ವರ್ಷ ಮುಗಿದೇ ಇಲ್ಲ... ಆಗಲೇ ಸ್ಕೋಡಾ ಹೊಸ ಕಾರುಗಳ ಬಿಡುಗಡೆಗೆ ಸಜ್ಜು: 2026 ರಲ್ಲಿ ಧೂಳೆಬ್ಬಿಸಲಿದೆ!
ಸ್ಕೋಡಾ ಆಟೋ ಇಂಡಿಯಾ, ಫೇಸ್‌ಲಿಫ್ಟೆಡ್, ಪ್ರೀಮಿಯಂ ಸೆಡಾನ್‌ಗಳು ಮತ್ತು ಎಲೆಕ್ಟ್ರಿಕ್ ಕಾರುಗಳ ಮಿಶ್ರಣದೊಂದಿಗೆ 2026ಕ್ಕೆ ಸಜ್ಜಾಗಿದ್ದು, SUV ಗಳು ಮತ್ತು EV ಗಳು ಪ್ರಾಬಲ್ಯ ಹೊಂದಿರುವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ 2% ಮಾರುಕಟ್ಟೆ ಪಾಲನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ. ಹೌದು, 2025 ಸ್ಕೋಡಾ ಇಂಡಿಯಾಕ್ಕೆ ಮಹತ್ವದ ವರ್ಷವಾಗಿತ್ತು, ಕೊಡಿಯಾಕ್ ಪ್ರೀಮಿಯಂ SUV ಮತ್ತು ಆಕ್ಟೇವಿಯಾ RS ಪರ್ಫಾರ್ಮೆನ್ಸ್ ಸೆಡಾನ್ ಎಂಬ ಎರಡು ಹೊಸ ಕಾರುಗಳ ಬಿಡುಗಡೆ ಮಾಡಿದೆ. ಮುಂದಿನ ವರ್ಷ ಕುಶಾಕ್ ಮತ್ತು ಸ್ಲಾವಿಯಾಕ್ಕಾಗಿ ಫೇಸ್‌ಲಿಫ್ಟ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಪ್ರಮುಖವಾಗಿ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ ಜನವರಿ 2026 ರಲ್ಲಿ ಬಿಡುಗಡೆಯಾಗಲಿದೆ, ಇದರ ಬೆಲೆ ರೂ.11 ರಿಂದ 19 ಲಕ್ಷವಿರಲಿದೆ. LED ಹೆಡ್‌ಲೈಟ್‌ಗಳು, ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ADAS ಅಪ್‌ಗ್ರೇಡ್‌ಗಳು ಮತ್ತು ಮುಂಬರುವ CAFE ಮಾನದಂಡಗಳಿಗೆ ಅನುಗುಣವಾಗಿ ಸಂಸ್ಕರಿಸಿದ ಪವರ್‌ಟ್ರೇನ್‌ಗಳನ್ನು ನಿರೀಕ್ಷಿಸಲಾಗಿದೆ. ಯುವ ಉತ್ಸಾಹಿಗಳನ್ನು ಮೆಚ್ಚಿಸಲಿದೆ.

ನಂತರ ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್ ಮೇ ತಿಂಗಳಲ್ಲಿ ರೂ. 12 ರಿಂದ 19 ಲಕ್ಷ ಬೆಲೆಯಲ್ಲಿ ಬಿಡುಗಡೆಗೆ ರೆಡಿಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದು ಹುಂಡೈ ವೆರ್ನಾ ಮತ್ತು ಹೋಂಡಾ ಸಿಟಿಯಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಸೆಡಾನ್ ಜಾಗದಲ್ಲಿ - ಸುವ್ಯವಸ್ಥಿತ ಬಂಪರ್‌ಗಳು, ವೆಂಟಿಲೇಟೆಡ್ ಸೀಟ್‌ಗಳು ಮತ್ತು ವೈರ್‌ಲೆಸ್ ಚಾರ್ಜಿಂಗ್‌ನಂತಹ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬರಲಿದೆ.
ಐಕಾನಿಕ್ ಸೆಡಾನ್ ರೀ ಎಂಟ್ರಿ: ಐಕಾನಿಕ್ ಸ್ಕೋಡಾ ಸೂಪರ್ಬ್ ಫೆಬ್ರವರಿ ಅಥವಾ ಮೇ 2026 ರ ಸುಮಾರಿಗೆ ಮರಳಿ ಭಾರತದಲ್ಲಿ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಇದು ರೂ. 50 ರಿಂದ 60 ಲಕ್ಷ ಬೆಲೆಯಲ್ಲಿ ಮಾರಾಟವಾಗಲಿದೆ. ಇದು ಪ್ಲಗ್-ಇನ್ ಹೈಬ್ರಿಡ್ ಆಗಿ ಬರಲಿದ್ದು, ಮಸಾಜ್ ಸೀಟುಗಳು ಮತ್ತು ಲೆವೆಲ್ 2+ ADAS ನೊಂದಿಗೆ ಅತ್ಯಾಧುನಿಕ ಫೀಚರ್ಸ್ ತರಲಿದೆ. BMW 5 ಸಿರೀಸ್‌ನಂತಹ ಕಾರುಗಳನ್ನು ಬಯಸುವ ಗ್ರಾಹರಿಗೆ ಪರ್ಯಾಯ ಆಯ್ಕೆಯಾಗಲಿದೆ.

EV ಕಾರುಗಳು: ಸ್ಕೋಡಾ ಫೆಬ್ರವರಿ-ಜೂನ್ ನಡುವಿನಲ್ಲಿ ರೂ 25 ರಿಂದ 50 ಲಕ್ಷ ಬೆಲೆಯಲ್ಲಿ ನಿರೀಕ್ಷಿಸಲಾದ ಎಲ್ರೋಕ್ ಕಾಂಪ್ಯಾಕ್ಟ್ SUV ಯೊಂದಿಗೆ ಇವಿ ವಿಭಾಗಕ್ಕೆ ಇಳಿಯುವುದು ಖಚಿತವಾಗಿದೆ. MEB ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಈ ಕಾರು ಸಿಂಗಲ್ ಚಾರ್ಜ್‌ನಲ್ಲಿ 400+ ಕಿಮೀ ರೇಂಜ್, ಫಾಸ್ಟ್ ಚಾರ್ಜಿಂಗ್ ಇರಲಿದೆ. ಸ್ಕೋಡಾ ಇನ್ನೂ ದೃಢೀಕರಿಸದಿದ್ದರೂ, ಎಲ್ರೋಕ್ 2026 ಕ್ಕೆ ಬಿಡುಗಡೆಯಾಗಬಹುದು.
ಇದು ಭಾರತದಲ್ಲಿ ಬಿಡುಗಡೆಯಾದರೆ, ಎಲೆಕ್ಟ್ರಿಕ್ ಎಸ್‌ಯುವಿ ಹುಂಡೈ ಅಯೋನಿಕ್ 5 ಮತ್ತು BMW iX1 LWB ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ. ಯುರೋಪ್‌ನಲ್ಲಿ, ಎಲ್ರೋಕ್ ಅನ್ನು ಮೂರು ರಿಯರ್-ವೀಲ್-ಡ್ರೈವ್ ಆವೃತ್ತಿಗಳಲ್ಲಿ ಮಾರಾಟ ಮಾಡಲಾಗುತ್ತದೆ - 50, 60 ಮತ್ತು 85 - ಕ್ರಮವಾಗಿ 52kWh, 59kWh ಮತ್ತು 77kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ 560 ಕಿ.ಮೀ ವರೆಗೆ ರೇಂಜ್ ಹೊಂದಿದೆ. ಇದು ಕೇವಲ 6.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗ ತಲುಪಬಲ್ಲದು ಎನ್ನಲಾಗಿದೆ.
ವಿನ್ಯಾಸದ ದೃಷ್ಟಿಯಿಂದ, ಎಲ್ರೋಕ್ ಸ್ಕೋಡಾದ ಹೊಸ ಮಾಡರ್ನ್ ಸಾಲಿಡ್ ವಿನ್ಯಾಸವನ್ನು ಅನುಸರಿಸುತ್ತದೆ. ಸುಮಾರು 4.4 ಮೀಟರ್ ಉದ್ದ ಮತ್ತು 2.7-ಮೀಟರ್ ವೀಲ್‌ಬೇಸ್ ಹೊಂದಿರುವ ಇದು ಹೆಚ್ಚಿನ ಮಧ್ಯಮ ಗಾತ್ರದ SUV ಗಳಿಗಿಂತ ದೊಡ್ಡದಾಗಿದೆ. ಇದು ಉದಾರವಾದ ಕ್ಯಾಬಿನ್, ಸಾಕಷ್ಟು ಶೇಖರಣಾ ಪ್ರದೇಶಗಳು ಮತ್ತು 13-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ADAS ಸೂಟ್ ಅನ್ನು ಒಳಗೊಂಡಿರುವ ಸಮಗ್ರ ವೈಶಿಷ್ಟ್ಯದ ಸೆಟ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








