18 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಹೊಸ 'Skoda Kylaq' ಕಾರನ್ನು ಖರೀದಿಸಬೇಕೇ.. ಇಲ್ಲಿದೆ ಸಿಹಿ-ಕಹಿ ಸುದ್ದಿ!

ಸ್ಕೋಡಾ ಕೈಲಾಕ್ (Skoda Kylaq) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಎಸ್‌ಯುವಿ ದರವನ್ನು ಕಂಪನಿಯು ಪರಿಷ್ಕರಿಸಿದೆ. ವಿಶೇಷವಾಗಿ ಕೆಲವು ರೂಪಾಂತರಗಳ (ವೇರಿಯೆಂಟ್) ಬೆಲೆಯನ್ನು ಹೆಚ್ಚಿಸಲಾಗಿದೆ. ಮತ್ತೊಂದೆಡೆ ಹಲವು ರೂಪಾಂತರಗಳ ದರವನ್ನು ಕಡಿತಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ಕ್ಲಾಸಿಕ್ (Classic) ರೂಪಾಂತರದ ಬೆಲೆ ರೂ.36,000 ಏರಿಕೆಯಾಗಿದೆ. ಇದು ರೂ.8.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಈ ಹಿಂದೆ ರೂ.7.89 ಲಕ್ಷ ದರವನ್ನು ಪಡೆದುಕೊಂಡಿತ್ತು. ಸಿಗ್ನೇಚರ್ (Signature) ರೂಪಾಂತರದ ಬೆಲೆ ರೂ.26,000 ಏರಿಕೆಯಾಗಿದ್ದು, ರೂ.10.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.

Skoda Kylaq Suv Price Increase And Reduce Details

ಇದೇ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸಿಗುವ ಸಿಗ್ನೇಚರ್ ಪ್ಲಸ್ (Signature +) ರೂಪಾಂತರದ ಬೆಲೆ ರೂ.15,000 ಇಳಿಕೆಯಾಗಿದ್ದು, ರೂ.11.04 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಮೊದಲು ರೂ.11.25 ಲಕ್ಷ ಬೆಲೆಯಿತ್ತು. ಹಾಗೆಯೇ ಪ್ರೆಸ್ಟೀಜ್ (Prestige) ರೂಪಾಂತರದ ದರವನ್ನು ರೂ.46,000 ಕಡಿತಗೊಳಿಸಲಾಗಿದೆ. ಇದು ರೂ.12.89 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಲಭ್ಯವಿರುವ ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ರೂಪಾಂತರಗಳ ದರವನ್ನು ರೂ.5000 ರಿಂದ 41,000 ವರೆಗೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಈ ರೂಪಾಂತರಗಳು ಕ್ರಮವಾಗಿ ರೂ.10.95 ಲಕ್ಷ, ರೂ.12.35 ಲಕ್ಷ ಹಾಗೂ ರೂ.13.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿವೆ. ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಂಪನಿಯು ಹೇಳಿದೆ.

Skoda Kylaq Suv Price Increase And Reduce Details

ಸ್ಕೋಡಾ ಕೈಲಾಕ್ ಎಸ್‌ಯುವಿ ವಿಶೇಷತೆಗಳೇನು..

ಈ ಕಾರು ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಬ್ರಿಲಿಯಂಟ್ ಸಿಲ್ವರ್, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಹಾಗೂ ಟೊರ್ನಾಡೊ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 446 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ ಸ್ಕೋಡಾ ಕೈಲಾಕ್ ಎಸ್‌ಯುವಿ ಬೆಲೆ ತಕ್ಕಂತೆ ಹೆಚ್ಚು ಬಲಶಾಲಿಯಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದು 1.0-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 15 ರಿಂದ 18 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ರೂಫ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

Skoda Kylaq Suv Price Increase And Reduce Details

ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ, ದೇಶೀಯ ವಾಹನ ಮಾರುಕಟ್ಟೆಯಲ್ಲಿ ಸಾಲು - ಸಾಲು ಪ್ರತಿಸ್ಪರ್ಧಿ ಕಾರುಗಳನ್ನು ಹೊಂದಿದೆ. ಬಹುಮುಖ್ಯವಾಗಿ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್‌ ಎಸ್‌ಯುವಿಗಳು ಪ್ರಬಲವಾದ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 6, 2025, 16:13 [IST]
English summary
Skoda kylaq suv price increase and reduce details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+