Range Rover: ಇತ್ತೀಚೆಗೆ ಬಿಡುಗಡೆಯಾದ ರೇಂಜ್ ರೋವರ್ SV ಮಸಾರ ವಿಶೇಷತೆಗಳು!

ಹಿಮಾಲಯದ ಭವ್ಯ ಸೌಂದರ್ಯ ಮತ್ತು ಆ ಪ್ರದೇಶದ ಅಮೂಲ್ಯವಾದ ಅಪರೂಪದ ನೀಲಮಣಿಗಳಿಂದ ಪ್ರೇರಿತವಾದ ರೇಂಜ್ ರೋವರ್ SV ಮಸಾರ ಎಂಬ ಕಾರು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತಕ್ಕಾಗಿ ವಿಶೇಷವಾಗಿ ರಚಿಸಲಾದ ಲಿಮಿಟೆಡ್ ಎಡಿಷನ್ ರೇಂಜ್ ರೋವರ್ SV ಮಸಾರಾ, ಈ ಎಸ್‌ಯುವಿ ವಿಶ್ವಾದ್ಯಂತ ಕೇವಲ 12 ಕಾರುಗಳಿಗೆ ಸೀಮಿತವಾಗಿದೆ. ಈ ಲಿಮಿಟೆಡ್ ಎಡಿಷನ್ ಆವೃತ್ತಿಯ ಬೆಲೆಯು 4.99 ಕೋಟಿ (ಎಕ್ಸ್ ಶೋ ರೂಂ) ಇದೆ. ಈ ಅಸಮಾನ್ಯ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಇದು ನಿಜವಾದ ಸಂಗ್ರಾಹಕರ ಕಾರಾಗಿದ್ದು (Collectors Edition), ಮಸಾರಾ ಎಂಬ ಹೆಸರು ಸಂಸ್ಕೃತದ ಮೂಲವನ್ನು ಹೊಂದಿದೆ, ಇದು ಭಾರತೀಯ ಸಂಸ್ಕೃತಿಯೊಂದಿಗಿನ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಹಿಮಾಲಯದ ಭವ್ಯ ಸೌಂದರ್ಯ ಮತ್ತು ಆ ಪ್ರದೇಶದ ಅಮೂಲ್ಯವಾದ ಅಪರೂಪದ ನೀಲಮಣಿಗಳಿಂದ ಪ್ರೇರಿತವಾಗಿದೆ ಎಂದು ರೇಂಜ್ ರೋವರ್ ಕಂಪನಿ ತಿಳಿಸಿದೆ.

range-rover-sv-masara-edition-top-things

ರೇಂಜ್ ರೋವರ್ SV ಮಸಾರಾ ಆವೃತ್ತಿಯು 4.4 l V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 452 kW ಪವರ್ ಮತ್ತು 750 Nm ಟಾರ್ಕ್ ಹೊರಹಾಕುತ್ತದೆ. ರೇಂಜ್ ರೋವರ್ SV ಮಸಾರಾ ಆವೃತ್ತಿಯ ಒಳಭಾಗವು SV ಬೆಸ್ಪೋಕ್ ಐಷಾರಾಮಿತನವನ್ನು ಹೊಂದಿದೆ. ಇದು ಶೈನಿಂಗ್ ನೋಬಲ್ ಕ್ರೋಮ್ ಎಕ್ಸೆಂಟ್‌ಗಳು ಮತ್ತು ಬಿಳಿ ಸೆರಾಮಿಕ್‌ನಿಂದ ಒಟ್ಟಿಗೆ ಸಂಯೋಜಿಸಲಾಗಿದೆ.

ಐಷಾರಾಮಿ ಲಿಬರ್ಟಿ ಬ್ಲೂ ಲೆದರ್ ಅನ್ನು ಹಗುರವಾದ ಪರ್ಲಿನೊ ಲೆದರ್‌ನೊಂದಿಗೆ ಸಂಯೋಜಿಸಿ ಬೆಸ್ಪೋಕ್ ಸ್ಪ್ಲಿಟ್ ಅನ್ನು ಹೊಂದಿದೆ. ವ್ಯಾಪಕವಾದ ತಿಳಿ ಕ್ರೀಮ್ ಆಶ್ ಬರ್ ವೆನಿಯರ್ ವಿನ್ಯಾಸದೊಂದಿಗೆ ಮಸಾರಾ ಆವೃತ್ತಿಯ ಕಸ್ಟಮ್ ವಿವರಗಳಲ್ಲಿ ಬೆಸ್ಪೋಕ್ ಪೇಂಟ್, ಅಕ್ಸೆಂಟ್‌ಗಳು, ವೀಲ್‌ಗಳು, ಕಸ್ಟಮೈಸ್‌ ಗೊಳಿಸಿದ ಸ್ಕ್ಯಾಟರ್ ಕುಶನ್‌ಗಳೊಂದಿಗೆ ವಿಶೇಷ ಸ್ಟಿಚಿಂಗ್ ಸೀಟುಗಳು ಆಕರ್ಷಕವಾಗಿ ಕಾಣುತ್ತವೆ.

range-rover-sv-masara-edition-top-things

ಎಲ್ಲಕ್ಕಿಂತ ಮುಖ್ಯವಾಗಿ 'ಮಸಾರಾ ಆವೃತ್ತಿ' ಹಾಗೂ '1 ರಿಂದ 12' ಪದನಾಮದೊಂದಿಗೆ SV ಬೆಸ್ಪೋಕ್ ಬ್ರಾಂಡ್ ಟ್ರೆಡ್ ಪ್ಲೇಟ್‌ಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, SUV ಉದ್ದವಾದ ವೀಲ್‌ಬೇಸ್ ರೇಂಜ್ ರೋವರ್ SV ಮಸಾರಾ ಆವೃತ್ತಿಯ ಹಿಂಭಾಗದಲ್ಲಿ ಅತ್ಯುತ್ತಮ ಸೌಕರ್ಯವನ್ನು ಒದಗಿಸುವ ಸಂಪೂರ್ಣವಾಗಿ ಒರಗಿಕೊಳ್ಳಬಹುದಾದ ಆಸನಗಳೊಂದಿಗೆ ಬರುತ್ತದೆ.

ರೇಂಜ್ ರೋವರ್‌ನ SV ಕಾರನ್ನು ಹಿಮಾಲಯದಲ್ಲಿ ಕಂಡುಬರುವ ವಿಶಿಷ್ಟ ನೀಲಮಣಿಗಳು ಮತ್ತು ನೀಲಿ ಪರ್ವತ ಪ್ರದೇಶದ ಸ್ಫೂರ್ತಿಯೊಂದಿಗೆ ನೀಲಿ ಬಾಹ್ಯ ಬಣ್ಣ ಸೇರಿದಂತೆ ವಿನ್ಯಾಸ ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಡಿಸೈನ್ ಮಾಡಿದ್ಧಾರೆ. ಪವರ್ಡ್ ಕ್ಲಬ್ ಟೇಬಲ್, ನಿಯೋಜಿಸಬಹುದಾದ ಕಪ್‌ಹೋಲ್ಡರ್‌ಗಳು ಮತ್ತು SV ಕೆತ್ತಿದ ಗಾಜಿನ ಸಾಮಾನುಗಳಿಂದ ಪೂರ್ಣಗೊಂಡ ರೆಫ್ರಿಜರೇಟೆಡ್ ಕಂಪಾರ್ಟ್ಮೆಂಟ್ ನೀಡಲಾಗಿದೆ.

range-rover-sv-masara-edition-top-things

JLR ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಮಾತನಾಡಿ, ಭಾರತದ ಶ್ರೀಮಂತ ಸಂಸ್ಕೃತಿಗೆ ಚಿಂತನಶೀಲ ಗೌರವವಾದ ರೇಂಜ್ ರೋವರ್ SV ಮಸಾರಾ ಆವೃತ್ತಿಯನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ರೇಂಜ್ ರೋವರ್ ಭಾರತದಲ್ಲಿನ ವಿವೇಚನಾಶೀಲ ಗ್ರಾಹಕರಿಂದ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 6, 2025, 10:29 [IST]
English summary
Range rover sv masara edition top things
Read more on range rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+