ಬ್ರಾಂಡ್‌ಗೆ ಚಿನ್ನದ ಮೊಟ್ಟೆಯಾದ ಎಸ್‌ಯುವಿ: ಕಡಿಮೆ ಬೆಲೆ... ಖರೀದಿಸಲು ಮುಗಿಬಿದ್ದ ಜನ

ಪ್ರಮುಖ ಕಾರು ತಯಾರಕಾ ಕಂಪನಿಯಾಗಿರುವ ಸ್ಕೋಡಾ, ಭಾರತದಲ್ಲಿ ತನ್ನ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದೆ. ಜುಲೈ 2025 ರಲ್ಲಿ 5,554 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಕಳೆದ ವರ್ಷ ಇದೇ ತಿಂಗಳಲ್ಲಿ ಕೇವಲ 2,103 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಇದಲ್ಲದೆ, ಬ್ರಾಂಡ್ ಜೂನ್ 2025 ರಲ್ಲಿ 5,014 ಯುನಿಟ್‌ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಶೇ11 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದರಲ್ಲಿ ಹೆಚ್ಚಿನ ಪಾಲು ಸ್ಕೋಡಾ ಕೈಲಾಕ್ ಧಕ್ಕಿಸಿಕೊಂಡಿರುವುದು ವಿಶೇಷ.

ಸ್ಕೋಡಾ ಕೈಲಾಕ್ ಎಸ್‌ಯುವಿ ಜುಲೈ 2025 ರಲ್ಲಿ 3,377 ಯುನಿಟ್ ಕಾರುಗಳ ಮಾರಾಟದೊಂದಿಗೆ ಕಂಪನಿಯ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದಾಗಿನಿಂದ ಕಂಪನಿಯ ಅತ್ಯಂತ ಲಾಭದಾಯಕ ಮತ್ತು ಹೆಚ್ಚು ಮಾರಾಟವಾದ ಕಾರಾಗಿ ಗುರ್ತಿಸಿಕೊಂಡಿದ್ದು, ಬ್ರಾಂಡ್‌ಗೆ ಗೇಮ್ - ಚೇಂಜರ್ ಆಗಿ ಮಾರ್ಪಟ್ಟಿದೆ.

skoda-kylaq-2025-july-month-sales-report

ಕೈಲಾಕ್‌ನ ಬಲವಾದ ಕಾರ್ಯಕ್ಷಮತೆಯು ಸ್ಕೋಡಾ ನಾಲ್ಕು ಸ್ಥಾನಗಳ ಏರಿಕೆ ಕಂಡು 2025 ರಲ್ಲಿ ಭಾರತದ ಅಗ್ರ ಏಳು ಆಟೋಮೋಟಿವ್ ಬ್ರಾಂಡ್‌ಗಳಲ್ಲಿ ಒಂದಾಗಲು ಅವಕಾಶ ಮಾಡಿಕೊಟ್ಟಿದೆ. ಕೈಲಾಕ್ ಸಬ್‌-4 ಮೀಟರ್‌ಗಿಂತ ಕಡಿಮೆ SUV ವಿಭಾಗದಲ್ಲಿ ಉತ್ತಮ ಮಾರಾಟದೊಂದಿಗೆ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ. ಕುಶಾಕ್ ಮತ್ತು ಸ್ಲಾವಿಯಾದಂತಹ ಹಳೆಯ ಮಾದರಿಗಳ ಮೇಲಿನ ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ.

ಸ್ಕೋಡಾ ಕೈಲಾಕ್ ಕಾರಿನ ಬೇಸ್‌ ವೇರಿಯೆಂಟ್ ಮಾದರಿಯ ಬೆಲೆ ರೂ. 8.25 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ವೇರಿಯೆಂಟ್ ಬೆಲೆ ರೂ. 13.99 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ. ಈ ಕೈಲಾಕ್ ಕಾರು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

skoda-kylaq-2025-july-month-sales-report

ಫೀಚರ್ಸ್ ವಿಷಯಕ್ಕೆ ಬಂದರೆ ಕೈಲಾಕ್ 10.1 ಇಂಚಿನ ಟಚ್ ಸ್ಕ್ರೀನ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್, ಸಿಂಗಲ್ - ಪೇನ್ ಸನ್ ರೂಫ್ ಮತ್ತು 6-ವೇ ಫ್ರಂಟ್ ಫಂಕ್ಷನಲ್ ಸೀಟ್‌ಗಳನ್ನು ಹೊಂದಿದೆ. ಜೊತೆಗೆ ಟು ಸ್ಪೋಕ್ ಸ್ಟೀರಿಂಗ್ ವೀಲ್, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪವರ್‌ಟ್ರೇನ್ ವಿಷಯಕ್ಕೆ ಬಂದರೆ 1.0-ಲೀಟರ್ ಪೆಟ್ರೋಲ್ ಎಂಜಿನ್‌ ನೀಡಲಾಗಿದ್ದು, ವೇರಿಯೆಂಟ್‌ಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಆಯ್ಕೆಗಳಿವೆ. ಸ್ಕೋಡಾ ಪ್ರಕಾರ, ಮ್ಯಾನುವಲ್‌ನಲ್ಲಿ 19.68 ಕಿ.ಮೀ ಮತ್ತು ಆಟೋಮ್ಯಾಟಿಕ್‌ನಲ್ಲಿ 19.05 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

skoda-kylaq-2025-july-month-sales-report

ಸುರಕ್ಷತೆ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ - ಕೊಲಿಷನ್ ಬ್ರೇಕಿಂಗ್, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಎಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಚೈಲ್ಡ್ ಸೀಟ್ ಮೌಂಟ್‌ಗಳು, ಡಿಸ್ಕ್ & ಡ್ರಮ್‌ ಬ್ರೇಕ್‌ಗಳನ್ನು ಹೊಂದಿದೆ.

ಬ್ರಿಲಿಯಂಟ್ ಸಿಲ್ವರ್, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಹಾಗೂ ಟೊರ್ನಾಡೊ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಸ್ಕೋಡಾ ಕೈಲಾಕ್ ಅನ್ನು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯೆಂಟ್ ‌ಗಳಲ್ಲಿ ನೀಡಲಾಗುತ್ತಿದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ಹೆಚ್ಚಿನ ಲಗೇಜ್ ಸಾಗಿಸಲು 446 ಲೀಟರ್ ಬೂಟ್ ಸ್ಪೇಸ್‌ನ್ನು ಒಳಗೊಂಡಿದ್ದು, 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒದಗಿಸಲಾಗಿದೆ. ಈ ಕಾರು 3995 ಎಂಎಂ ಉದ್ದ, 1783 ಎಂಎಂ ಅಗಲ ಹಾಗೂ 1619 ಎಂಎಂ ಎತ್ತರವಿದೆ. ಈ ಸ್ಪೋರ್ಟಿ ಎಸ್‌ಯುವಿ ಮಾರುಕಟ್ಟೆಯಲ್ಲಿ ಸದ್ಯ ಬಲವಾದ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Monday, August 18, 2025, 13:10 [IST]
English summary
Skoda kylaq 2025 july month sales report
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+