ಯಾವುದೇ ಎಸ್‌ಯುವಿ ಇದುವರೆಗೆ ಸಾಧಿಸದ ಸಾಧನೆ! ಸ್ಕೋಡಾ ಕಾರಿಗೆ ಸಿಕ್ತು ಮನ್ನಣೆ

ಪ್ರಮುಖ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ (Skoda Auto India), ತನ್ನ ಸ್ಕೋಡಾ ಕೊಡಿಯಾಕ್ (Skoda Kodiaq) ಮೂಲಕ ಮೌಂಟ್ ಎವರೆಸ್ಟ್‌ನ ಉತ್ತರ ಮುಖದ ಬೇಸ್ ಕ್ಯಾಂಪ್ ಅನ್ನು ತಲುಪಿದ ಭಾರತದಿಂದ ಮೊದಲ ಪೆಟ್ರೋಲ್ ಚಾಲಿತ SUV ಆಗಿ ಇತಿಹಾಸ ನಿರ್ಮಿಸಿದೆ. ಈ ಅದ್ಭುತ ಸಾಧನೆಯನ್ನು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡೂ ಅಧಿಕೃತವಾಗಿ ಗುರುತಿಸಿವೆ ಎಂದು ಸ್ಕೋಡಾ ಕಂಪನಿ ಹೇಳಿದೆ.

ಮೌಂಟ್ ಎವರೆಸ್ಟ್ ನಾರ್ತ್ ಫೇಸ್ ಬೇಸ್ ಕ್ಯಾಂಪ್ ಅನ್ನು ತಲುಪಿದ ಭಾರತದಿಂದ ಬಂದ ಮೊದಲ ಪೆಟ್ರೋಲ್ - ಚಾಲಿತ SUV ಸ್ಕೋಡಾ ಕೊಡಿಯಾಕ್ ಆಗಿದೆ. ಈ ಐತಿಹಾಸಿಕ ಸಾಧನೆಯು ಭಾರತ, ನೇಪಾಳ ಮತ್ತು ಚೀನಾದಾದ್ಯಂತ ಸವಾಲಿನ 6,000 ಕಿ.ಮೀ ಪ್ರಯಾಣವಯನ್ನು ಒಳಗೊಂಡಿತ್ತು. ಇದು ಎವರೆಸ್ಟ್‌ನ ಟಿಬೆಟಿಯನ್ ಭಾಗದಲ್ಲಿ ತೀವ್ರ ಭೂಪ್ರದೇಶಗಳು, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ಎತ್ತರದ ಪ್ರದೇಶಗಳನ್ನು ದಾಟಿದೆ.

skoda-kodiaq-sets-new-record-to-conquer-the-mount-everest

ಸ್ಕೋಡಾ ಕೊಡಿಯಾಕ್‌ನ ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡೂ ಅಧಿಕೃತವಾಗಿ ಗುರುತಿಸಿವೆ. ಇದು ಸ್ಕೋಡಾ ಆಟೋ ಇಂಡಿಯಾಕ್ಕೆ ಮಾತ್ರವಲ್ಲದೆ ಭಾರತೀಯ ಆಟೋಮೋಟಿವ್ ಸಹಿಷ್ಣುತೆ ಮತ್ತು ಸಾಮರ್ಥ್ಯಕ್ಕೂ ಮಹತ್ವದ ಮೈಲಿಗಲ್ಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಕೋಡಾ ಕೊಡಿಯಾಕ್‌ ವಿಶೇಷತೆಗಳು

201 bh ಪವರ್ ಮತ್ತು 320 Nm ಟಾರ್ಕ್ ನೊಂದಿಗೆ 2.0 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿರುವ ಸ್ಕೋಡಾ ಕೋಡಿಯಾಕ್, 7 - ಸ್ಪೀಡ್ ಡ್ಯುಯಲ್ - ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಐಸ್ ಮತ್ತು ಆಫ್-ರೋಡ್ ಸೇರಿದಂತೆ ಬಹು ಡ್ರೈವ್ ಮೋಡ್‌ಗಳೊಂದಿಗೆ ಈ ಕಾರು ಸಜ್ಜುಗೊಂಡಿದೆ.

skoda-kodiaq-sets-new-record-to-conquer-the-mount-everest

ಈ ಕಾರು ವಿಶ್ವದ ಅತ್ಯಂತ ಕಠಿಣ ಚಾಲನಾ ಪರಿಸರಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್ ನಾರ್ತ್ ಫೇಸ್ ಬೇಸ್ ಕ್ಯಾಂಪ್‌ನಲ್ಲಿ, ಅಸಾಧಾರಣ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಸೌಕರ್ಯವನ್ನು ಪ್ರದರ್ಶಿಸಲಾಗಿದೆ. ಈ ದಾಖಲೆಯು ಎಸ್‌ಯುವಿಯ ಯುರೋಪಿಯನ್ ಎಂಜಿನಿಯರಿಂಗ್, ದೃಢತೆ ಮತ್ತು ಐಷಾರಾಮಿ ಮಿಶ್ರಣವನ್ನು ಎತ್ತಿ ತೋರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸಾಧನೆಯು 2025 ರಲ್ಲಿ ಸ್ಕೋಡಾ ಆಟೋ ಇಂಡಿಯಾದ ಬಲವಾದ ಮಾರಾಟ ಬೆಳವಣಿಗೆ ಮತ್ತು ಭಾರತದಾದ್ಯಂತ ತನ್ನ ಗ್ರಾಹಕರ ವ್ಯಾಪ್ತಿಯ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ಯುರೋಪಿಯನ್ ವಿನ್ಯಾಸ ಮತ್ತು ನೈಜ-ಪ್ರಪಂಚದ ಕಾರ್ಯಕ್ಷಮತೆಯ ಸಂಯೋಜನೆಯಾಗಿ ಕೊಡಿಯಾಕ್‌ನ ಪವರ್‌ ಅನ್ನು ಈ ಪ್ರಯಾಣ ಪ್ರದರ್ಶಿಸಿದೆ.

skoda-kodiaq-sets-new-record-to-conquer-the-mount-everest

ಈ ಗಮನಾರ್ಹ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸ್ಕೋಡಾ ಆಟೋ ಇಂಡಿಯಾದ ನಿರ್ದೇಶಕ ಆಶಿಶ್ ಗುಪ್ತಾ, "ಸ್ಕೋಡಾ ಕೊಡಿಯಾಕ್ ಮೌಂಟ್ ಎವರೆಸ್ಟ್ ನಾರ್ತ್ ಫೇಸ್ ಬೇಸ್ ಕ್ಯಾಂಪ್ ಅನ್ನು ತಲುಪಿ ವಶಪಡಿಸಿಕೊಂಡ ಭಾರತದ ಮೊದಲ ಪೆಟ್ರೋಲ್ ಎಸ್‌ಯುವಿ ಆಗಿದ್ದು, ಭಾರತ ಮತ್ತು ಏಷ್ಯಾದಲ್ಲಿ ವಿಶಿಷ್ಟ ದಾಖಲೆಯ ಸ್ಥಾನಮಾನವನ್ನು ಗಳಿಸಿದೆ.

ಬೇರೆ ಯಾವುದೇ ಪೆಟ್ರೋಲ್ SUV ಇದುವರೆಗೆ ಇಂತಹ ಅಸಾಧಾರಣ ಸವಾಲನ್ನು ಸ್ವೀಕರಿಸಿ ಜಯಗಳಿಸಿಲ್ಲವಾದ್ದರಿಂದ ಇದು ವಿಭಿನ್ನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ನಮ್ಮ ಉತ್ಪನ್ನಗಳು, ನಮ್ಮ ಎಂಜಿನಿಯರಿಂಗ್ ಮತ್ತು ಸುರಕ್ಷತೆ, ಗುಣಮಟ್ಟ ಸೇರಿದಂತೆ ವಿಶ್ವಾಸಾರ್ಹತೆಗೆ ನಮ್ಮ ಬದ್ಧತೆಯ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ. ಸಾಮಾನ್ಯವನ್ನು ಮೀರಿದ ಪ್ರಯಾಣಗಳನ್ನು ಸಕ್ರಿಯಗೊಳಿಸುವತ್ತ ನಾವು ನಮ್ಮ ಗಮನವನ್ನು ಮುಂದುವರಿಸುತ್ತೇವೆ" ಎಂದರು.

More from DriveSpark

Article Published On: Tuesday, July 29, 2025, 10:20 [IST]
English summary
Skoda kodiaq sets new record to conquer the mount everest
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+