಕಟ್ಟಬೇಕು.

ಹೊಸ ಟಾಟಾ ಟಿಯಾಗೊ ಕಾರು, ಶಕ್ತಿಯುತ ಎರಡು ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1.2-ಲೀ. ಪೆಟ್ರೋಲ್ ಮತ್ತು 1.2-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 19.43 ರಿಂದ 28.06 ಕೆಎಂಪಿಎಲ್‌ವರೆಗೂ ಮೈಲೇಜ್ ಕೂಡ ನೀಡುತ್ತದೆ.

ಈ ಕಾರು, 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ನಾವಿಲ್ಲಿ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಕೆಲವು ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Thursday, January 30, 2025, 19:12 [IST]
English summary
New tata tiago on road price and emi details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+