ನಾಳೆ ಹೊಸ ಮಹೀಂದ್ರಾ XUV 7XO ಎಸ್‌ಯುವಿಯ ಪ್ರೀ-ಬುಕಿಂಗ್ ಪ್ರಾರಂಭ: ಏನಿದರ ವಿಶೇಷತೆಗಳು?
ಮಹೀಂದ್ರಾ XUV 7XO ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಈ ಕಾರು ಮಹೀಂದ್ರಾ ಕಂಪನಿಯ ಪ್ರಮುಖ ಎಸ್‌ಯುವಿಯಾಗಿರುವ XUV700 ಆಗಿದ್ದು, ಇದನ್ನೇ XUV 7XO ಎಂದು ನಾಮಕರಣ ಮಾಡಲಾಗಿದೆ. ಈ ಕಾರನ್ನು ಜನವರಿ 5 ರಂದು ಕಂಪನಿ ಬಿಡುಗಡೆ ಮಾಡಲು ಸಜ್ಜಾಗಿದ್ದು, ಅದಕ್ಕೂ ಮುನ್ನ XUV 7XO ಗಾಗಿ ಪ್ರೀ-ಬುಕಿಂಗ್‌ಗಳು ನಾಳೆಯಿಂದ (ಡಿಸೆಂಬರ್ 15) ಪ್ರಾರಂಭವಾಗಲಿವೆ. ನೀವು ಮುಂಬರುವ ಮಹೀಂದ್ರಾ XUV 7XO ಎಸ್‌ಯುವಿ ಖರೀದಿಸಲು ಪ್ಲಾನ್ ಇದ್ದರೆ, ಈ SUV ಬಗ್ಗೆ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ.
ಸ್ಫೂರ್ತಿ ನೀಡಲು ಮತ್ತು ಉತ್ತೇಜಿಸಲು ವಿನ್ಯಾಸಗೊಳಿಸಲಾದ XUV 7XO ತನ್ನ ಅಣ್ಣನಾದ XUV700 ನಂತೆ ಅದೇ ಸಾಮರ್ಥ್ಯ, ಉನ್ನತ ವಿನ್ಯಾಸ, ತಂತ್ರಜ್ಞಾನ, ಸೌಕರ್ಯ ಮತ್ತು ಕಾರ್ಯಕ್ಷಮತೆಯೊಂದಿಗೆ ಬರಲಿದೆ. SUV ವಿಭಾಗವನ್ನು ವಿಕಸನಗೊಳಿಸಿದ XUV700 ಪರಂಪರೆಯ ಮೇಲೆ ನಿರ್ಮಿಸಲಾದ XUV 7XO ಎಸ್‌ಯುವಿ ಮಾರುಕಟ್ಡೆಯಲ್ಲಿ ಗೇಮ್ ಚೇಂಚರ್ ಆಗಲಿದೆ ಎಂದು ಕಂಪನಿ ಹೇಳಿದೆ.

ಮುಂಬರಲಿರುವ ಹೊಸ ಮಹೀಂದ್ರಾ XUV 7XO ಆರಂಭಿಕ ಬೆಲೆಯು ಸುಮಾರು 15 ಲಕ್ಷ ರೂ.ಗಳಿಂದ ರೂ.26 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಾಳೆಯಿಂದ ಬುಕಿಂಗ್ ಪ್ರಾರಂಭವಾಗಲಿದ್ದು, ಆಸಕ್ತರು, ಯಾವುದೇ ಅಧಿಕೃತ ಮಹೀಂದ್ರಾ ಡೀಲರ್‌ಶಿಪ್ ಅಥವಾ ವೆಬ್‌ಸೈಟ್‌ನಲ್ಲಿ ರೂ.21,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದು.
ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಮಾರುಕಟ್ಟೆಯಲ್ಲಿ ಪ್ರಮುಖ ಕಾರುಗಳಾದ ಟಾಟಾ ಸಫಾರಿ, ಹುಂಡೈ ಅಲ್ಕಾಜರ್, ಮಹೀಂದ್ರಾ ಸ್ಕಾರ್ಪಿಯೊ N ಮತ್ತು MG ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಮಹೀಂದ್ರಾ XUV 7XO ಎಂಜಿನ್ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ, ಈಗಿರುವ 'ಎಕ್ಸ್‌ಯುವಿ700'ನಂತೆ ಅದೇ 2 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 - ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿರಲಿದೆ. 6 - ಸ್ಪೀಡ್ MT, 6 - ಸ್ಪೀಡ್ AT ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಬರಬಹುದು. 17 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಕಾರು, 6/ 7 ಆಸನಗಳ ಆಯ್ಕೆಗಳನ್ನು ಹೊಂದಿರಲಿದ್ದು, ಕ್ಯಾಬಿನ್ ಸಾಕಷ್ಟು ವಿಶಾಲವಾಗಿರಲಿದೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, 4,737 ಎಂಎಂ ಉದ್ದ, 1,900 ಎಂಎಂ ಅಗಲ ಮತ್ತು 1,747 ಎಂಎಂ ಎತ್ತರ, 201 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,762 ಮಿ.ಮೀ ವೀಲ್‌ಬೇಸ್ ಒಳಗೊಂಡಿರುವ ನಿರೀಕ್ಷೆಯಿದೆ. ಪ್ರಯಾಣಿಕರು ಆರಾಮದಾಯಕವಾಗಿ ಲಾಂಗ್ ಡ್ರೈವ್ ಹೋಗಬಹುದು.

ಹೊಸ ಮುಂಬರಲಿರುವ XUV 7XO ಇಂಟೀರಿಯರ್‌ನಲ್ಲಿ ಹೊಸ ಡಿಸ್ಪ್ಲೇ ವಿನ್ಯಾಸದೊಂದಿಗೆ, ಮಹೀಂದ್ರಾ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅಂದರೆ ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XEV 9S ಎಲೆಕ್ಟ್ರಿಕ್ ಎಸ್‌ಯುವಿನಂತೆ ಪ್ರೀಮಿಯಂ ಆಗಿರಲಿದೆ. ಟ್ರಿಪಲ್ ಸ್ಕ್ರೀನ್ ಸೆಟಪ್, ಮಲ್ಟಿ-ಝೋನ್ ಆಟೋ ಎಸಿ, ಸನ್‌ರೂಫ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು.
ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್, ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಪವರ್ಡ್ ಡ್ರೈವರ್ ಸೀಟ್ ಸೇರಿವೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ.


Click it and Unblock the Notifications








