ವಿಭಾಗದಲ್ಲಿಯೇ ಮೊದಲ 5-ಸ್ಟಾರ್ ರೇಟಿಂಗ್ ಹ್ಯಾಚ್‌ಬ್ಯಾಕ್‌: 10 ವರ್ಷ ವಾರೆಂಟಿ ಘೋಷಿಸಿದ ಕಂಪನಿ

ನಿಸ್ಸಾನ್ ಮೋಟಾರ್ (Nissan Motor) ಇಂಡಿಯಾ ಕಂಪನಿಯು ಭಾರತದ B - SUV (ಹ್ಯಾಚ್‌ಬ್ಯಾಕ್‌) ವಿಭಾಗದಲ್ಲಿ ಇದೇ ಮೊದಲ ಬಾರಿಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಪರಿಚಯಿಸಿದ್ದು, ತನ್ನ ಹೊಸ ನಿಸ್ಸಾನ್ ಮ್ಯಾಗ್ನೈಟ್‌ ಮೇಲೆ ಈ ಸೌಲಭ್ಯ ಒದಗಿಸುತ್ತಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್‌ ಪ್ರಯಾಣಿಕರ ಸುರಕ್ಷತೆಗೆ 5-ಸ್ಟಾರ್ ರೇಟಿಂಗ್ ಮತ್ತು ಎಓಪಿ (ವಯಸ್ಕ ಪ್ರಯಾಣಿಕರ ಸುರಕ್ಷತೆ) ವಿಭಾಗದಲ್ಲಿ ಪರಿಪೂರ್ಣ 5-ಸ್ಟಾರ್ ರೇಟಿಂಗ್‌ ಅನ್ನು ಪಡೆದುಕೊಂಡಿದ್ದು, ಈ ವಾಹನಕ್ಕೆ ಹೊಸ ಸೌಲಭ್ಯ ಒದಗಿಸುತ್ತಿರುವುದು ಗಮನಾರ್ಹವಾಗಿದೆ.

ಈ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದು, ಇದನ್ನು 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ 10 ವರ್ಷಗಳು/2 ಲಕ್ಷ ಕಿ.ಮೀ ವರೆಗಿನ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಕಿ.ಮೀಗೆ 22 ಪೈಸೆ ಅಥವಾ ಪ್ರತಿ ದಿನಕ್ಕೆ 12 ರೂ. ಬೆಲೆಯಲ್ಲಿ ಸಂಪೂರ್ಣ ರಕ್ಷಣೆ ದೊರೆಯುತ್ತದೆ ಎಂದು ನಿಸ್ಸಾನ್ ತಿಳಿಸಿದೆ.

nissan-introduces-10-year-extended-warranty-plan-for-new-nissan-magnite

ಈ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಲಭ್ಯವಿರುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಕ್ಟೋಬರ್ 2024ರಲ್ಲಿ ಬಿಡುಗಡೆಯಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಮೇಲೆ ದೊರೆಯುತ್ತದೆ. ವಿಸ್ತೃತ ವಾರಂಟಿ ಯೋಜನೆಯಲ್ಲಿ ಗ್ರಾಹಕರು ತಮ್ಮ ಅಗತ್ಯ ಮತ್ತು ಆದ್ಯತೆಗಳಿಗೆ ತಕ್ಕಂತೆ 3+4, 3+3, 3+2 ಮತ್ತು 3+1 ವರ್ಷಗಳ ಆಯ್ಕೆಗಳನ್ನು ಆಯ್ಕೆ ಮಾಡಬಹುದು.

ಈ ಯೋಜನೆಯಲ್ಲಿ ದೇಶಾದ್ಯಂತ ಸಂಪೂರ್ಣ ಕವರೇಜ್ ಲಭ್ಯವಿದ್ದು, ನಿಸ್ಸಾನ್‌ನ ಯಾವುದೇ ಅಧಿಕೃತ ಸೇವಾ ಕೇಂದ್ರಗಳಲ್ಲಿ ಕ್ಯಾಶ್‌ ಲೆಸ್ ರಿಪೇರಿ ಸೌಲಭ್ಯ ಹೊಂದಬಹುದು. ಕ್ಲೈಮ್‌ ಗಳಿಗೆ ಸಂಖ್ಯೆ ಅಥವಾ ಮೌಲ್ಯದ ಮೇಲೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಹಾಗಾಗಿ ರಿಪೇರಿ ವೆಚ್ಚಗಳಲ್ಲಿ ಗಣನೀಯ ಉಳಿತಾಯ ಮಾಡಬಹುದು.

nissan-introduces-10-year-extended-warranty-plan-for-new-nissan-magnite

ವಿಶೇಷವಾಗಿ ರಿಪೇರಿಗೆ ನಿಸ್ಸಾನ್ ನ ಒರಿಜಿನಲ್ ಸ್ಪೇರ್ ಪಾರ್ಟ್ಸ್ ಬಳಸಿಕೊಂಡು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತದೆ. ವಿಸ್ತೃತ ವಾರಂಟಿ ಯೋಜನೆಯನ್ನು ನಿಸ್ಸಾನ್ ಫೈನಾನ್ಸ್ ಮೂಲಕ ಖರೀದಿಸಬಹುದು. ಹೊಸ ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿಯಿಂದ 5 - ಸ್ಟಾರ್ ಪ್ಯಾಸೆಂಜರ್ ಸೇಫ್ಟಿ ರೇಟಿಂಗ್ ಪಡೆದಿದ್ದು, ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದೊರೆಯುವ ಅತ್ಯಂತ ಸುರಕ್ಷಿತ ಎಸ್‌ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಗೆ ಪಡೆದಿದೆ.

ಅತ್ಯಾಧುನಿಕ ಸಿಎಂಎಫ್ ಎ+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿತವಾದ ಹೊಸ ನಿಸ್ಸಾನ್ ಮ್ಯಾಗ್ನೈಟ್ ಅನ್ನು 2014ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವಾಹನವು 6 ಏರ್‌ಬ್ಯಾಗ್‌ಗಳು, 67% ಹೈ ಟೆನ್ಸೈಲ್ ಸ್ಟ್ರೆಂತ್ ಸ್ಟೀಲ್, ಎಬಿಎಸ್ + ಇಬಿಡಿ, ಇ.ಎಸ್.ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಸ್ ಸೇರಿದಂತೆ 40ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

nissan-introduces-10-year-extended-warranty-plan-for-new-nissan-magnite

ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಮಾತನಾಡಿ, "ನಮ್ಮ ಹೊಸ ನಿಸ್ಸಾನ್ ಮ್ಯಾಗ್ನೈಟ್ ಗೆ ಗ್ಲೋಬಲ್ ಎನ್‌ಸಿಎಪಿನಿಂದ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಭಾರತದ ಅತ್ಯಂತ ಸುರಕ್ಷಿತ ಬಿ - ಎಸ್‌ಯುವಿಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಒಂದಾಗಿದೆ ಎಂದು ಹೇಳಲು ನಮಗೆ ಸಂತೋಷವಿದೆ.

ಈಗ ಈ ವಾಹನದ ಮೇಲೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯನ್ನು ಒದಗಿಸಲಾಗುತ್ತಿದ್ದು, ಗ್ರಾಹಕರಿಗೆ ಒಂದು ದಶಕದವರೆಗೆ ಯಾವುದೇ ಚಿಂತೆ ಇಲ್ಲದೆ ವಾಹನ ಮಾಲೀಕತ್ವ ಹೊಂದಲು ಅನುವು ಮಾಡಿಕೊಡುತ್ತಿದ್ದೇವೆ. ನಮ್ಮ ಗ್ರಾಹಕರು ಯಾವುದೇ ಚಿಂತೆಯಿಲ್ಲದೆ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಖರೀದಿಸಬಹುದು" ಎಂದು ಹೇಳಿದರು.

ನಿಸ್ಸಾನ್ ಮೋಟಾರ್ ಇಂಡಿಯಾ ಇತ್ತೀಚೆಗೆ ತನ್ನ ಬಹುನೀರಿಕ್ಷಿತ ನ್ಯೂ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಿದೆ. ಡಾರ್ಕ್ ಬ್ಲಾಕ್ ಬಣ್ಣದೊಂದಿಗೆ ಸಿಗುವ ಈ ಆವೃದತ್ತಿಯು 8.30 ಲಕ್ಷ ರೂ. (ಎಕ್ಸ್-ಶೋರೂಮ್, ದೆಹಲಿ) ಆರಂಭಿಕ ಬೆಲೆಯಲ್ಲಿ ದೊರೆಯುತ್ತದೆ. ಕಪ್ಪು ಥೀಮ್ ನ ಒಳಾಂಗಣ ಮತ್ತು ಹೊರಾಂಗಣವನ್ನು ಹೊಂದಿದೆ.

More from DriveSpark

Article Published On: Wednesday, August 13, 2025, 12:33 [IST]
English summary
Nissan introduces 10 year extended warranty plan for new nissan magnite
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+