ಅಗ್ಗದ ಹೊಸ ಹೀರೋ ಸ್ಪ್ಲೆಂಡರ್‌ಗೆ ಫುಲ್ ಡಿಮ್ಯಾಂಡ್.. ಬರೋಬ್ಬರಿ 2.46 ಲಕ್ಷ ಬೈಕ್ ಮಾರಾಟ, ಕಾರಣವೇನು?

ನಂಬಿಕಾರ್ಹ ಬೈಕ್‌ಗೆ ಮತ್ತೊಂದು ಹೆಸರೇ ಹೀರೋ ಸ್ಪ್ಲೆಂಡರ್ (Hero Splendor) ಎಂದು. ಅಷ್ಟರ ಮಟ್ಟಿಗೆ ಈ ಮೋಟಾರ್‌ಸೈಕಲ್‌ ಜನಪ್ರಿಯತೆ ಗಳಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇದು ಸ್ಪ್ಲೆಂಡರ್ ಪ್ಲಸ್ ಹಾಗೂ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಎಂಬ ಎರಡು ರೂಪದಲ್ಲಿ ಲಭ್ಯವಿದೆ. ಈ ಜುಲೈನಲ್ಲೂ ಇದೇ ಬೈಕ್‌ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,46,715 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 11.73% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 2,20,820 ಯುನಿಟ್‌ಗಳನ್ನು ಮಾರಲಾಗಿದೆ.

ದೇಶೀಯವಾಗಿ ಇದೇ ಜುಲೈನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 5 ದ್ವಿಚಕ್ರ ವಾಹನಗಳ ಪಟ್ಟಿಯು ಪ್ರಕಟಗೊಂಡಿದೆ. ಅದರಲ್ಲೂ 'ಹೀರೋ ಸ್ಪ್ಲೆಂಡರ್' ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್ (2,37,413 ಯುನಿಟ್), ಮೂರನೇ ಸ್ಥಾನದಲ್ಲಿ ಹೋಂಡಾ ಶೈನ್ ಬೈಕ್ (1,59,658 ಯುನಿಟ್), ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಜುಪಿಟರ್ (1,24,876 ಯುನಿಟ್) ಹಾಗೂ ಐದನೇ ಸ್ಥಾನದಲ್ಲಿ ಬಜಾಜ್ ಪಲ್ಸರ್ (79,817 ಯುನಿಟ್) ಇದೆ.

Number 1 Bike Hero Splendor July 2025 Sales Report

ಈ ಹೀರೋ ಸ್ಪ್ಲೆಂಡರ್ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳಲು ನಾನಾ ಕಾರಣಗಳಿವೆ. ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಮುಗಿಬಿದ್ದು ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ವಹಣಾ ವೆಚ್ಚವು ಅಗ್ಗವಾಗಿದು, ಉತ್ತಮವಾದ ಮೈಲೇಜ್ ಸಹ ನೀಡುತ್ತದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ವಿಶೇಷತೆಗಳೇನು:

ಇದು ಸ್ಟ್ಯಾಂಡರ್ಡ್ ಆಗಿ ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮತ್ತು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಎಂಬ ರೂಪಾಂತರದೊಂದಿಗೆ (ವೇರಿಯೆಂಟ್) ಸಿಗುತ್ತದೆ. ಕನಿಷ್ಠ ರೂ.79,000 ಹಾಗೂ ಗರಿಷ್ಠ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯೂ ಬ್ಲ್ಯಾಕ್, ಬ್ಲ್ಯಾಕ್ ರೆಡ್ ಪರ್ಪಲ್, ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಹಾಗೂ ಫೋರ್ಸ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

Number 1 Bike Hero Splendor July 2025 Sales Report

ಈ ಮೋಟಾರ್‌ಸೈಕಲ್‌ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 97.2 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8,000 ಆರ್‌ಪಿಎಂನಲ್ಲಿ 8 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಹೊಚ್ಚ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ & ಐಡಲ್ ಸ್ಟಾಪ್/ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ಹತ್ತರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್-ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಹೇಗಿದೆ:

ಇದು ರೂ.88,000 ರಿಂದ ರೂ.92,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಉತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಮ್ಯಾಟ್ ನೆಕ್ಸಸ್ ಬ್ಲೂ, ಮ್ಯಾಟ್ ಗ್ರೇ, ಬ್ಲ್ಯಾಕ್ ಮತ್ತು ಕ್ಯಾಂಡಿ ಬ್ಲೇಜಿಂಗ್ ರೆಡ್ ಎಂಬ ಬಣ್ಣಗಳನ್ನು ಪಡೆದಿದೆ.

ಈ ಬೈಕ್ 124.7 ಸಿಸಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 69 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಮತ್ತು ಎಂಜಿನ್ ಕಿಲ್ ಸ್ವೀಚ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, August 28, 2025, 11:13 [IST]
English summary
Number 1 bike hero splendor july 2025 sales report
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+