ಇತ್ತೀಚೆಗೆ ಬಿಡುಗಡೆಯಾದ 2025 ಸಿಟ್ರನ್ ಸಿ3 ಸಿಎನ್‌ಜಿ ಕಾರಿನ ವಿಶೇಷತೆಗಳು
ಸಿಟ್ರನ್ ಕಂಪನಿಯು ತನ್ನ C3 ಹ್ಯಾಚ್‌ಬ್ಯಾಕ್ ಕಾರನ್ನು CNG ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ರೆಟ್ರೋಫಿಟ್ಮೆಂಟ್ ಆಗಿ ಪರಿಚಯಿಸಲಾಗಿದೆ. C3 CNG ಈಗ ಪ್ರಮಾಣೀಕೃತ ನವೀಕರಣ ಕಾರ್ಯಕ್ರಮದ ಮೂಲಕ ಸಿಟ್ರನ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ನವೀಕರಣವು ಕಾರಿನ ಪ್ರಮುಖ ಸಾಮರ್ಥ್ಯಗಳಿಗೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಕಾರಾಗಲಿದೆ. ಹಾಗೆಯೇ ಪರಿಸರ ಸ್ನೇಹಿ, ಡ್ಯುಯಲ್ ಫ್ಯೂಯಲ್ ಅನುಕೂಲತೆಯೊಂದಿಗೆ ಕಾರು 28.1 ಕಿ.ಮೀ/ಕೆ.ಜಿ ವರೆಗೆ ಮೈಲೇಜ್ ನೀಡುತ್ತದೆ ಎಂದು ಸಿಟ್ರನ್ ಕಂಪನಿ ಹೇಳಿಕೊಂಡಿದೆ.
ಸಿಟ್ರನ್ ಸಿ3 ಗಾಗಿ ರೆಟ್ರೋಫಿಟ್ ಮಾಡಲಾದ ಸಿಎನ್‌ಜಿ ಕಿಟ್ ಎಲ್ಲಾ ಅಧಿಕೃತ ಸಿಟ್ರನ್ ಡೀಲರ್ ಶಿಪ್‌ಗಳಲ್ಲಿ ರೂ. 93,000 ಹೆಚ್ಚುವರಿ ಬೆಲೆಗೆ ಲಭ್ಯವಿದೆ. ಕಾರು ತಯಾರಕರ ಪ್ರಕಾರ, ಲೊವಾಟೋ ಸಿಎನ್‌ಜಿ ಕಿಟ್ ಅನ್ನು ಕಾರ್ಖಾನೆಯಲ್ಲೇ ಪರೀಕ್ಷಿಸಲಾಗಿದೆ. ಜೊತೆಗೆ ಪರಿಷ್ಕರಿಸಿದ ಡ್ರೈವ್ ಗುಣಮಟ್ಟ ಮತ್ತು ಸೂಕ್ತ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾಪನಾಂಕ ಮಾಡಲಾಗಿದೆ.

ಹೊಸ ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್ ಸಿಎನ್‌ಜಿ ರೆಟ್ರೋಫಿಟ್ ಮೆಂಟ್ 1.2-ಲೀಟರ್, ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ನೊಂದಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಪ್ರತಿ ಕೆ.ಜಿಗೆ 28.1 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಕಂಪನಿ ಹೇಳಿಕೊಂಡಿರುವ ಅಂಕಿ ಅಂಶವಾಗಿದೆ. ಪ್ರತಿ ಕಿಲೋಮೀಟರ್‌ಗೆ ಸರಿಸುಮಾರು 2.66 ರೂ. ವೆಚ್ಚವಾಗಲಿದೆ ಎಂದು ಬ್ರಾಂಡ್ ತಿಳಿಸಿದೆ.
ಈ ಸಿಎನ್‌ಜಿ ಮಾದರಿಯನ್ನು ಲೈವ್, ಫೀಲ್, ಫೀಲ್ (ಒ) ಮತ್ತು ಶೈನ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಸಿಟ್ರನ್ ಸಿಎನ್‌ಜಿ ಆವೃತ್ತಿಯನ್ನು ವಿಶೇಷವಾಗಿ ಟ್ಯೂನ್ ಮಾಡಿದ ಹಿಂಭಾಗದ ಶಾಕ್ ಅಬ್ಸಾರ್ಬರ್ ಗಳೊಂದಿಗೆ ಬಲವರ್ಧಿತ ಸ್ಪ್ರಿಂಗ್ ಗಳು ಮತ್ತು ಆಂಟಿ - ರೋಲ್ ಬಾರ್ ನೊಂದಿಗೆ ಸಜ್ಜುಗೊಳಿಸಿದೆ.

ಸ್ವತಂತ್ರ ಕಿಟ್ ಡೀಲರ್ ಒದಗಿಸಿದ ಮೂರು ವರ್ಷಗಳ ಅಥವಾ 1,00,000 ಕಿ.ಮೀ ವಾರಂಟಿಯೊಂದಿಗೆ ಈ ಕಾರನ್ನು ಖರೀದಿಸಬಹುದಾಗಿದೆ. ಬೂಟ್ ಸ್ಪೇಸ್‌ನಲ್ಲಿ ರಾಜಿ ಮಾಡಿಕೊಳ್ಳದೆ ಹೊಸ ಸಿಎನ್‌ಜಿ ವ್ಯವಸ್ಥೆಯನ್ನು ಕಾರಿನಲ್ಲಿ ಸಂಯೋಜಿಸಲಾಗಿದೆ. ಇದಲ್ಲದೆ, ಬಿಡಿ ಚಕ್ರವನ್ನು ಸಹ ಇಟ್ಟಕೊಳ್ಳಬಹದು ಎಂದು ಕಾರು ತಯಾರಕರು ಹೇಳಿದ್ದಾರೆ.
ಈ ಕಾರು ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸುವ ನಮ್ಯತೆಯನ್ನು ಹೊಂದಿದೆ. ಹೆಚ್ಚಿನ ಮೈಲೇಜ್ ಮತ್ತು ಸುಗಮ ಪರ್ಫಾಮೆನ್ಸ್‌ಗಾಗಿ ಇಂಧನ ನಿರ್ವಹಣಾ ವ್ಯವಸ್ಥೆಯು ಸಂಸ್ಕರಿಸಿದ ಡ್ರೈವ್ ಗುಣಮಟ್ಟ ಮತ್ತು ಪರ್ಯಾಯ ಇಂಧನ ಬಳಕೆಯೊಂದಿಗೆ ಪ್ರತಿ ಕಿ.ಮೀಗೆ 2.66 ರೂ. ಚಾಲನಾ ವೆಚ್ಚದೊಂದಿಗೆ ಅತ್ಯುತ್ತಮ ಎಂಜಿನ್ ದಕ್ಷತೆಯನ್ನು ಖಚಿತಪಡಿಸುವುದಾಗಿ ಸಿಟ್ರನ್ ಹೇಳಿದೆ.

ಸಿಟ್ರನ್‌ನ ಕಠಿಣ ಗುಣಮಟ್ಟದ ಮಾನದಂಡಗಳಿಗೆ ಅನುಸಾರವಾಗಿ ಪ್ರಮಾಣೀಕೃತ ಕಿಟ್‌ಗಳು ಕಂಪನಿಯ ಅಧಿಕೃತ ಡೀಲರ್‌ಶಿಪ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಸುರಕ್ಷತೆ ಮತ್ತು ಹೊರಸೂಸುವಿಕೆ ಮಾನದಂಡಗಳ ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ವಾಹನವು ಸಿಲಿಂಡರ್ ಸಮಗ್ರತೆ, ಸೋರಿಕೆ ಪತ್ತೆ, ಒತ್ತಡ ನಿಯಂತ್ರಣ ಮತ್ತು ತಡೆರಹಿತ ಇಂಧನ ಸ್ವಿಚಿಂಗ್ ಸೇರಿದಂತೆ ಸಂಪೂರ್ಣ ವಿತರಣಾ ಪೂರ್ವ ತಪಾಸಣೆಗೆ ಒಳಗಾಗಿರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








