Toyota: ಹೊಸ ಟೊಯೊಟಾ ಕಾರಿನ ಕುರಿತ ಪ್ರಮುಖಾಂಶಗಳಿವು.. ಬೆಲೆ ಎಷ್ಟಿರಲಿದೆ, ವಿಶೇಷತೆಗಳೇನು?

ಟೋಕಿಯೋದಲ್ಲಿ ಏರ್ಪಡಿಸಿದ್ದ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ಟೊಯೊಟಾ ಮೋಟಾರ್ ಕಾರ್ಪೊರೇಷನ್, ವಿವಿಧ ಕಾರುಗಳನ್ನು ಪ್ರದರ್ಶಿಸಿದೆ. ವಿಶೇಷವಾಗಿ 'ಬೇಬಿ ಲ್ಯಾಂಡ್ ಕ್ರೂಸರ್' ಎಂದೇ ಬಣ್ಣಿಸಲಾದ ಹೊಚ್ಚ ಹೊಸ ಟೊಯೊಟಾ ಎಫ್‌ಜೆ ಕ್ರೂಸರ್ (Toyota FJ Cruiser) ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ವಿನ್ಯಾಸ (Design):

ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಬಾಕ್ಸಿ ಸ್ಟೈಲ್ ಬಾಡಿಯನ್ನು ಪಡೆದಿದೆ. ಸ್ಪೋರ್ಟಿ ಬಂಪರ್, ಎಲ್‌ಇಡಿ ಹೆಡ್‌ಲೈಟ್‌ಗಳು, 'ಸಿ' ಆಕಾರದಲ್ಲಿರುವ ಎಲ್‌ಇಡಿ ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್‌ಗಳು, ಅಲಾಯ್ ವೀಲ್‌ಗಳು, ಫ್ಲೇರ್ಡ್ ಫೆಂಡರ್‌ಗಳು, ರೂಫ್ ರೈಲ್‌ಗಳು, ವಿಂಡ್‌ಸ್ಕ್ರೀನ್, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು & ಟೈಲ್‌ಗೇಟ್ ಮೌಂಟೆಡ್ ಸ್ಪೇರ್-ವೀಲ್‌ನ್ನು ಒಳಗೊಂಡಿದೆ.

New Toyota FJ Cruiser Suv Top Things

ಸುತ್ತಳತೆ (Dimension):

ನೂತನ 'ಟೊಯೊಟಾ ಎಫ್‌ಜೆ ಕ್ರೂಸರ್' ನೋಡಲು ಚಿಕ್ಕದಾಗಿ ಕಂಡರೂ ವಿಶಾಲ ಗಾತ್ರದಲ್ಲಿದೆ. 4,575 ಮಿ.ಮೀ ಉದ್ದ, 1,855 ಮಿ.ಮೀ ಅಗಲ ಮತ್ತು 1,960 ಮಿ.ಮೀ ಎತ್ತರವಿದೆ. ಜೊತೆಗಿದು 215 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,580 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಈ ಕಾರು 5 ಆಸನಗಳನ್ನು ಪಡೆದಿದ್ದು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಕರು ಸುಲಭವಾಗಿಯೂ ಸಂಚಾರ ಮಾಡಬಹುದು. ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.

New Toyota FJ Cruiser Suv Top Things

ಕಾರ್ಯಕ್ಷಮತೆ (Performance):

ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 2.7-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಪಡೆದಿದೆ. 163 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 246 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಇಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 4ಡಬ್ಲ್ಯೂಡಿ (4-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ವೈಶಿಷ್ಟ್ಯಗಳು (Features):

ಹೊಸ 'ಟೊಯೊಟಾ ಎಫ್‌ಜೆ ಕ್ರೂಸರ್' ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್, 3 ಸ್ಪೋಕ್ ಸ್ಟೀರಿಂಗ್ ವೀಲ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ರೌಂಡ್ ಎಸಿ ವೆಂಟ್‌ಗಳನ್ನು ಹೊಂದಿದೆ.

ಬೆಲೆ & ಲಭ್ಯತೆ (Price & Availability):

ಈ ಕಾರು ಜಪಾನ್‌ನಲ್ಲಿ 2026ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ 2028ರಲ್ಲಿ ಭಾರತದ ಮಾರುಕಟ್ಟೆಯಲ್ಲಿಯೂ ಕೂಡ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಬಹುಮುಖ್ಯವಾಗಿ ನೂತನ 'ಟೊಯೊಟಾ ಎಫ್‌ಜೆ ಕ್ರೂಸರ್' ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ವರದಿಯಾಗಿದೆ.

ವಾರ್ಷಿಕ 89,000 ಯುನಿಟ್ ಕಾರುಗಳನ್ನು ಉತ್ಪಾದಿಸಲು ಕಂಪನಿಯು ಯೋಜಿಸಿದೆ. ಅದರಲ್ಲಿ 40,000 ಯುನಿಟ್‌ಗಳನ್ನು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲು ಸಹ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ದೇಶೀಯವಾಗಿ ಹೊಸ 'ಟೊಯೊಟಾ ಎಫ್‌ಜೆ ಕ್ರೂಸರ್' ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.30 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರತಿಸ್ಪರ್ಧಿ ಕಾರುಗಳು (Rival Cars):

'ಟೊಯೊಟಾ ಎಫ್‌ಜೆ ಕ್ರೂಸರ್' ಕಾರಿಗೆ ಯಾವುದೇ ನೇರವಾದ ಎದುರಾಳಿ ಇಲ್ಲ. ಆದರೂ ಆಫ್-ರೋಡ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ ರಾಕ್ಸ್‌ (Mahindra Thar Roxx), ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಹಾಗೂ ಫೋರ್ಸ್ ಗೂರ್ಖಾ (Force Gurkha) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

More from DriveSpark

Article Published On: Friday, October 31, 2025, 13:32 [IST]
English summary
New toyota fj cruiser suv top things
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+