ಸೇರಿಗೆ ಸವ್ವಾ ಸೇರು: ಮುರಿದುಬಿದ್ದ ಮಾತುಕತೆ.. 60 ಬಿಲಿಯನ್ ಡಾಲರ್ ಕಂಪನಿ ಆಸೆಗೆ ಎಳ್ಳು ನೀರು!
ಅಂತರರಾಷ್ಟ್ರೀಯ ಕಾರು ಮಾರುಕಟ್ಟೆಯಲ್ಲಿ ಅಮೆರಿಕದ ಎಲಾನ್ ಮಸ್ಕ್ ಒಡೆತನದ ಟೆಸ್ಲಾ (Tesla) ಹಾಗೂ ಚೀನಾ ಮೂಲದ ಬಿವೈಡಿ (BYD) ಕಂಪನಿಗಳು ದೊಡ್ಡ ಮಟ್ಟದ ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುತ್ತಿವೆ. ಈ ಕಂಪನಿಗಳ ಓಟಕ್ಕೆ ಇತಿಶ್ರೀ ಹಾಕಲು ಜಪಾನ್ ಕಾರು ತಯಾರಕ ಕಂಪನಿಗಳಾದ ಹೋಂಡಾ (Honda) ಹಾಗೂ ನಿಸ್ಸಾನ್ (Nissan) ಕಂಪನಿಗಳು ಒಟ್ಟಿಗೆ ವಿಲೀನಗೊಳ್ಳಲು ಮಾತುಕತೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೀಗ ಈ ಮಾತುಕತೆಯೇ ಮುರಿದುಬಿದ್ದಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಜಪಾನ್‌ನ ವಾಹನ ಮಾರುಕಟ್ಟೆಯಲ್ಲಿ ಟೊಯೊಟಾ (Toyota) ಕಂಪನಿಯು ಮೊದಲನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹೋಂಡಾ ಹಾಗೂ ಮೂರನೇ ಸ್ಥಾನದಲ್ಲಿ ನಿಸ್ಸಾನ್ ಇದೆ. ಹೋಂಡಾ & ನಿಸ್ಸಾನ್ ಕಂಪನಿಗಳು ಒಂದಾಗುವುದರಿಂದ ಆಟೋಮೋಟಿವ್ ಉದ್ಯಮ ವಲಯದಲ್ಲಿ ಬೃಹತ್ ಕ್ರಾಂತಿಗೆ ಕಾರಣವಾಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಸದ್ಯಕ್ಕೆ ಆ ಕನಸು ನನಸಾಗುತ್ತಿಲ್ಲ.

ಹೋಂಡಾ ಮತ್ತು ನಿಸ್ಸಾನ್ ಒಟ್ಟಿಗೆ ಸೇರಿ, 60 ಬಿಲಿಯನ್ ಡಾಲರ್ ಮೌಲ್ಯದ ಹೊಸ ಕಂಪನಿ ಸೃಷ್ಟಿಸುವ ಯೋಜನೆಗೆ ಅಂತ್ಯ ಹಾಡಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಹೋಂಡಾ, ನಿಸ್ಸಾನ್ ಕಂಪನಿಗೆ ತನ್ನ ಅಂಗ ಸಂಸ್ಥೆಯಾಗಬೇಕು ಎಂಬ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಇದನ್ನು ನಿಸ್ಸಾನ್ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಜೊತೆಗೆ ನಾನಾ ಕಾರಣಗಳಿಗೆ ಎರಡು ಕಂಪನಿಗಳು ಮಾತುಕತೆಯನ್ನು ಕೊನೆಗಾಣಿಸಿವೆ ಎಂದು ತಿಳಿದುಬಂದಿದೆ.
2024ರ ಮಾರ್ಚ್‌ವರೆಗೆ ನಿಸ್ಸಾನ್ ಕಂಪನಿಯು ಬರೋಬ್ಬರಿ 568.7 ಬಿಲಿಯನ್ ಯೆನ್ ಮತ್ತು ಹೋಂಡಾ 1.382 ಟ್ರಿಲಿಯನ್ ಯೆನ್ ಲಾಭ ಮಾಡಿದ್ದವು. ಪ್ರಮುಖವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದ್ದ ಈ ಕಂಪನಿಗಳು, ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಹೆಚ್ಚು ತೊಡಗಿಕೊಳ್ಳಲು ಹಲವು ಯೋಜನೆಗಳನ್ನು ರೂಪಿಸಿದ್ದವು.
ಇನ್ನು ಈ ಮೊದಲ ನಿಸ್ಸಾನ್ ಹಾಗೂ ಹೋಂಡಾದ ವಿಲೀನ ಮಾತುಕತೆಯನ್ನು ಕಂಡಿದ್ದ ನಿಪುಣರು, ಜಪಾನ್‌ನ ಎರಡನೇ ಮತ್ತು ಮೂರನೇ ಅತಿದೊಡ್ಡ ಕಾರು ತಯಾರಕರ ಕಂಪನಿಗಳು ಒಂದಾಗಲು ಮುಂದಾಗಿವೆ. ಇದು ಆಟೋಮೋಟಿವ್ ಉದ್ಯಮದಲ್ಲಿ ಹೊಸ ಯುಗಕ್ಕೂ ನಾಂದಿಯಾಗಬಹುದು ಎಂದಿದ್ದರು. ಆದರೀಗ ಎಲ್ಲದಕ್ಕೂ ಇತಿಶ್ರೀ ಬಿದ್ದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications