Nissan: ನಿಸ್ಸಾನ್ ಆಟ ಶುರು: ಎಲ್ಲಾ ವಾಹನ ತಯಾರಕರಿಗೆ ಶಾಕ್... ತನ್ನ ಕಾರುಗಳಲ್ಲಿ ಹೈಟೆಕ್ ತಂತ್ರಜ್ಞಾನ!

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ನಿಸ್ಸಾನ್ (Nissan), ತನ್ನ ಮುಂದಿನ ಪೀಳಿಗೆಯ ಪ್ರೊಪಿಲಾಟ್ ತಂತ್ರಜ್ಞಾನವನ್ನು (next generation ProPILOT technology) 2027 ರ ಆರ್ಥಿಕ ವರ್ಷದಿಂದ ಪ್ರಾರಂಭಿಸುವುದಾಗಿ ಘೋಷಿಸಿದೆ. ಮುಂದಿನ ಪೀಳಿಗೆಯ ಲಿಡಾರ್ ಮತ್ತು ವೇವ್ ಎಐ (Lidar and Wayve AI) ಡ್ರೈವರ್ ಸಾಫ್ಟ್‌ವೇರ್‌ನೊಂದಿಗೆ ನಿಸ್ಸಾನ್ ಗ್ರೌಂಡ್ ಟ್ರೂತ್ ಪರ್ಸೆಪ್ಷನ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಈ ತಂತ್ರಜ್ಞಾನದ ಮೂಲಕ ಸುಧಾರಿತ ಡಿಕ್ಕಿಗಳನ್ನು ತಪ್ಪಿಸುವ ಸಾಮರ್ಥ್ಯದೊಂದಿಗೆ ಸ್ವಾಯತ್ತ ಚಾಲನೆ (Autonomous driving) ಯಲ್ಲಿ ಹೊಸ ಕ್ರಾಂತಿಯನ್ನು ತರುವುದಾಗಿ ಹೇಳಿದೆ.

ಏನಿದು ವೇವ್?: ವೇವ್ ಎಂಬುದು ಜಾಗತಿಕ ಎಐ ಕಂಪನಿಯಾಗಿದ್ದು, ಇದು ಚಾಲನೆಗಾಗಿ ವಿನ್ಯಾಸಗೊಳಿಸಿದ ಎಐ ಫೌಂಡೇಷನ್ ಮಾಡಲ್ ಆಗಿದೆ. ಇದರ ಎಐ ಫೌಂಡೇಶನ್ ಮಾದರಿಯನ್ನು ಹೆಚ್ಚಿನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ನಗರ ಮತ್ತು ಹೆದ್ದಾರಿಗಳಲ್ಲಿ ಪಾಯಿಂಟ್ - ಟು - ಪಾಯಿಂಟ್ ಚಾಲನೆಯನ್ನು ಸಕ್ರಿಯಗೊಳಿಸಲು ಕಸ್ಟಮ್ ಜೆನ್ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.

nissan-to-launch-next-generation-autonomous-driving-technology

ಈ ಸಾಫ್ಟ್‌ವೇರ್ ಅಪಾರ ಪ್ರಮಾಣದ ನೈಜ - ಪ್ರಪಂಚದ ಅನುಭವದ ಮೇಲೆ ತರಬೇತಿ ಪಡೆದಿರುತ್ತದೆ. ವೇವ್‌ನ ಎಐ ಫೌಂಡೇಶನ್ ಮಾದರಿಯಲ್ಲಿ ನಿರ್ಮಿಸಲಾದ ವೇವ್ ಎಐ ಡ್ರೈವರ್ ಸಾಫ್ಟ್‌ವೇರ್, ಮಾನವರಂತೆ ಹೆಚ್ಚು ಸಂಕೀರ್ಣವಾದ ಚಾಲನಾ ಪರಿಸ್ಥಿತಿಗಳನ್ನು ಸುಲಭವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಸೆಟಪ್ ವಾಹನಗಳಿಗೆ ಘರ್ಷಣೆಗಳನ್ನು ತಪ್ಪಿಸಲು ಮತ್ತು ರಸ್ತೆಯಲ್ಲಿ ಸ್ವಂತವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಅಪಾರ ಪ್ರಮಾಣದ ಡೇಟಾದಿಂದ ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಕಲಿಯುವ ತಂತ್ರಜ್ಞಾನದ ಸಾಮರ್ಥ್ಯವು ಭವಿಷ್ಯದ ನಿಸ್ಸಾನ್ ವಾಹನಗಳಿಗೆ ಪ್ರಯೋಜನಗಳನ್ನು ನೀಡಲಿದೆ. ಈ ಸಾಫ್ಟ್‌ವೇರ್ ತನ್ನ ಸ್ವಾಯತ್ತ ಚಾಲನಾ (Autonomous driving) ತಂತ್ರಜ್ಞಾನದ ವ್ಯಾಪಕ ನಿಯೋಜನೆಯನ್ನು ವೇಗಗೊಳಿಸಲು ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವಲ್ಲಿ ಶ್ರೇಷ್ಠವಾಗಿದೆ ಎಂದು ನಿಸ್ಸಾನ್ ತಿಳಿಸಿದೆ.

nissan-to-launch-next-generation-autonomous-driving-technology

ಪೂರ್ವ ನಿಗದಿಪಡಿಸಿದ ನಿಯಮಗಳು ಅಥವಾ ಮ್ಯಾಪ್‌ಗಳನ್ನು ಮಾತ್ರ ಅವಲಂಬಿಸುವ ಬದಲು, ನೈಜ ಪ್ರಪಂಚದ ಚಾಲನಾ ಅನುಭವದ ಮೂಲಕ ತರಬೇತಿ ಪಡೆದ AI (ಕೃತಕ ಬುದ್ಧಿಮತ್ತೆಯ)ನಲ್ಲಿ ಪರಿಣತಿ ಹೊಂದಿರುವ ಯುಕೆ ಮೂಲದ ಎಐ ಕಂಪನಿ ವೇವ್ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆಯ ಏಕೀಕರಣವು ಹೊಸ ವ್ಯವಸ್ಥೆಯ ಕೇಂದ್ರಬಿಂದುವಾಗಲಿದೆ.

ನಿಸ್ಸಾನ್ ಪ್ರಕಾರ, ವೇವ್‌ನ ಎಐ ಡ್ರೈವರ್ ಸಾಫ್ಟ್‌ವೇರ್ ಒಂದು ಅಡಿಪಾಯ ಮಾದರಿಯಿಂದ ಚಾಲಿತವಾಗಿದೆ, ಇದು ಬೃಹತ್ ಪ್ರಮಾಣದ ಚಾಲನಾ ಡೇಟಾದಿಂದ ಕಲಿಯಲಿದೆ, ಇದು ನಗರ ಸಂಚಾರ ಅಥವಾ ಬದಲಾಗುತ್ತಿರುವ ರಸ್ತೆ ಪರಿಸ್ಥಿತಿಗಳಂತಹ ಸಂಕೀರ್ಣ ಮತ್ತು ಅನಿರೀಕ್ಷಿತ ಪರಿಸರಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಈ ಹೊಂದಾಣಿಕೆಯು ತನ್ನ ಭವಿಷ್ಯದ ವಾಹನಗಳಿಗೆ ಸುರಕ್ಷತೆ ನೀಡುತ್ತದೆ ಎಂದು ನಿಸ್ಸಾನ್ ಹೇಳಿದೆ.

nissan-to-launch-next-generation-autonomous-driving-technology

ವಿಶ್ವಾದ್ಯಂತ ಅನೇಕ ಜಾಗತಿಕ ವಾಹನ ತಯಾರಕರೊಂದಿಗೆ ಸಹಕರಿಸುತ್ತಿರುವ ವೇವ್ ಕಂಪನಿ, ತನ್ನ ಸಾಫ್ಟ್ವೇರ್ ನಗರ ಮತ್ತು ಹೆದ್ದಾರಿ ಪರಿಸರಗಳಲ್ಲಿ ಪಾಯಿಂಟ್ - ಟು - ಪಾಯಿಂಟ್ ಸ್ವಾಯತ್ತ ಚಾಲನೆಯನ್ನು ಸಕ್ರಿಯಗೊಳಿಸುತ್ತದೆ. ವಿವಿಧ ವಾಹನ ಪ್ಲಾಟ್‌ಫಾರ್ಮ್‌ಗಳಲ್ಲಿ ಅಳೆಯಲು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 16, 2025, 14:42 [IST]
English summary
Nissan to launch next generation autonomous driving technology
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+