ಹೊಸ ಸ್ಕೋಡಾ ಎಲೆಕ್ಟ್ರಿಕ್ ಕಾರು ಅನಾವರಣ: ಏನಿದರ ವಿಶೇಷತೆ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಸ್ಕೋಡಾ ಎಲ್ರೋಕ್ ಎಂಬ ಎಲೆಕ್ಟ್ರಿಕ್ ಕಾರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನವನ್ನು ಮಾಡಿದೆ. ಹೊಸ ಸ್ಕೋಡಾ ಎಲ್ರೋಕ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೆಕ್ ರಿಪಬ್ಲಿಕ್‌ನಲ್ಲಿರುವ ಬ್ರ್ಯಾಂಡ್‌ನ ಪ್ರಧಾನ ಕಛೇರಿಯಲ್ಲಿ ತನ್ನ ವಿಶ್ವ ಪ್ರೀಮಿಯರ್ ಅನ್ನು ಹೊಂದಿತ್ತು. ಬ್ರ್ಯಾಂಡ್‌ನ ಜಾಗತಿಕ ಪೋರ್ಟ್‌ಫೋಲಿಯೊದಲ್ಲಿ, ಇದು ಎನ್ಯಾಕ್ iV ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಪಿಕ್ ಎಲೆಕ್ಟ್ರಿಕ್ ಎಸ್‍ಯುವಿ ನಡುವಿನ ಸ್ಥಾನ ಪಡೆದುಕೊಳ್ಳುತ್ತದೆ.

ಹೊಸ ಸ್ಕೋಡಾ ಎಲ್ರೋಕ್ ಇವಿ ಮಾದರಿಯು ಸ್ಕೋಡಾದ ಕರೋಕ್ ಎಸ್‍ಯುವಿಯ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಸ್ಕೋಡಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳ ಆಯ್ಕೆಗಳಲ್ಲಿದೆ. ಭಾರತದಲ್ಲಿ ಎಲ್ರೋಕ್ ಇವಿಯನ್ನು ಸ್ಕೋಡಾ ಬಿಡುಗಡೆ ಮಾಡುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಸ್ಕೋಡಾದ ಎಲೆಕ್ಟ್ರಿಕ್ ಕಾರು 470 ಲೀಟರ್ ಲಗೇಜ್ ಸಾಮರ್ಥ್ಯದೊಂದಿಗೆ ಅತಿದೊಡ್ಡ ಬೂಟ್ ಅನ್ನು ಹೊಂದಿದೆ.

Skoda Elroq EV

ಈ ಹೊಸ ಸ್ಕೋಡಾ ಎಲ್ರೋಕ್ ಇವಿ ಮಾದರಿಯು ಸಾಂಪ್ರದಾಯಿಕ ರೇಡಿಯೇಟರ್ ಮುಂಭಾಗದ ಗ್ರಿಲ್‌ನ ಬ್ಲ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿರುವ ಟೆಕ್-ಡೆಕ್ ಫೇಸ್' ಅನ್ನು ಹೊಂದಿದೆ. ಇನ್ನು ಈ ಸ್ಕೋಡಾ ಎಲ್ರೋಕ್ ಇವಿ ಮಾದರಿಯಲ್ಲಿ ಬಾನೆಟ್‌ನಲ್ಲಿ ಲೈನ್ ಗಳು ಮತ್ತು ಸ್ಕೋಡಾ ಎಂದು ಬರೆದಿರುವ ಬ್ಯಾಡ್ಜ್ ಅನ್ನು ನೋಡಬಹುದು.

ಈ ಹೊಸ ಸ್ಕೋಡಾ ಎಲ್ರೋಕ್ ಕೇವಲ 0.26 cd ಯ ಡ್ರ್ಯಾಗ್ ಗುಣಾಂಕವನ್ನು ಹೊಂದಿದೆ ಏಕೆಂದರೆ ಇದು 19 ರಿಂದ 21-ಇಂಚಿನ ಬ್ಲ್ಯಾಕ್ಡ್-ಔಟ್ ವೀಲ್ ಆರ್ಚ್‌ಗಳ ವ್ಯಾಪಕ ಶ್ರೇಣಿಯನು ಹೊಂದಿದೆ. ಈ ಹೊಸ ಸ್ಕೋಡಾ ಎಲೆಕ್ಟ್ರಿಕ್ ಕಾರು 9 ಬಾಹ್ಯ ಬಣ್ಣಗಳಲ್ಲಿ ಲಭ್ಯವಿದ್ದರೂ, ಟಿಮಿಯಾನೊ ಗ್ರೀನ್ ಎಲ್ರೊಕ್ ಎಲೆಕ್ಟ್ರಿಕ್ ಮಾದರಿಯಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.

Skoda Elroq EV

ಈ ಎಲೆಕ್ಟ್ರಿಕ್ ಕಾರಿನಲ್ಲಿ 13-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಇಂಟಿಗ್ರೇಟೆಡ್ ಚಾಟ್‌ಜಿಪಿಟಿಯೊಂದಿಗೆ AI- ಆಧಾರಿತ ಡಿಜಿಟಲ್ ವಾಯ್ಸ್ ಅಸಿಸ್ಟ್, ವರ್ಧಿತ ರಿಯಾಲಿಟಿ ಕಾರ್ಯಗಳೊಂದಿಗೆ ಹೆಡ್-ಅಪ್ ಡಿಸ್ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್ ಮತ್ತು ಆಂಬಿಯೆಂಟ್. ಹತ್ತು ಪ್ರಮಾಣಿತ ಬಣ್ಣಗಳು ಮತ್ತು ಐದು ಪೂರ್ವ-ನಿರ್ಧರಿತ ಮೂಡ್ ಸೆಟ್ಟಿಂಗ್‌ಗಳೊಂದಿಗೆ ಬರುತ್ತದೆ.

ಈ ಹೊಸ ಸ್ಕೋಡಾ ಎಲ್ರೋಕ್ ಎಲೆಕ್ಟ್ರಿಕ್ ಕಾರಿನಲ್ಲಿ ಬ್ರೇಕಿಂಗ್ ಕರ್ತವ್ಯಗಳನ್ನು ಮುಂಭಾಗದಲ್ಲಿ ಟ್ವಿನ್ ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳೊಂದಿಗೆ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ. ಇನ್ನು ಈ ಕಾರಿನಲ್ಲಿ ಸುರಕ್ಷತೆಗಾಗಿ, 9-ಏರ್‌ಬ್ಯಾಗ್‌ಗಳು, ಲೇನ್ ಅಸಿಸ್ಟ್ ಪ್ಲಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಜಾಮ್ ಅಸಿಸ್ಟ್, ಎಮರ್ಜೆನ್ಸಿ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಅನ್ನು ಹೊಂದಿದೆ.

Skoda Elroq EV

ಇನ್ನು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಮಾಡ್ಯುಲರ್ ಎಲೆಕ್ಟ್ರಿಫಿಕೇಶನ್ ಟೂಲ್‌ಕಿಟ್ (MEB) ಆರ್ಕಿಟೆಕ್ಚರ್‌ನ ಸ್ಕೋಡಾ ಎಲ್ರೋಕ್ ಇವಿ ಆಧಾರದಲ್ಲಿದೆ. ಇನ್ನು ಈ ಸ್ಕೋಡಾ ಎಲೆಕ್ಟ್ರಿಕ್ ಕಾರು 52 kWh, 59 kWh ಮತ್ತು 77 kWh ಎಂಬ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಎಂಟ್ರಿ ಲೆವೆಲ್ 52 kWh ರೂಪಾಂತರಗಳು ಸಿಂಗಲ್ ಚಾರ್ಜ್‌ನಲ್ಲಿ 370 ಕಿಮೀ ರೇಂಜ್ ಅನ್ನು ನೀಡುತ್ತದೆ.

ಇನ್ನು ಹಿಂಬದಿಯ ಆಕ್ಸಲ್‌ನಲ್ಲಿ ಇರಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 167 bhp ಪವರ್ ಔಟ್‌ಪುಟ್ ಮತ್ತು 310 Nm ಟಾರ್ಕ್ ಉತ್ಪಾದಿಸುತ್ತದೆ. 59 kWh ಬ್ಯಾಟರಿ ಪ್ಯಾಕ್‌ಗೆ ಸಂಬಂಧಿಸಿದಂತೆ, ಇದು ಪೂರ್ಣ ಚಾರ್ಜ್‌ನಲ್ಲಿ 418 ಕಿಮೀ ರೇಂಜ್ ನೀಡುತ್ತದೆ. ಕೊನೆಯದಾಗಿ 77 kWh ರೂಪಾಂತರವು WLTP ಸೈಕಲ್‌ನಲ್ಲಿ 580 ಕಿಮೀಗಳ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಮೋಟಾರು 282 bhp ಪವರ್ ಮತ್ತು 545 Nm ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Friday, January 17, 2025, 21:30 [IST]
English summary
Skoda elroq ev revealed at auto expo 2025 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+