Hyundai: ಇತ್ತೀಚೆಗೆ ಬಿಡುಗಡೆಯಾದ ಹೊಸ 7-ಸೀಟರ್ ಹ್ಯುಂಡೈ ಕಾರಿನ ಟಾಪ್ ವಿಶೇಷತೆಗಳು

ಹುಂಡೈ (Hyundai) ಇತ್ತೀಚೆಗೆ ತನ್ನ ಅಲ್ಕಜಾರ್ (ALCAZAR)ಗೆ ಗಮನಾರ್ಹ ಅಪ್‌ಡೇಟ್‌ಗಳನ್ನು ನೀಡಿ ಅಲ್ಕಜಾರ್ ಕಾರ್ಪೊರೇಟ್ 7-ಸೀಟರ್ ಡೀಸೆಲ್ MT ಹಾಗೂ ಪ್ರೆಸ್ಟೀಜ್ 7-ಸೀಟರ್ ಪೆಟ್ರೋಲ್ DCT ಎಂಬ ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ಇವು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕಂಪನಿಯು ಹ್ಯುಂಡೈ ಅಲ್ಕಜಾರ್ ಡೀಸೆಲ್ ಪವರ್‌ಟ್ರೇನ್‌ನಲ್ಲಿ ವಾಯಿಸ್-ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಹೊಸ ಕಾರ್ಪೊರೇಟ್ ವೇರಿಯೆಂಟ್ ಪರಿಚಯಿಸಿದೆ. ಈ ಹೊಸ ವೇರಿಯೆಂಟ್‌ಗಳ ಕುರಿತು ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಹೊಸ ವೇರಿಯೆಂಟ್‌ಗಳ ಬೆಲೆಗಳನ್ನು ನೋಡುವುದಾದರೆ, ಅಲ್ಕಾಜರ್ ಕಾರ್ಪೊರೇಟ್ 7S ಡೀಸೆಲ್ AT ವೇರಿಯೆಂಟ್ 19,28,700 (ಎಕ್ಸ್-ಶೋರೂಂ), ಅಲ್ಕಜಾರ್ ಪ್ರೆಸ್ಟೀಜ್ 7S ಪೆಟ್ರೋಲ್ DCT ಬೆಲೆಯು 18,63,700 ರೂ. (ಎಕ್ಸ್-ಶೋರೂಂ), ಅಲ್ಕಜಾರ್ ಕಾರ್ಪೊರೇಟ್ 7S ಡೀಸೆಲ್ MT ಬೆಲೆಯು 17,86,700 ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

newly-launched-hyundai-alcazar-new-corporate-variant-top-things

ವಿಶೇಷತೆಗಳು: ಪ್ರೀಮಿಯಂ ಅನುಕೂಲತೆಗಾಗಿ ಪುಶ್ ಬಟನ್ ಸ್ಟಾರ್ಟ್ ಹೊಂದಿರುವ ಸ್ಮಾರ್ಟ್ ಕೀ, ವಾಯಿಸ್ ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ ನೀಡಲಾಗಿದೆ. ಹೊರಾಂಗಣ ಪ್ರೀಮಿಯಂ ಆಗಿ ಕಾಣಲು R17 (D=436.6 mm) ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಬ್ರಿಡ್ಜ್ ಮಾದರಿಯ ರೂಫ್ ರೈಲ್ಸ್, ಕ್ವಾಡ್ ಬೀಮ್ LED ಹೆಡ್‌ಲ್ಯಾಂಪ್‌ಗಳು, ರನ್ನಿಂಗ್ LED ಇಂಡಿಕೇಟರ್ ನೀಡಲಾಗಿದೆ.

ಇವಿಷ್ಟೇ ಅಲ್ಲದೇ ಹೈ-ಟೆಕ್ ಫೀಚರ್ಸ್ ಭಾಗವಾಗಿ 10.25 ಇಂಚಿನ HD ಆಡಿಯೋ ವಿಡಿಯೋ ನ್ಯಾವಿಗೇಷನ್ ಸಿಸ್ಟಮ್, ಕ್ರ್ಯಾಶ್‌ಪ್ಯಾಡ್, ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಲ್ಲಿ ಆಂಬಿಯೆಂಟ್ ಲೈಟ್ ಸೇರಿದಂತೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹ್ಯುಂಡೈ ಬ್ಲೂಲಿಂಕ್ (ಕನೆಕ್ಟೆಡ್ ಕಾರ್ ಟೆಕ್ನಾಲಜಿ), ಮುಂಭಾಗದ ಸಾಲಿನಲ್ಲಿ ವೈರ್‌ಲೆಸ್ ಚಾರ್ಜರ್ ನೀಡಲಾಗಿದೆ.

newly-launched-hyundai-alcazar-new-corporate-variant-top-things

ಪ್ರಯಾಣಿಕರ ಸುರಕ್ಷತೆಗಾಗಿ ಆಧುನಿಕ ಸುರಕ್ಷತಾ ಫೀಚರ್ಸ್ ಆಗಿರುವ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ - (VSM), 6 - ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ - (ESC), ಹಿಲ್ - ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ - (HAC) ನಂತಹ ಸೇಫ್ಟಿ ಫೀಚರ್ಸ್ ಅನ್ನು ಈ ಕಾರಿನಲ್ಲಿ ಒದಗಿಸಲಾಗಿದೆ.

ಹೊಸ ಅಪ್‌ಡೇಟ್‌ಗಳೊಂದಿಗೆ ಪರ್ಫಾಮೆನ್ಸ್, ತಂತ್ರಜ್ಞಾನ ಮತ್ತು ಅತ್ಯಾಧುನಿಕತೆಯನ್ನು ಬಯಸುವ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡುವ ಗುರಿ ಹೊಂದಿದ್ದೇವೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನಲ್ಲಿ, ನಾವು ನಿರಂತರವಾಗಿ ಗ್ರಾಹಕರ ಪ್ರತಿಕ್ರಿಯೆಯನ್ನು ಆಲಿಸುತ್ತಿದ್ದೇವೆ. ಅವರ ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ಉತ್ಪನ್ನ ಕೊಡುಗೆಗಳನ್ನು ವಿಕಸಿಸುತ್ತಿದ್ದೇವೆ.

newly-launched-hyundai-alcazar-new-corporate-variant-top-things

ವಾಯಿಸ್ ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ALCAZAR ಡೀಸೆಲ್‌ನಲ್ಲಿ ಕಾರ್ಪೊರೇಟ್ ವೇರಿಯೆಂಟ್ ಪರಿಚಯ ಮತ್ತು ಪ್ರೆಸ್ಟೀಜ್ ಪೆಟ್ರೋಲ್ ವೇರಿಯೆಂಟ್‌ನಲ್ಲಿ DCT ಸೇರ್ಪಡೆಯು ಹೆಚ್ಚು ಕ್ಸಟಮೈಸ್‌ಗೊಳಿಸಿದ ಮತ್ತು ಪ್ರೀಮಿಯಂ SUV ಅನುಭವವನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗರ್ಗ್ ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 6, 2025, 15:57 [IST]
English summary
Newly launched hyundai alcazar new corporate variant top things
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+