ಮಹೀಂದ್ರಾ XUV 3XO 'REVX' ಸಿರೀಸ್ ಇತ್ತೀಚೆಗೆ ಬಿಡುಗಡೆ: ವಿಶೇಷತೆಗಳೇನು?
ಪ್ರಮುಖ ಎಸ್‌ಯುವಿ ತಯಾರಕ ಕಂಪನಿಯಾಗಿರುವ ಮಹೀಂದ್ರಾ ತನ್ನ ಹೊಸ XUV 3XO 'REVX' ಸೀರೀಸ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು ತನ್ನ ಜನಪ್ರಿಯ ಸಬ್ - ಕಾಂಪ್ಯಾಕ್ಟ್ SUV ಶ್ರೇಣಿಯನ್ನು ಸ್ಪೋರ್ಟಿಯರ್ ಸ್ಟೈಲಿಂಗ್, ವರ್ಧಿತ ಫೀಚರ್ಸ್ ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ ವಿಸ್ತರಿಸಿದೆ. REVX ಸಿರೀಸ್ ಡಿಸೈನ್, ತಂತ್ರಜ್ಞಾನ ಮತ್ತು ಹೈ-ಪರ್ಫಾಮೆನ್ಸ್ ಮಿಶ್ರಣವನ್ನು ಬಯಸುವ ಗ್ರಾಹಕರಿಗೆ ಇದನ್ನು ಪರಿಚಯಿಸಲಾಗಿದೆ. ಮಹೀಂದ್ರಾ XUV 3XO 'REVX' ಸಿರೀಸ್‌ನ ಟಾಪ್ ವಿಶೇಷತೆಗಳು ಇಲ್ಲಿವೆ.
ಪ್ರಮುಖ ಮುಖ್ಯಾಂಶಗಳು
ಹೊಸ ಹೊಸ XUV 3XO 'REVX' ಆರಂಭಿಕ ಬೆಲೆಯು 8.94 ಲಕ್ಷ (ಎಕ್ಸ್-ಶೋರೂಂ) ರೂ.ನಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 12.99 ಲಕ್ಷ (ಎಕ್ಸ್-ಶೋರೂಂ) ರೂ. ಇದೆ. REVX M, REVX M (O) ಹಾಗೂ REVX A ಎಂಬ ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಎಂಜಿನ್ ವಿಷಯಕ್ಕೆ ಬಂದರೆ 1.2L ಟರ್ಬೊ-ಪೆಟ್ರೋಲ್ (TCMPFi ಮತ್ತು TGDi) ಎಂಜಿನ್ ಹೊಂದಿದ್ದು, 6 -ಸ್ಪೀಡ್ ಮ್ಯಾನುವಲ್ (MT) ಮತ್ತು 6 -ಸ್ಪೀಡ್ ಆಟೋಮ್ಯಾಟಿಕ್ (AT) ಆಯ್ಕೆಗಳನ್ನು ಹೊಂದಿದೆ. ಗ್ಯಾಲಕ್ಸಿ ಗ್ರೇ, ಟ್ಯಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್, ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.
REVX M(O) (ಎಕ್ಸ್-ಶೋರೂಮ್ ಬೆಲೆ ರೂ. 9.44 ಲಕ್ಷ) REVXM ವೇರಿಯೆಂಟ್‌ಗಿಂತ ಕ್ಯಾಬಿನ್ ಅನುಭವ ಮತ್ತು ಒಟ್ಟಾರೆ ವಿನ್ಯಾಸದಲ್ಲಿ ಹೆಚ್ಚಿನ ಆಕರ್ಷಣೆಯನ್ನು REVX M(O) ವೇರಿಯೆಂಟ್ ಪಡೆದುಕೊಂಡಿದೆ. ಈ ವೇರಿಯೆಂಟ್ ಸಿಂಗಲ್ - ಪೇನ್ ಸನ್‌ರೂಫ್ ಸೇರ್ಪಡೆಯೊಂದಿಗೆ ಅತ್ಯಾಧುನಿಕ ಫೀಚರ್ಸ್ ಹೊಂದಿದೆ.

REVX A (ಎಕ್ಸ್-ಶೋರೂಮ್ ಬೆಲೆ ರೂ. 11.79 ಲಕ್ಷದಿಂದ ಪ್ರಾರಂಭವಾಗುತ್ತದೆ) - ಈ ವೇರಿಯೆಂಟ್ ಸುಧಾರಿತ 1.2L mStallion TGDi ಎಂಜಿನ್ ಹೊಂದಿದೆ. ಇದು 96 kW ಅತ್ಯುತ್ತಮ ಪವರ್ ಮತ್ತು 230 Nm ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ.
REVX A ವೇರಿಯೆಂಟ್ ಹೊರಭಾಗದಲ್ಲಿ, ಇದು ಸಿಗ್ನೇಚರ್ REVX ವಿನ್ಯಾಸ ಅಂಶಗಳನ್ನು ಹೊಂದಿದೆ. ಹಾಗೆಯೇ R16 ಪೇಂಟೆಡ್ ಬ್ಲಾಕ್ ಅಲಾಯ್ ವೀಲ್‌ಗಳು, ಬಾಡಿ ಕಲರ್ ಮುಂಭಾಗದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್ ಮತ್ತು ಡ್ಯುಯಲ್-ಟೋನ್ ರೂಫ್ ಹೊಂದಿದೆ. ಪನೋರಮಿಕ್ ಸನ್‌ರೂಫ್, ಲೆದರ್ ಸೀಟುಗಳು, ಡ್ಯುಯಲ್-ಟೋನ್ ಇಂಟೀರಿಯರ್, ಆಟೋ-ಡಿಮ್ಮಿಂಗ್ IRVM ಇತ್ಯಾದಿಗಳನ್ನು ಒಳಗೊಂಡಂತೆ ಇನ್-ಕ್ಯಾಬಿನ್ ಅನುಭವವನ್ನು ಹೆಚ್ಚಿಸುವ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.
REVX A ವೇರಿಯೆಂಟ್ ಇಂಟಿಗ್ರೇಟೆಡ್ ಅಲೆಕ್ಸಾ, ಆನ್‌ಲೈನ್ ನ್ಯಾವಿಗೇಷನ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಒಳಗೊಂಡಿರುವ ಅಡ್ರಿನಾಕ್ಸ್ ಕನೆಕ್ಟ್ ಅನ್ನು ಸಂಯೋಜಿಸುತ್ತದೆ. ಎರಡು HD ಸ್ಕ್ರೀನ್‌ಗಳನ್ನು ಹೊಂದಿದ್ದು, ಒಂದು 26.03 cm ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು 26.03 cm ಪೂರ್ಣ ಡಿಜಿಟಲ್ ಕ್ಲಸ್ಟರ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








