ಲೆಜೆಂಡರಿ ಸ್ಕೋಡಾ ಆಕ್ಟೋವಿಯಾ RS ರೀ ಎಂಟ್ರಿ ಘೋಷಣೆ: ಪ್ರೀ-ಬುಕಿಂಗ್ ಯಾವಾಗ?
ಪ್ರಮುಖ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ತನ್ನ ಜನಪ್ರಿಯ ಆಕ್ಟೇವಿಯಾ ಆರ್‌ಎಸ್ (Skoda Octavia RS) ಅನ್ನು ಮತ್ತೆ ಭಾರತಕ್ಕೆ ತರುವ ಮೂಲಕ ಚಾಲನಾ ಉತ್ಸಾಹಿಗಳಲ್ಲಿ ಉತ್ಸಾಹವನ್ನು ಮತ್ತೆ ಬೆಳಗಿಸಲು ಸಜ್ಜಾಗಿದೆ. ಹೊಚ್ಚಹೊಸ ಆಕ್ಟೇವಿಯಾ ಆರ್‌ಎಸ್‌ಗಾಗಿ ಪ್ರೀ - ಬುಕಿಂಗ್‌ಗಳು ಅಕ್ಟೋಬರ್ 6, 2025 ರಿಂದ ಪ್ರಾರಂಭವಾಗಲಿವೆ. ಪ್ರತ್ಯೇಕವಾಗಿ ಸ್ಕೋಡಾ ಆಟೋ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಐಕಾನಿಕ್ ಪರ್ಫಾರ್ಮೆನ್ಸ್ ಹೊಂದಿರುವ ಈ ಸೆಡಾನ್ ಕಾರು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಸಿಗಲಿದ್ದು, ಸಂಪೂರ್ಣ ನಿರ್ಮಿತ ಘಟಕಗಳಾಗಿ (ಎಫ್‌ಬಿಯು) ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ, ಆಕ್ಟೇವಿಯಾ RS ಮೊದಲ ಬಾರಿಗೆ 2004 ರಲ್ಲಿ ದೇಶದ ಮೊದಲ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರಾಗಿ ಆಗಮಿಸಿ, ತಕ್ಷಣವೇ ಹೃದಯಗಳನ್ನು ಗೆದ್ದಿತು. ಅಂದಿನಿಂದ ಪ್ರತಿ RS ಪೀಳಿಗೆಯನ್ನು ಆಚರಿಸಲಾಗುತ್ತಿದೆ, ಯುರೋಪಿಯನ್ ಎಂಜಿನಿಯರಿಂಗ್ ಅನ್ನು ದೈನಂದಿನ ಪ್ರಾಯೋಗಿಕತೆಯೊಂದಿಗೆ ಬೆರೆಸುವುದರ ಜೊತೆಗೆ ಚಾಲನೆಯ ರೋಮಾಂಚನವನ್ನು ಜೀವಂತವಾಗಿರಿಸಿಕೊಳ್ಳಲಾಗಿದೆ ಎಂದು ಸ್ಕೋಡಾ ತಿಳಿಸಿದೆ.

ಇದೀಗ ಹೊಸ ಆಕ್ಟೇವಿಯಾ RS ಮರು ಬಿಡುಗಡೆಯೊಂದಿಗೆ, ಸ್ಕೋಡಾ ಆಟೋ ಇಂಡಿಯಾ ಸಾಟಿಯಿಲ್ಲದ ಡ್ರೈವ್ ಡೈನಾಮಿಕ್ಸ್, ದಿಟ್ಟ ವಿನ್ಯಾಸ ಮತ್ತು ಒರಿಜಿನಲ್ RS ಸ್ಪಿರಿಟ್ ಭರವಸೆ ನೀಡುತ್ತದೆ. ಇದು ವಿಶೇಷತೆ ಮತ್ತು ಥ್ರಿಲ್ ಬಯಸುವವರಿಗಾಗಿ ವಿಶೇಷವಾಗಿ ರಚಿಸಲಾದ ಪರ್ಫಾಮೆನ್ಸ್ ಮೆಷಿನ್ ಆಗಿದೆ ಎಂದು ಕಂಪನಿ ಹೇಳಿದೆ.
ಈ ವಾಹನದ ಮರುಪರಿಚಯದ ಕುರಿತು ಪ್ರತಿಕ್ರಿಯಿಸಿದ ಸ್ಕೋಡಾ ಆಟೋ ಇಂಡಿಯಾದ ನಿರ್ದೇಶಕ ಆಶಿಶ್ ಗುಪ್ತಾ, ಈ ವರ್ಷದ ಆರಂಭದಲ್ಲಿ, ಭಾರತಕ್ಕೆ ಜಾಗತಿಕ ಐಕಾನ್ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಮರಳುವ ಭರವಸೆ ನೀಡಿದ್ದೆವು. ಅದರಂತೆ ಇಂದು ಆಕ್ಟೇವಿಯಾ ಆರ್‌ಎಸ್‌ನೊಂದಿಗೆ ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಆರ್‌ಎಸ್ ಬ್ಯಾಡ್ಜ್ ಎರಡು ದಶಕಗಳಿಗೂ ಹೆಚ್ಚು ಕಾಲ ವಿಶ್ವಾದ್ಯಂತ ಉತ್ಸಾಹಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿರುವ ಸಾಟಿಯಿಲ್ಲದ ಪರಂಪರೆಯನ್ನು ಹೊಂದಿದೆ. ಭಾರತದಲ್ಲಿ ಈ ಬಿಡುಗಡೆಯು ಕೇವಲ ಕಾರಿನ ಮರಳುವಿಕೆಯಲ್ಲ, ಬದಲಾಗಿ ಒಂದು ಚೈತನ್ಯದ ಮರಳುವಿಕೆ - ಕಾರ್ಯಕ್ಷಮತೆ, ಆಕಾಂಕ್ಷೆ ಮತ್ತು ಚಾಲನೆಯ ನಿಜವಾದ ರೋಮಾಂಚನವನ್ನು ಸಂಕೇತಿಸುವ ದಂತಕಥೆ" ಎಂದು ಹೇಳಿದರು.
ಐಕಾನ್ ಮರಳಿದೆ: ತೀಕ್ಷ್ಣವಾದ ವಿನ್ಯಾಸ, ದಿಟ್ಟ ನಿಲುವು ಮತ್ತು ಹೆಚ್ಚಿನ ವಿಶೇಷತೆಯೊಂದಿಗೆ, ಹೊಸ ಆಕ್ಟೇವಿಯಾ ಆರ್‌ಎಸ್ ಆಕಾಂಕ್ಷೆ ಮತ್ತು ಉತ್ಸಾಹದ ಸಂಕೇತವಾಗಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಸಜ್ಜಾಗಿದೆ. ಅಕ್ಟೋಬರ್ 6, 2025 ರಂದು ಮುಂಗಡ ಬುಕಿಂಗ್‌ಗಳು ಸೀಮಿತ ಅವಧಿಗೆ ಮಾತ್ರ ತೆರೆಯಲಾಗುತ್ತದೆ, ಸ್ಕೋಡಾ ಆಟೋ ಇಂಡಿಯಾದ ಅಧಿಕೃತ ವೆಬ್ ಸೈಟ್‌ನಲ್ಲಿ ಮಾತ್ರ ತೆರೆದಿರುತ್ತವೆ ಎಂದು ಕಂಪನಿ ಹೇಳಿದೆ.
ಆರ್‌ಎಸ್ ಬ್ಯಾಡ್ಜ್: ಆರ್‌ಎಸ್ ಬ್ಯಾಡ್ಜ್, ರ್ಯಾಲಿ ಸ್ಪೋರ್ಟ್‌ಗೆ ಸಂಕ್ಷಿಪ್ತವಾಗಿದ್ದು, ಇದು ತಲೆಮಾರುಗಳಾದ್ಯಂತ ಪರ್ಫಾಮೆನ್ಸ್, ನಿಖರತೆ ಮತ್ತು ಚಾಲನಾ ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಸ್ಕೋಡಾದ ಶ್ರೀಮಂತ ಮೋಟಾರ್‌ಸ್ಪೋರ್ಟ್ ಪರಂಪರೆಯಿಂದ ಪ್ರೇರಿತವಾದ RS ಮಾಡಲ್‌ಗಳು ರಸ್ತೆಗೆ ಟ್ರ್ಯಾಕ್ - ಬ್ರೆಡ್ ಎಂಜಿನಿಯರಿಂಗ್ ಅನ್ನು ಒಳಗೊಂಡಿವೆ ಎಂದು ಸ್ಕೋಡಾ ಹೇಳಿಕೊಂಡಿದೆ.
ಒಟ್ಟಾರೆ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಅಧಿಕೃತವಾಗಿ ಭಾರತಕ್ಕೆ ಮರಳುತ್ತಿದ್ದು, ಅಕ್ಟೋಬರ್ 6, 2025 ರಂದು ಸ್ಕೋಡಾ ಇಂಡಿಯಾದ ವೆಬ್‌ಸೈಟ್ ಮೂಲಕ ಪ್ರತ್ಯೇಕವಾಗಿ ಪ್ರೀ - ಬುಕಿಂಗ್‌ಗಳು ಪ್ರಾರಂಭವಾಗಲಿವೆ. ಈ ಹೈ ಪರ್ಫಾಮೆನ್ಸ್ ಸೆಡಾನ್‌ನ ಬೆಲೆಯನ್ನು ಅಕ್ಟೋಬರ್ 17, 2025 ರಂದು ಘೋಷಿಸಲಾಗುವುದು. ಯುಕೆ - ಸ್ಪೆಕ್ ಮಾದರಿಯನ್ನು ಆಧರಿಸಿದ ಮತ್ತು ಸಂಪೂರ್ಣವಾಗಿ CBU ಗಳಾಗಿ ಆಮದು ಮಾಡಿಕೊಳ್ಳಲಾದ ಕೇವಲ 100 ಕಾರುಗಳು ಈ ವರ್ಷ ದೇಶದಲ್ಲಿ ಲಭ್ಯವಿರುತ್ತವೆ.


Click it and Unblock the Notifications








