ಹ್ಯುಂಡೈ ಹೊಸ ಕಾರಿನ ಬಿಡುಗಡೆಗೆ ಸರ್ವ ಸಿದ್ಧ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರಗಡ್ ಎಸ್‌ಯುವಿ!

Next-gen Hyundai Venue spotted on test runs | ಭಾರತದಲ್ಲಿ ಹೊಸ ಕಾರುಗಳ ಆಗಮನಗಳು ಹೆಚ್ಚಾಗಿವೆ, ಒಂದೆಡೆ ಹೊಸ ಮಾಡಲ್‌ಗಳನ್ನು ವಾಹನ ತಯಾರಕರು ಬಿಡುಗಡೆ ಮಾಡುತ್ತಿದ್ದರೆ. ಮತ್ತೊಂದೆಡೆ ತಮ್ಮ ಜನಪ್ರಿಯ ಮಾದರಿಗಳನ್ನು ಅಧುನಿಕ ಡಿಸೈನ್ ಹಾಗೂ ಹಲವು ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯುಂಡೈನಿಂದ ಹೊರಬರಲಿರುವ ಹೊಸ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಕಾಣಿಸಿಕೊಂಡಿದೆ. 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಪರೀಕ್ಷೆಗಳನ್ನು ಜೋರಾಗಿ ನಡೆಸಲಾಗುತ್ತಿದೆ. ಇದು ಹ್ಯುಂಡೈಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿರುವ ಕಾರಣ ಈ ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

ಮುಂದಿನ ತಲೆಮಾರಿನ ಹ್ಯುಂಡೈ ವೆನ್ಯೂ 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಎರಡನೇ ತಲೆಮಾರಿನ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವೆನ್ಯೂ ಅನೇಕ ಬಾರಿ ಟೆಸ್ಟಿಂಗ್ ಮಾಡುವಾಗ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ. ಇತ್ತೀಚೆಗೆ ಎಸ್‌ಯುವಿಯ ಹೊಸ ಚಿತ್ರಗಳು ಹೊರಹೊಮ್ಮಿದೆ. ಹೊಸದಾಗಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿರುವ ಕಾರು ಬೇಸ್‌ ವೇರಿಯೆಂಟ್ ಎಂದು ತೋರುತ್ತದೆ.

Next-gen Hyundai Venue spotted on test runs

ಇದು ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದ್ದರೂ, ವ್ಹೀಲ್ ಕವರ್‌ಗಳೊಂದಿಗೆ ಸ್ಟೀಲ್ ರಿಮ್‌ಗಳು ಇರುವುದನ್ನು ನೋಡಬಹುದು. ಇದು ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್ ಮತ್ತು ಹೆಡ್ ಲ್ಯಾಂಪ್ ಸೆಟಪ್‌ನೊಂದಿಗೆ ಹೆಚ್ಚು ಸ್ಕ್ವೇರ್ಡ್-ಆಫ್ ವಿನ್ಯಾಸವನ್ನು ಪಡೆದುಕೊಂಡಿದೆ. ಇದಲ್ಲದೆ, ಹೆಡ್‌ಲೈಟ್‌ಗಳು ಕುತೂಹಲಕಾರಿಯಾಗಿ ಎಲ್ಇಡಿ ಬದಲಿಗೆ ಹ್ಯಾಲೋಜೆನ್ ಆಗಿವೆ.

ಪ್ರಸ್ತುತ ಮಾದರಿಯಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ರಿಯರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಹಾಗೆಯೇ ಹೊಸ ಮಾದರಿಗೂ ಸಾಗಿಸುವ ಸಾಧ್ಯತೆಯಿದೆ. ಹಿಂಭಾಗದಲ್ಲಿ, ಹೊಸ ವೆನ್ಯೂ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ ಗಳು, ಸಿಲ್ವರ್ - ಫಿನಿಶ್ಡ್ ಬಂಪರ್ ಮತ್ತು ಬ್ಲಾಕ್ ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿರುತ್ತದೆ.

Next-gen Hyundai Venue spotted on test runs

ಪ್ರಸ್ತುತ ಕಾರಿನಲ್ಲಿರುವ ಬಾಡಿ ಕಲರ್‌ಗೆ ಹೋಲಿಸಿದರೆ ಮುಂದಿನ ತಲೆಮಾರಿನ ಹ್ಯುಂಡೈ ವೆನ್ಯೂ ಕಾರಿನ ಹೆಚ್ಚಿನ ಟ್ರಿಮ್ ಮಟ್ಟಗಳು ಹೊಸ ಅಲಾಯ್ ವೀಲ್ ವಿನ್ಯಾಸ, ಹೆಚ್ಚು ಪ್ರಮುಖ ಕಪ್ಪು ಕ್ಲಾಡಿಂಗ್ ಮತ್ತು ಆಕರ್ಷಕ ಒಆರ್ ವಿಎಂಗಳನ್ನು ಪ್ರಸ್ತುತ ವಿನ್ಯಾಸದಿಂದ ಬೇರ್ಪಡಿಸುತ್ತವೆ. ಆದರೆ ಈ ಮಾದರಿಯು ಫ್ಲಶ್-ಟೈಪ್ ಡೋರ್ ಹ್ಯಾಂಡಲ್ ಗಳನ್ನು ಕೈಬಿಟ್ಟಿದೆ.

ಎಂಜಿನ್: ಹೊಸ ವೆನ್ಯೂ 82 ಬಿಹೆಚ್ ಪವರ್ ಹಾಗೂ 114 ಎನ್‌ಎಂ ಟಾರ್ಕ್ ಉತ್ಪಾದಿಸುವ ಅದೇ 1.2 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 114 ಬಿಹೆಚ್ ಪವರ್ ಹಾಗೂ 250 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಟ್ರಾನ್ಸ್ ಮಿಷನ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು ಕೆಲವು ಮಾದರಿಗಳಿಗೆ 7-ಸ್ಪೀಡ್ ಡಿಸಿಟಿಯನ್ನು ಒಳಗೊಂಡಿರುತ್ತದೆ. ಟಾಪ್ ವೇರಿಯೆಂಟ್‌ಗಳು ಪನೋರಮಿಕ್ ಸನ್ ರೂಫ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ದೊಡ್ಡ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಡಿಸ್ಪ್ಲೇಯನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಜೊತೆಗೆ ಅಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಲೆವೆಲ್ 1 ADAS ಪ್ಯಾಕೇಜ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ನಂತಹ ಸೇಫ್ಟಿ ಫೀಚರ್‌ಗಳು ಕೂಡ ಈ ಪಟ್ಟಿಯಲ್ಲಿನ ಇತರ ಸಂಭಾವ್ಯ ನವೀಕರಣಗಳಾಗಿವೆ. ರಿಯರ್ ಪಾರ್ಕಿಂಗ್ ಸೆನ್ಸರ್ ಗಳಂತಹ ಮೂಲಭೂತ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆಗಿ ಉಳಿದುಕೊಳ್ಳಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 2, 2025, 9:59 [IST]
English summary
Next gen hyundai venue spotted on test runs
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+