ಅಗ್ಗದ ಬೆಲೆಯ ಬೆಸ್ಟ್ ಟಾಪ್-3 ಗರಿಷ್ಟ ಸುರಕ್ಷತಾ ಕಾರುಗಳು ಇವೆ

ಹಣ ವೆಚ್ಚಿಸಲು ಸಿದ್ದವಿದ್ದರೂ ಯಾವ ಕಾರು ಖರೀದಿಸಬೇಕು ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ. ಕಾರು ತಯಾರಕರು ಕೂಡ ಗರಿಷ್ಟ ಸುರಕ್ಷತೆಯನ್ನು ಒದಗಿಸುವ ಜೊತೆಗೆ ಕಡಿಮೆ ಬೆಲೆಯಲ್ಲಿ ಒಂದಷ್ಟು ಕಾರುಗಳನ್ನು ನೀಡುತ್ತಿದ್ದಾರೆ. ಅಗ್ಗದ ಬೆಲೆಯಲ್ಲಿ ಬೆಸ್ಟ್ ಸೇಫ್ಟಿ ಒದಗಿಸುವ ಮೂರು ಪ್ರಮುಖ ಬ್ರಾಂಡ್‌ಗಳ ಮೂರು ಜನಪ್ರಿಯ ಕಾರುಗಳ ಬಗ್ಗೆ ಇಲ್ಲಿ ವಿವರಿಸಿದ್ದೇವೆ. ಭಾರತದಲ್ಲಿ ಸುರಕ್ಷಿತ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡ ಕನಿಷ್ಟ ಸೇಫ್ಟಿ ಫೀಚರ್ಸ್ ಒದಗಿಸುವ ಕಾರುಗಳು ಇಲ್ಲಿವೆ.

ಮಹೀಂದ್ರಾ XUV 3XO: ಮಹೀಂದ್ರಾ XUV 3XO (Mahindra XUV 3XO) ಸಬ್‌ ಕಾಂಪ್ಯಾಕ್ಟ್ ಎಸ್‍ಯುವಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ರಲ್ಲಿ 29.36 ಅಂಕಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ರಲ್ಲಿ 43 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಒಟ್ಟಾರೆ ಸುರಕ್ಷತೆಯಲ್ಲಿ ಮಹೀಂದ್ರಾ XUV 3XO, 5 - ಸ್ಟಾರ್ ಸೇಫ್ಟಿಯನ್ನು ದಕ್ಕಿಸಿಕೊಂಡಿದೆ.

safest-cars-in-india-maruti-mahindra-tata

ಹೊಸ ಮಹೀಂದ್ರಾ XUV 3XO ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಬೆಲೆಯು ರೂ. 7.79 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಹೆಚ್ಚುವರಿ ಸುರಕ್ಷತೆಗಾಗಿ ಬೆಲ್ಟ್ ಪ್ರಿಟೆನ್ಷನರ್‌ಗಳು, ಬೆಲ್ಟ್ ಲೋಡ್-ಲಿಮಿಟರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪಾದಚಾರಿ ರಕ್ಷಣೆ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಗಳನ್ನು ಈ ಎಸ್‌ಯುವಿ ಹೊಂದಿವೆ.

ಟಾಟಾ ಕರ್ವ್: ಹೊಸ ಟಾಟಾ ಕರ್ವ್ ಕಾರು ಕೂಡ 5 - ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ. ಈ ಹೊಸ ಎಸ್‍ಯುವಿಯು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ಅಡಿಯಲ್ಲಿ ಅತ್ಯಂತ ಸುರಕ್ಷಿತ ಕಾರು ಎನ್ನಿಸಿಕೊಂಡಿದೆ. ಈ ಕ್ರಾಶ್ ಟೆಸ್ಟ್‌ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ರಲ್ಲಿ 29.5 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 43.66 ಅಂಕಗಳನ್ನು ಗಳಿಸಿದೆ.

safest-cars-in-india-maruti-mahindra-tata

ಒಟ್ಟಾರೆ ಈ ಕಾರು ಸಂಪೂರ್ಣ 5 - ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ. ಟಾಟಾ ಕರ್ವ್ (Tata Curvv) ಎಸ್‍ಯುವಿಯು ಉತ್ತಮ ಚಾಲನಾ ಅನುಭವಕ್ಕಾಗಿ ಸೌಕರ್ಯ ಮತ್ತು ಪರ್ಫಾಮೆನ್ಸ್ ಎರಡಕ್ಕೂ ಆದ್ಯತೆ ನೀಡಿ ಕಾರನ್ನು ನಿರ್ಮಿಸಲಾಗಿದೆ. ಈ ಕಾರು ಪ್ರಸ್ತುತ ರೂ. 10 ಲಕ್ಷದಿಂದ ಆರಂಭವಾಗಿ ರೂ. 19.20 ಲಕ್ಷದವರಗೆ ಬೆಲೆಯಿದೆ. (ಎಕ್ಸ್‌ ಶೋರೂಂ ಬೆಲೆಗಳು)

ಮಾರುತಿ ಡಿಜೈರ್: ಮಾರುತಿ ಸುಜುಕಿ ಡಿಜೈರ್ ಮಾತ್ರ ಈಗ ಎಲ್ಲರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 31.24 ಅಂಕಗಳನ್ನು ಗಳಿಸಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹಾಗೆಯೇ ಮಕ್ಕಳ ರಕ್ಷಣೆ ವಿಭಾಗದಲ್ಲಿ 42ಕ್ಕೆ 39.20 ಅಂಕಗಳನ್ನು ಪಡೆದು ಗರಿಷ್ಟ ಸುರಕ್ಷತೆಯ ಕಾರೆನಿಸಿಕೊಂಡಿದೆ.

safest-cars-in-india-maruti-mahindra-tata

ಭಾರತದಲ್ಲಿ ಮಾರುತಿ ಡಿಜೈರ್ ಆರಂಭಿಕ ಬೆಲೆಯು ರೂ. 6.84 ಲಕ್ಷದಿಂದ ರೂ. 10.19 ಲಕ್ಷ (ಎರಡೂ ಬೆಲೆಗಳು, ಎಕ್ಸ್ ಶೋ ರೂಂ) ದವರೆಗೆ ಇದೆ. ಮಾರುತಿ ಸುಜುಕಿ ಡಿಜೈರ್ ಒಳಭಾಗದಲ್ಲಿ ಡ್ಯುಯಲ್-ಟೋನ್ ಬೀಜ್ (ಮೇಲಿನ ವಿಭಾಗ, ಡ್ಯಾಶ್ ಮತ್ತು ಸೀಟುಗಳು) ಮತ್ತು ಬ್ಲಾಕ್ (ಡ್ಯಾಶ್, ಡೋರ್ ಕಾರ್ಡ್‌ಗಳು ಮತ್ತು ಕೆಳಗಿನ ವಿಭಾಗಗಳು) ಥೀಮ್ ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 9, 2025, 11:19 [IST]
English summary
Safest cars in india maruti mahindra tata
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+