Hyundai: ದಿಪಾವಳಿಗೆ ಹೊಸ ಹ್ಯುಂಡೈ SUV ಬಿಡುಗಡೆ: ಟೆಸ್ಟಿಂಗ್ ವೇಳೆ ಸೆರೆ... ಕ್ರೆಟಾವನ್ನು ಮೀರಿಸುವ ಡಿಸೈನ್?

ಮುಂದಿನ ಪೀಳಿಗೆಯ ಹುಂಡೈ ವೆನ್ಯೂ (Next - Gen Hyundai Venue) ದೀಪಾವಳಿಯ ನಂತರ ಅಕ್ಟೋಬರ್ 24, 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಈ ಹೊಸ ಮಾಡಲ್ ಮೂರನೇ ಪೀಳಿಗೆಯ ವೆನ್ಯೂ (third - generation Venue) ಆಗಿದ್ದು, ಪವರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಅದೇ ಪರ್ಫಾಮೆನ್ಸ್ ಕಾಯ್ದುಕೊಳ್ಳುವ ಜೊತೆಗೆ ಗಮನಾರ್ಹ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ನವೀಕರಣಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಡುಗಡೆ ನಂತರ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ನಂತಹ ಪ್ರತಿಸ್ಪರ್ಧಿಗಳಿಗೆ ಸರಿಯಾದ ಪ್ರತಿಸ್ಪರ್ಧಿಯಾಗಲಿದೆ.

ಹೊಸ ಹುಂಡೈ ವೆನ್ಯೂ ವಿಶೇಷತೆಗಳು

ಮೂರನೇ ಪೀಳಿಗೆಯ ವೆನ್ಯೂ ಬಾಕ್ಸಿ ವಿನ್ಯಾಸ, ಆಯತಾಕಾರದ ಗ್ರಿಲ್, ಸ್ಪ್ಲಿಟ್-ಪ್ಯಾಟರ್ನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಹೊಸ ಬಂಪರ್‌ಗಳು ಮತ್ತು ದೊಡ್ಡ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳೊಂದಿಗೆ ಸಂಪೂರ್ಣವಾಗಿ ರೀ-ಡಿಸೈನ್ ಮಾಡಲಾದ ಹೊರಭಾಗ, ಇಂಟಿಗ್ರೇಟೆಡ್ ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ವರ್ಧಿತ ಸುರಕ್ಷತೆಗಾಗಿ ಸುಧಾರಿತ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ (ADAS) ಸಹ ಒಳಗೊಂಡಿರಲಿದೆ.

next-gen-hyundai-venue-suv-to-be-launched-for-diwali

ಇವಿಷ್ಟೆ ಅಲ್ಲದೆ ಹುಂಡೈ ಕ್ರೆಟಾದಿಂದ ಸ್ಫೂರ್ತಿ ಪಡೆದ ಬಾಹ್ಯ ವಿನ್ಯಾಸ, ಕ್ವಾಡ್ - ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಕನೆಕ್ಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್‌ಗಳು) ದಪ್ಪವಾದ ವೀಲ್ ಆರ್ಚ್ ಕ್ಲಾಡಿಂಗ್, ಮರು-ವಿನ್ಯಾಸಗೊಳಿಸಲಾದ ರೂಫ್ ರೈಲ್‌ಗಳು, ವಿಂಗ್ ಮಿರರ್‌ಗಳು ಮತ್ತು ಉದ್ದವಾದ ರೂಫ್ ಸ್ಪಾಯ್ಲರ್ ಹೊಂದಿದೆ.

ಒಳಾಂಗಣದ ವಿಷಯಕ್ಕೆ ಬಂದರೆ ಹುಂಡೈನ ಕ್ರೆಟಾ ಮತ್ತು ಅಲ್ಕಾಜಾರ್‌ನಿಂದ ಪ್ರೀಮಿಯಂ ವೈಶಿಷ್ಟ್ಯಗಳನ್ನು ಎರವಲು ಪಡೆಯುವ ನಿರೀಕ್ಷೆಯಿದೆ. ಉದಾಹರಣೆಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟುಗಳು, ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಡ್ಯುಯಲ್-ಟೋನ್ ಇಂಟೀರಿಯರ್ ಥೀಮ್‌ಗಳು ಇರಲಿವೆ.

next-gen-hyundai-venue-suv-to-be-launched-for-diwali

ಹೊಸ ಟೆಕ್ನಾಲಜಿ ವಿಷಯಕ್ಕೆ ಬಂದರೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಆಟೋ ಎಮರ್ಜನ್ಸಿ ಬ್ರೇಕಿಂಗ್, ನಾಲ್ಕು ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360 - ಡಿಗ್ರಿ ಕ್ಯಾಮೆರಾ ಸಿಸ್ಟಮ್ (ಟಾಪ್ ಟ್ರಿಮ್‌ಗಳು) ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ಎಡಿಎಎಸ್ ಸೂಟ್ ಪಡೆಯಲಿದೆ.

ಎಂಜಿನ್ ಆಯ್ಕೆಗಳು ಪ್ರಸ್ತುತ ಇರುವ ಮಾಡಲ್‌ನಂತೆ ಅದೇ 1.0 ಎಲ್ ಟರ್ಬೊ ಪೆಟ್ರೋಲ್ (120 bh ಪವರ್), 1.2 NA ಪೆಟ್ರೋಲ್ (83 bh ಪವರ್) ಹಾಗೂ 1.5 ಎಲ್ ಟರ್ಬೊ ಡೀಸೆಲ್ (100) bh ಪವರ್) ಎಂಜಿನ್ ಆಯ್ಕೆಗಳನ್ನು ಮುಂದುವರಿಸಲಿದೆ.

next-gen-hyundai-venue-suv-to-be-launched-for-diwali

ಟ್ರಾನ್ಸ್ಮಿಷನ್ ವಿಷಯಕ್ಕೆ ಬಂದರೆ 5 - ಸ್ಪೀಡ್ ಮ್ಯಾನುವಲ್, 6 - ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಟ್ರಾನ್ಸ್ಮಿಷನ್ (iMT), ಪೆಟ್ರೋಲ್ ವೇರಿಯೆಂಟ್‌ಗಳಿಗೆ 7 - ಸ್ಪೀಡ್ ಡ್ಯುಯಲ್ - ಕ್ಲಚ್ ಆಟೋಮ್ಯಾಟಿಕ್ ಮತ್ತು ಡೀಸೆಲ್‌ಗೆ 6 - ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್‌ನೊಂದಿಗೆ ಮುಂದುವರಿಯಲಿದೆ. ಹಾಗಾಗಿ ಯಾಂತ್ರಿಕವಾಗಿ ಯಾವುದೇ ಬದಲಾವಣೆ ಇರುವುದಿಲ್ಲ.

ಮುಂಬರುವ ಹ್ಯುಂಡೈ ವೆನ್ಯೂ ಸಂಪೂರ್ಣವಾಗಿ ಹೊಸ ವಿನ್ಯಾಸ, ನವೀಕರಿಸಿದ ವೈಶಿಷ್ಟ್ಯಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಅದೇ ವಿಶ್ವಾಸಾರ್ಹ ಎಂಜಿನ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ. ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ ಬಗ್ಗೆ ಇಲ್ಲಿ ನಾವು ತಿಳಿಸಿರುವ ಪ್ರಮುಖ ಬದಲಾವಣೆಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Saturday, August 9, 2025, 12:30 [IST]
English summary
Next gen hyundai venue suv to be launched for diwali
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+