ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ CNG ವಿಶೇಷತೆಗಳು: 74,999 ರೂ. ಸಾಕು!

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ, ಹೆಚ್ಚಿನ ಮೈಲೇಜ್ ನೀಡುವ ಈ ಸಿಎನ್‌ಜಿ ಕಾರುಗಳು ಪರಿಸರ ಸ್ನೇಹಿಯೂ ಹೌದು. ಇದೇ ಕಾರಣಕ್ಕೆ ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಇಂಧನ ಚಾಲಿತ ಕಾರುಗಳ ಸಿಎನ್‌ಜಿ ಆವೃತ್ತಿಗಳನ್ನು ಪರಿಚಯಿಸುತ್ತಿವೆ. ಇದೀಗ ಈ ಸಾಲಿಗೆ ನಿಸ್ಸಾನ್ ಕೂಡ ಸೇರಿದೆ, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಹಾಗೂ ಕಂಪನಿಗೆ ಉತ್ತಮ ಲಾಭ ತಂದುಕೊಡುತ್ತಿರುವ ಮ್ಯಾಗ್ನೈಟ್ ಅನ್ನು ಈಗ ಸಿಎನ್‌ಜಿ ಕಿಟ್‌ನೊಂದಿಗೆ ಪರಿಚಯಿಸಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗ ಸರ್ಕಾರಿ ಅನುಮೋದಿತ CNG ರೆಟ್ರೋಫಿಟ್‌ಮೆಂಟ್ ಕಿಟ್‌ನೊಂದಿಗೆ ಲಭ್ಯವಿದೆ.

ನಿಸ್ಸಾನ್ ಮ್ಯಾಗ್ನೈಟ್ CNG ಕಿಟ್ ಅನ್ನು ದೇಶದ ನಿಯಂತ್ರಕ ಮಾನದಂಡಗಳ ಪ್ರಕಾರ 'ಮೋಟೋಜೆನ್' ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ತಯಾರಿಸಿದೆ. ಮೊದಲ ಹಂತದಲ್ಲಿ ನಿಸ್ಸಾನ್ ಗ್ರಾಹಕರು ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ-NCR, ಹರಿಯಾಣ, ಗುಜರಾತ್, ಕೇರಳ ಮತ್ತು ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ನಿಸ್ಸಾನ್ ಅಧಿಕೃತ ಡೀಲರ್‌ಶಿಪ್‌ಗಳ ಮೂಲಕ CNG ಕಿಟ್‌ ಆರ್ಡರ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

nissan-magnite-cng-retrofitment-kit-top-things

CNG ಕಿಟ್ ಫಿಟ್‌ಮೆಂಟ್‌ನ್ನು ಮುಂಬರುವ ದಿನಗಳಲ್ಲಿ ದೇಶಾದ ಇತರ ರಾಜ್ಯಗಳಲ್ಲಿಯೂ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಸಂಪೂರ್ಣ ರೆಟ್ರೋಫಿಟ್‌ಮೆಂಟ್ ರೂ. 74,999 ಹೆಚ್ಚುವರಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸಿಎನ್‌ಜಿ ಕಿಟ್‌ಗಳ ಫಿಟ್‌ಮೆಂಟ್ ಅನ್ನು ಸರ್ಕಾರಿ - ಅಧಿಕೃತ ಫಿಟ್‌ಮೆಂಟ್ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ.

ಹೊಸ ನಿಸ್ಸಾನ್ ಮ್ಯಾಗ್ನೈಟ್ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಸಿಎನ್‌ಜಿ ಕಿಟ್ ಲಭ್ಯವಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಪ್ರಮಾಣೀಕೃತ CNG ಕಿಟ್ ರೆಟ್ರೋಫಿಟ್‌ಮೆಂಟ್ 3 ವರ್ಷ ಅಥವಾ 1 ಲಕ್ಷ ಕಿ.ಮೀ. ವಾರೆಂಟಿಯೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

nissan-magnite-cng-retrofitment-kit-top-things

ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವ ದೃಷ್ಟಿಯಿಂದ, ನಿಸ್ಸಾನ್ ಡೀಲರ್‌ಗಳು ಸರ್ಕಾರ - ಅನುಮೋದಿತ ಸಿಎನ್‌ಜಿ ರೆಟ್ರೋಫಿಟ್‌ಮೆಂಟ್ ಕಿಟ್‌ನ ರೂಪದಲ್ಲಿ ಪರ್ಯಾಯ ಇಂಧನ ಆಯ್ಕೆಯನ್ನು ಒದಗಿಸುತ್ತಾರೆ. ಇದನ್ನು ಗ್ರಾಹಕರಿಗೆ ಅಧಿಕೃತ ಫಿಟ್‌ಮೆಂಟ್ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ ಎಂದು ನಿರ್ದೇಶಕ ಸೌರಭ್ ವತ್ಸ ಹೇಳಿದರು.

ನಿಸ್ಸಾನ್ ಮ್ಯಾಗ್ನೈಟ್ ವಿಶೇಷತೆಗಳು: ಹೊಸ ನಿಸ್ಸಾನ್ ಮ್ಯಾಗ್ನೈಟ್ ಕೇವಲ ಭಾರತ ಮಾತ್ರವಲ್ಲದೆ ಈಗ 65 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟದಲ್ಲಿದೆ. ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವಿಸ್ತರಿಸುತ್ತಿರುವ ಜಾಗತಿಕ ವ್ಯಾಪ್ತಿಯೊಂದಿಗೆ ವೇರಿಯೆಂಟ್‌ಗೆ ಅನುಗುಣವಾಗಿ ಈ ಕಾರಿನಲ್ಲಿ 55 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು ಮತ್ತು 20 ಕ್ಕೂ ಹೆಚ್ಚು ಫೀಚರ್‌ಗಳು ಇವೆ.

nissan-magnite-cng-retrofitment-kit-top-things

ಒಟ್ಟಾರೆ ದೇಶದಲ್ಲಿ ಇಂಧನ ಬೆಲೆಗಳ ಏರಿಕೆಯು ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಟಾಟಾದಿಂದಿ ಹಿಡಿದು ಮಾರುತಿ ಸುಜುಕಿವರೆಗೆ ಬಹುತೇಕ ಕಂಪನಿಗಳು ಈಗ ಸಿಎನ್‌ಜಿ ಮಾದರಿಗಳನ್ನು ಒಳಗೊಂಡಿವೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಸಿಎನ್‌ಜಿ ಕಾರುಗಳು ಇನ್ನೂ ಹೆಚ್ಚಿನ ಡಿಮ್ಯಾಂಡ್ ಪಡೆದುಕೊಳ್ಳಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 31, 2025, 14:30 [IST]
English summary
Nissan magnite cng retrofitment kit top things
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+