TATA: ಬಿಡುಗಡೆಯೇ ಆಗಿಲ್ಲ.. ಮೊದಲ ಬಾರಿಗೆ ರಸ್ತೆಯಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಕಾರು, ಯಾವುದು?

ದಿವಂಗತ ರತನ್ ಟಾಟಾ ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಈ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ 'ಹ್ಯಾರಿಯರ್ ಇವಿ'ಯನ್ನು ಪ್ರದರ್ಶನ ಮಾಡಿತ್ತು. ಟಾಟಾ ಕಂಪನಿಯು ಅತಿ ಶೀಘ್ರದಲ್ಲಿ ಇದೇ ನೂತನ ಹ್ಯಾರಿಯರ್ ಎಲೆಕ್ಟ್ರಿಕ್ ಕಾರನ್ನು ಮಾರಾಟಕ್ಕೂ ತರಲಿದೆ. ಸದ್ಯ ಬಿಡುಗಡೆಗೂ ಮುನ್ನವೇ ಉತ್ಪಾದನೆಗೆ ಸಿದ್ದಗೊಂಡಿರುವ ಈ 'ಹ್ಯಾರಿಯರ್ ಇವಿ' ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ರಸ್ತೆಯಲ್ಲಿಯೂ ಕಾಣಿಸಿಕೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಈ ನೂತನ ಟಾಟಾ ಹ್ಯಾರಿಯರ್ ಇವಿ (Tata Harrier EV) ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಸ್ಪೈ ವಿಡಿಯೋ/ ಫೋಟೋಗಳಲ್ಲಿರುವ ಈ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿ, ಬಹುತೇಕ ಸಾಮಾನ್ಯ ಹ್ಯಾರಿಯರ್ ಕಾರಿಗೆ ಹೋಲಿಕೆಯಾಗಲಿದೆ. ಇದು ಕ್ಲೋಸ್ಡ್-ಆಫ್-ಗ್ರಿಲ್, ವರ್ಟಿಕಲ್ ಸ್ಲ್ಯಾಟ್‌ಗಳು, ರೀ-ಡಿಸೈನ್ ಬಂಪರ್‌ ಮತ್ತು ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.

Production Version Tata Harrier EV spotted First Time Launch Soon Expected Price Features Details

ಮುಂಬರಲಿರುವ ಟಾಟಾ ಹ್ಯಾರಿಯರ್ ಇವಿ, ಸ್ವಲ್ಪ ಮಟ್ಟಿಗೆ ದುಬಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು ರೂ.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ನೂತನ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿಗೆ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಹಾಗೂ ಎಂಜಿ ಜಡ್ಎಸ್ ಇವಿಗಳು ಪ್ರಬಾಲವಾದ ಪ್ರತಿಸ್ಪರ್ಧಿಯಾಗಲಿವೆ.

ಹೊಸ ಟಾಟಾ ಹ್ಯಾರಿಯರ್ ಇವಿ ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಪೂರ್ತಿ ಚಾರ್ಜ್‌ನಲ್ಲಿ 500 ಕಿ.ಮೀಗೂ ಹೆಚ್ಚಿನ ರೇಂಜ್ (ಮೈಲೇಜ್) ನೀಡಬಹುದು ಎನ್ನಲಾಗಿದೆ. ಜೊತೆಗೆ ಗರಿಷ್ಠ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ ಹೆಚ್ಚಿನ ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಉತ್ಪಾದಿಸುವ ಸಾಧ್ಯತೆಯಿದ್ದು, ಡುಯಲ್ ಮೋಟಾರ್ ಸೆಟಪ್ ಮತ್ತು ಆಲ್ ವೀಲ್ ಡ್ರೈವ್ ಟೆಕ್ನಾಲಜಿಯನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

Production Version Tata Harrier EV spotted First Time Launch Soon Expected Price Features Details

ಈ ಎಲೆಕ್ಟ್ರಿಕ್ ಎಸ್‌ಯುವಿ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಯರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ದೊಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಒಳಗೊಂಡಿರುವ ನಿರೀಕ್ಷೆಯೂ ಇದೆ.

ನೂತನ ಟಾಟಾ ಹ್ಯಾರಿಯರ್ ಇವಿ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡುಯಲ್-ಜೋನ್ ಆಟೋಮೆಟಿಕ್ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಡ್ರೈವರ್ ಸೀಟ್, 4-ವೇ ಪವರ್ಡ್ ಕೋ-ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.

ಹೊಸ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಇಎಸ್‍ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಹೋಲ್ಡ್, ಹಿಲ್-ಡಿಸೆಂಟ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 28, 2025, 16:42 [IST]
English summary
Production version tata harrier ev spotted first time launch soon expected price features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+