6 ಲಕ್ಷ.. 5-ಸೀಟರ್, ಆಕರ್ಷಕ ಫೀಚರ್ಸ್.. 2 ಲಕ್ಷ ಯುನಿಟ್ ಸೇಲ್ ಆಯ್ತು Nissan Suv!

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಪ್ರಮುಖ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುವುದರೊಂದಿಗೆ 'ಗೇಮ್ ಚೇಂಜರ್' ಕಾರಾಗಿಯೂ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು 'ಮ್ಯಾಗ್ನೈಟ್' ಎಸ್‍ಯುವಿ ಮಾರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

2020ರಲ್ಲಿ ಮೊದಲ ಬಾರಿಗೆ ಹೊಚ್ಚ ಹೊಸ 'ನಿಸ್ಸಾನ್ ಮ್ಯಾಗ್ನೈಟ್' ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಕಳೆದ ವರ್ಷ (2024) ಈ ಕಾರನ್ನು ಒಂದಷ್ಟು ನವೀಕರಣಗಳಿಗೆ ಒಳಪಡಿಸಿ 'ಫೇಸ್‌ಲಿಫ್ಟ್' ಮಾಡೆಲ್‌ನ್ನು ಹೊರತರಲಾಯಿತು. ಈಚೆಗೆ ಇದೇ ಎಸ್‍ಯುವಿಯನ್ನು 'ಸಿಎನ್‌ಜಿ' ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಪರಿಚಯಿಸಲಾಯಿತು ಈಗ, 'ಮ್ಯಾಗ್ನೈಟ್' ಕಾರಿನ ಮಾರಾಟದಲ್ಲಿ ಬಹುದೊಡ್ಡ ಮೈಲಿಗಲ್ಲೊಂದನ್ನು ಸಾಧಿಸಲಾಗಿದ್ದು, ಬರೋಬ್ಬರಿ 2 ಲಕ್ಷ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

Nissan Magnite Suv Cross 2 Lakh Unit Sales Milestone Details

2025ರಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಎಸ್‍ಯುವಿ ಮಾರಾಟ ಹೇಗಿದೆ..

ಈ ವರ್ಷದ ಮೊದಲ 4 ತಿಂಗಳಲ್ಲೂ 'ಮ್ಯಾಗ್ನೈಟ್' ಎಸ್‍ಯುವಿಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿವೆ. ಪ್ರತಿ ತಿಂಗಳು ಸರಾಸರಿ 2,000 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಏಪ್ರಿಲ್‌ನಲ್ಲಿ 1,749 ಯುನಿಟ್, ಮಾರ್ಚ್‌ನಲ್ಲಿ 2,484 ಯುನಿಟ್, ಫೆಬ್ರವರಿಯಲ್ಲಿ 2,328 ಯುನಿಟ್ ಹಾಗೂ ಜನವರಿಯಲ್ಲಿ 2,404 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ವಿಶೇಷತೆಗಳೇನು..

ಇದೊಂದು ಎಸ್‍ಯುವಿಯಾಗಿದೆ. ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ಕನಿಷ್ಠ ರೂ.6.14 ಲಕ್ಷ ಮತ್ತು ಗರಿಷ್ಠ ರೂ.11.76 ಲಕ್ಷ ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದೆ. ಹೊರ ಹಾಗೂ ಒಳಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಸ್ಟಾರ್ಮ್ ವೈಟ್, ಬ್ಲೇಡ್ ಸಿಲ್ವರ್, ಸನ್‌ರೈಸ್ ಕೂಪರ್ ಆರೆಂಜ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

Nissan Magnite Suv Cross 2 Lakh Unit Sales Milestone Details

ಈ ಕಾರು 1-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1-ಲೀ. ಟರ್ಬೊ ಪೆಟ್ರೋಲ್ ಮತ್ತು 1-ಲೀ. ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ರೂಪಾಂತರಗಳು 17.4 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ. ಜೊತೆಗೆ ಹೊಸದಾದ ಸಿಎನ್‌ಜಿ ರೂಪಾಂತರ 24 ಕೆಎಂ/ಕೆಜಿವರೆಗೆ ಮೈಲೇಜ್ ಕೊಡಬಹುದು ಎಂದು ಎಂದು ಅಂದಾಜಿಸಲಾಗಿದೆ.

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚರಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 336 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 40 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

Nissan Magnite Suv Cross 2 Lakh Unit Sales Milestone Details

ನೂತನ ಎಸ್‍ಯುವಿ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (7-ಇಂಚು) ಮತ್ತು ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 30, 2025, 14:22 [IST]
English summary
Nissan magnite suv cross 2 lakh unit sales milestone details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+