ಮುಂದಿನ ಪೀಳಿಗೆಯ ಕಿಯಾ ಸೆಲ್ಟೋಸ್ ಡಿಸೆಂಬರ್ 10 ರಂದು ಜಾಗತಿಕ ಅನಾವರಣ

ಮುಂದಿನ ಪೀಳಿಗೆಯ ಕಿಯಾ ಸೆಲ್ಟೋಸ್ ಡಿಸೆಂಬರ್ 10, 2025 ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದ್ದು, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದಲ್ಲಿ ಪ್ರಮುಖ ನವೀಕರಣಗಳನ್ನು ತರಲಿದೆ. ಕಿಯಾ ಸೆಲ್ಟೋಸ್ ಹೊಸ ಮುಂಭಾಗ, ಸಂಭಾವ್ಯ ಹೈಬ್ರಿಡ್ ಆಯ್ಕೆಗಳು ಮತ್ತು ನವೀಕರಿಸಿದ ADAS 2.0 ಸೂಟ್ ಸುತ್ತಲೂ ಮಾರುಕಟ್ಟೆಯಲ್ಲಿ ಈ ಕಾರಿನ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಮುಂಬರುವ ಕಿಯಾ ಸೆಲ್ಟೋಸ್ ನ ನಿರೀಕ್ಷಿತ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಆಯ್ಕೆಗಳನ್ನು ಇಲ್ಲಿ ನೋಡೋಣ.

ಕಿಯಾ ಸೆಲ್ಟೋಸ್ ಅನ್ನು 2019 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು, ಅಂದಿನಿಂದ ಇದು ದೇಶದಲ್ಲಿ ಜನಪ್ರಿಯ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ಮುಂದುವರಿಯುತ್ತಿದೆ. ಈಗ, ಬ್ರ್ಯಾಂಡ್ ಕಿಯಾ ಸೆಲ್ಟೋಸ್ 2026 ಅನ್ನು ಡಿಸೆಂಬರ್ 10, 2025 ರಂದು ಕೊರಿಯಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಕಿಯಾ ಸೆಲ್ಟೋಸ್ 2026 ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ಪಡೆಯಲು ಸಜ್ಜಾಗಿದೆ.

next-gen-kia-seltos-to-be-unveiled-globally-on-december-10

ಹೊಸ ಮುಂಭಾಗದ ವಿನ್ಯಾಸ: ಲಂಬವಾದ ಸ್ಲ್ಯಾಟ್‌ಗಳೊಂದಿಗೆ ನೇರವಾದ ಗ್ರಿಲ್, 3-ಪಾಡ್ LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ DRLಗಳು, ಮಸ್ಕುಲರ್ ಬಂಪರ್ ಮರುವಿನ್ಯಾಸ, ಪೂರ್ಣ-ಅಗಲದ LED ಟೈಲ್‌ಲೈಟ್‌ಗಳು ಮತ್ತು ಪರಿಷ್ಕೃತ ಅಲಾಯ್ ವೀಲ್‌ಗಳು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರಿನ ಆಧುನಿಕ ಮತ್ತು ಆಕ್ರಮಣಕಾರಿ ಆಕರ್ಷಣೆಯನ್ನು ಹೆಚ್ಚಿಸುತ್ತವೆ.

ಹೊಸ ಫೀಚರ್ಸ್: ಮುಂದಿನ ತಲೆಮಾರಿನ ಕಿಯಾ ಸೆಲ್ಟೋಸ್ ಕ್ಯಾಬಿನ್ ಒಳಗೆ ಕೆಲವು ಪ್ರಮುಖ ಬದಲಾವಣೆಗಳಾಗಿರುವ ನಿರೀಕ್ಷೆಯಿದೆ, ಕಾರಿನಲ್ಲಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡಲಿದೆ. ಜೊತೆಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರುವ ಹೊಸ ದೊಡ್ಡ ಟಚ್ ಸ್ಕ್ರೀನ್ ಆಧಾರಿತ ಇನ್ಫೋಟೈನ್ ಮೆಂಟ್ ಸಿಸ್ಟಮ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

next-gen-kia-seltos-to-be-unveiled-globally-on-december-10

ಹಾಗೆಯೇ ಹೊಸ ಆಂಬಿಯೆಂಟ್ ಲೈಟಿಂಗ್, ಕನೆಕ್ಟೆಡ್ ಕಾರ್ ಫೀಚರ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪನೋರಮಿಕ್ ಸನ್ ರೂಫ್, ಆರು ಏರ್ ಬ್ಯಾಗ್‌ಗಳು ಮತ್ತು ಫುಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಪಡೆಯುವ ನಿರೀಕ್ಷೆಯಿದೆ. ಮುಂಭಾಗದ ವಿಂಡ್ ಸ್ಕ್ರೀನ್‌ನಲ್ಲಿರುವ ಎಡಿಎಎಸ್ ರಾಡಾರ್ ಮಾಡ್ಯೂಲ್' ಕಿಯಾ ಸೆಲ್ಟೋಸ್ ಲೆವೆಲ್ -2 ಎಡಿಎಎಸ್ ಸೂಟ್ ಅನ್ನು ಸಹ ಪಡೆಯಲಿದೆ ಎಂಬುದಕ್ಕೆ ಸಾಕ್ಷ್ಯವಾಗಿದೆ.

ADAS 2.0 & ಸುಧಾರಿತ ಸುರಕ್ಷತೆ: ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್‌ನಂತಹ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ADAS ಲೆವೆಲ್ 2 ಸೂಟ್ ಬರಲಿದೆ. ಈ ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳು ಸುಧಾರಿತ ಹೆದ್ದಾರಿ ಸುರಕ್ಷತೆ ಮತ್ತು ನಗರ ಅನುಕೂಲಕ್ಕಾಗಿ ಪರಿಚಯಿಸುವ ಸಾಧ್ಯತೆ ಇದೆ.

next-gen-kia-seltos-to-be-unveiled-globally-on-december-10

ಎಂಜಿನ್ ಆಯ್ಕೆ: ಪ್ರಸ್ತುತ ಕಿಯಾ ಸೆಲ್ಟೋಸ್ 3 ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇದರ ಜೊತೆಗೆ ಹೊಸ ತಲೆಮಾರಿನ ಮಾದರಿಯು 1 ಹೊಸ ಎಂಜಿನ್ ಆಯ್ಕೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ತಲೆಮಾರಿನ ಕಿಯಾ ಸೆಲ್ಟೋಸ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಬಿಹೆಚ್ ಪವರ್ ಉತ್ಪಾದಿಸುತ್ತದೆ.

ಮತ್ತೊಂದು ಆಯ್ಕೆಯಲ್ಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 160 ಎಚ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1.5-ಲೀಟರ್ ಡೀಸೆಲ್ ಎಂಜಿನ್ 116 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಇವು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇವುಗಳ ಜೊತೆಗೆ 1.5-ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಆಯ್ಕೆಯನ್ನು ಈ ಬಾರಿ ಪರಿಚಯಿಸುವ ನಿರೀಕ್ಷೆಯಿದೆ.

ಮುಂಬರುವ ಸೆಲ್ಟೋಸ್ ಭಾರತದ ತೀವ್ರ ಪೈಪೋಟಿಯ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಕಿಯಾಗೆ ಮಹತ್ವದ ಹೆಜ್ಜೆಯಾಗಿದೆ, ಇದು ಮುಂದಿನ ಪೀಳಿಗೆಯ ತಂತ್ರಜ್ಞಾನ, ಸುರಕ್ಷತೆ ಮತ್ತು ದಿಟ್ಟ ವಿನ್ಯಾಸವನ್ನು ಮಿಶ್ರಣ ಮಾಡುತ್ತದೆ. ಮುಂದಿನ ತಲೆಮಾರಿನ ಕಿಯಾ ಸೆಲ್ಟೋಸ್ ಹೊಸ ಫ್ರಂಟ್ ಫ್ಯಾಸಿಯಾದಿಂದ ಎಡಿಎಎಸ್ 2.0 ವರೆಗೆ ತರಲಿರುವ ಹೊಸ ನವೀಕರಣಗಳು ಯಾವ ಮಟ್ಟಿಗೆ ಯಶಸ್ಸು ಕಾಣಲಿವೆ ಕಾದುನೋಡಬೇಕು.

More from DriveSpark

Article Published On: Monday, November 24, 2025, 12:19 [IST]
English summary
Next gen kia seltos to be unveiled globally on december 10
Read more on kia motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+