Skoda: ಸ್ಕೋಡಾ ಭಾರತಕ್ಕೆ ಲಗ್ಗೆಯಿಟ್ಟು 25 ವರ್ಷ: ಈಗೇನು ಮಾಡಿದೆ ಗೊತ್ತಾ? ನೀವೆ ನೋಡಿ

ಭಾರತದಲ್ಲಿ ತನ್ನ 25ನೇ ವಾರ್ಷಿಕೋತ್ಸವ ಮತ್ತು ಜಾಗತಿಕವಾಗಿ 130 ವರ್ಷಗಳನ್ನು ಆಚರಿಸುತ್ತಿರುವ ಸ್ಕೋಡಾ (Skoda) ಆಟೋ ಇಂಡಿಯಾ, ತನ್ನ ಅತ್ಯುತ್ತಮ ಮಾರಾಟವಾದ ಮಾದರಿಗಳಾದ ಕುಶಾಕ್, ಸ್ಲಾವಿಯಾ ಮತ್ತು ಕೈಲಾಕ್‌ಗಳ ಲಿಮಿಟೆಡ್ ಎಡಿಷನ್‌ಗಳನ್ನು ಪರಿಚಯಿಸಿದೆ. ಈ ಸ್ಪೆಷಲ್ ಎಡಿಷನ್‌ಗಳು ವಿಶಿಷ್ಟ ವಿನ್ಯಾಸ ವರ್ಧನೆಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿವೆ. ಜೊತೆಗೆ ವಿಶೇಷ 25ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಅನ್ನು ಒಳಗೊಂಡಿವೆ. ಸ್ಪೆಷಲ್ ಎಡಿಷನ್‌ಗಳನ್ನು ಅಸ್ತಿತ್ವದಲ್ಲಿರುವ ಹೈ-ಸ್ಪೆಕ್ ಟ್ರಿಮ್‌ಗಳಾದ ಕುಶಾಕ್ ಮತ್ತು ಸ್ಲಾವಿಯಾದ ಮಾಂಟೆ ಕಾರ್ಲೊ ಮತ್ತು ಕೈಲಾಕ್‌ನ ಪ್ರೆಸ್ಟೀಜ್ ಮತ್ತು ಸಿಗ್ನೇಚರ್+ ನಲ್ಲಿ ನೀಡಲಾಗುವುದು.

ಕುಶಾಕ್ ಮಾಂಟೆ ಕಾರ್ಲೊ ಲಿಮಿಟೆಡ್ ಎಡಿಷನ್

ಈ ಸ್ಪೆಷಲ್ ಎಡಿಷನ್ ಮಾಂಟೆ ಕಾರ್ಲೊವನ್ನು ದಿಟ್ಟ, ಸ್ಪೋರ್ಟಿ ಡಿಸೈನ್‌ನೊಂದಿಗೆ ನಿರ್ಮಿಸಲಾಗಿದೆ. ಡೀಪ್ ಬ್ಲ್ಯಾಕ್ ಮತ್ತು ಟೊರ್ನಾಡೊ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಡೀಪ್ ಬ್ಲ್ಯಾಕ್ ಪೇಂಟ್ ಆಯ್ಕೆಯು ಟೊರ್ನಾಡೊ ರೆಡ್‌ನಲ್ಲಿ ಆಕ್ಸೆಸರೀಸ್‌ಗಳನ್ನು ಪಡೆಯಲಿದ್ದು, ಟೊರ್ನಾಡೊ ರೆಡ್ ವ್ಯತಿರಿಕ್ತವಾಗಿ ಡೀಪ್ ಬ್ಲ್ಯಾಕ್ ಆಕ್ಸೆಸರೀಸ್‌ಗಳನ್ನು ಪಡೆಯಲಿದೆ.

skoda-launched-25th-anniversary-editions-of-kylaq-kushaq-and-slavia

ಡಿಸೈನ್ ವಿಷಯಕ್ಕೆ ಬಂದರೆ ಫಾಗ್ ಲ್ಯಾಂಪ್ ಗಾರ್ನಿಶ್, ಟ್ರಂಕ್ ಗಾರ್ನಿಶ್ ಮತ್ತು ಲೋವರ್ ಡೋರ್ ಗಾರ್ನಿಶ್ ಸೇರಿವೆ. ಲಿಮಿಟೆಡ್ ಎಡಿಷನ್ ಗ್ರಾಹಕರಿಗೆ ಉಚಿತ ಆಕ್ಸೆಸರೀಸ್ ಕಿಟ್‌ನೊಂದಿಗೆ ಗಮನಾರ್ಹ ವೈಶಿಷ್ಟ್ಯ ವರ್ಧನೆಗಳನ್ನು ನೀಡುತ್ತದೆ. ಇದರಲ್ಲಿ 360 - ಡಿಗ್ರಿ ಕ್ಯಾಮೆರಾ ಸೆಟಪ್, ಪಡಲ್ ಲ್ಯಾಂಪ್‌ಗಳು, ಅಂಡರ್‌ಬಾಡಿ ಲೈಟ್‌ಗಳು, ಫಿನ್ ಸ್ಪಾಯ್ಲರ್ ಮತ್ತು ಬಿ - ಪಿಲ್ಲರ್‌ನಲ್ಲಿ 25 ನೇ ವಾರ್ಷಿಕೋತ್ಸವ ಬ್ಯಾಡ್ಜಿಂಗ್ ಇರಲಿದೆ.

ಸ್ಲಾವಿಯಾ ಮಾಂಟೆ ಕಾರ್ಲೊ ಲಿಮಿಟೆಡ್ ಎಡಿಷನ್

ಕುಶಾಕ್‌ನಂತೆಯೇ, ಸ್ಲಾವಿಯಾ ಮಾಂಟೆ ಕಾರ್ಲೊ ಲಿಮಿಟೆಡ್ ಎಡಿಷನ್ ಕೂಡ ಅದೇ ದೃಢವಾದ ಪವರ್‌ಟ್ರೇನ್ ಮತ್ತು ವೈಶಿಷ್ಟ್ಯ-ಭರಿತ ಅನುಭವವನ್ನು ನೀಡುತ್ತದೆ. ಸ್ಕೋಡಾವನ್ನು ಬಯಸುವ ಗ್ರಾಹಕರಿಗೆ ವಿಶೇಷ ಶೈಲಿಯ ಹೆಚ್ಚುವರಿ ಫ್ಲೇರ್ ಅನ್ನು ನೀಡುತ್ತದೆ. ಡೀಪ್ ಬ್ಲ್ಯಾಕ್ ಮತ್ತು ಟೊರ್ನಾಡೊ ರೆಡ್ ಬಾಹ್ಯ ಬಣ್ಣಗಳಲ್ಲಿ ಲಭ್ಯವಿದೆ.

skoda-launched-25th-anniversary-editions-of-kylaq-kushaq-and-slavia

ಹೊಸ ಸೇರ್ಪಡೆಗಳಲ್ಲಿ ಮುಂಭಾಗದ ಬಂಪರ್ ಸ್ಪಾಯ್ಲರ್, ವ್ಯತಿರಿಕ್ತ ಬಣ್ಣದಲ್ಲಿ ಟ್ರಂಕ್ ಮತ್ತು ಲೋವರ್ ಡೋರ್ ಗಾರ್ನಿಶ್‌ಗಳು ಮತ್ತು 360 - ಡಿಗ್ರಿ ಕ್ಯಾಮೆರಾ ಸೆಟಪ್, ಪಡಲ್ ಲ್ಯಾಂಪ್‌ಗಳು, ಅಂಡರ್‌ಬಾಡಿ ಲೈಟ್‌ಗಳು ಮತ್ತು ಬಿ - ಪಿಲ್ಲರ್‌ನಲ್ಲಿ 25 ನೇ ವಾರ್ಷಿಕೋತ್ಸವ ಬ್ಯಾಡ್ಜಿಂಗ್ ಅನ್ನು ಒಳಗೊಂಡಿರುವ ಪೂರಕ ಆಕ್ಸೆಸರೀಸ್ ಕಿಟ್ ನೀಡಲಾಗುತ್ತದೆ.

ಕೈಲಾಕ್ ಲಿಮಿಟೆಡ್ ಎಡಿಷನ್

ಸ್ಕೋಡಾದ ಹೊಸ SUV ಕೊಡುಗೆಯಾದ ಕೈಲಾಕ್, ಸಿಗ್ನೇಚರ್+ (MT) ಮತ್ತು ಪ್ರೆಸ್ಟೀಜ್ (MT) ವೇರಿಯೆಂಟ್‌ಗಳಲ್ಲಿ ಸ್ಪೆಷಲ್ ಎಡಿಷನ್ ಅನ್ನು ನೀಡಲಾಗುತ್ತದೆ. ಅದೇ 360-ಡಿಗ್ರಿ ಕ್ಯಾಮೆರಾ ಸೆಟಪ್, ಪೂಡ್ಲ್ ಲ್ಯಾಂಪ್‌ಗಳು ಮತ್ತು ಬಿ - ಪಿಲ್ಲರ್‌ನಲ್ಲಿ 25 ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಅನ್ನು ಒಳಗೊಂಡಿರುವ ಉಚಿತ ಟೂಲ್ ಕಿಟ್ ಅನ್ನು ಸಹ ನೀಡಲಾಗುತ್ತದೆ. ಈ ಸ್ಪೆಷಲ್ ಎಡಿಷನ್ 7 ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

ವಿಶೇಷತೆ: ಕುಶಾಕ್, ಸ್ಲಾವಿಯಾ ಮತ್ತು ಕೈಲಾಕ್‌ನ ಸ್ಪೆಷಲ್ ಎಡಿಷನ್ ಕಾರುಗಳು ಕೇವಲ 500 ಮಾತ್ರ ಲಭ್ಯವಿರಲಿವೆ. ಕುಶಾಕ್ ಮತ್ತು ಸ್ಲಾವಿಯಾ ಮಾಂಟೆ ಕಾರ್ಲೊ ಲಿಮಿಟೆಡ್ ಆವೃತ್ತಿಗಳು 1.0 TSI (MT/AT) ಮತ್ತು 1.5 TSI (DSG) ಎರಡರಲ್ಲೂ ಲಭ್ಯವಿರುತ್ತವೆ. ಆದರೆ ಕೈಲಾಕ್‌ನ ಸೀಮಿತ ಆವೃತ್ತಿಯು 1.0 TSI ಎಂಜಿನ್‌ ಹೊಂದಿರಲಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಾಗಿ ಪ್ರತ್ಯೇಕವಾಗಿ ಜೋಡಿಸಲಾಗಿದೆ.

ಕುಶಾಕ್ ಸ್ಪೆಷಲ್ ಎಡಿಷನ್ ಬೆಲೆಯು ರೂ. 16,39,000 ದಿಂದ ಆರಂಭವಾಗಿ ರೂ. 19,09,000 ವರೆಗೆ ಇದೆ. ಹಾಗೆಯೇ ಸ್ಲಾವಿಯಾ ಸ್ಪೆಷಲ್ ಎಡಿಷನ್ ಬೆಲೆಯು ರೂ. 15,63,000 ದಿಂದ ಆರಂಭವಾಗಿ ರೂ. 18,33,000 (ಎಕ್ಸ್‌ ಶೋರೂಂ) ವರೆಗೆ ಇದೆ. ಕೈಲಾಕ್ ಸ್ಪೆಷಲ್ ಎಡಿಷನ್ ಸಿಗ್ನೇಚರ್+ ವೇರಿಯೆಂಟ್ ಬೆಲೆಯು ರೂ. 11,25,000 ಇದ್ದರೇ, ಪ್ರೆಸ್ಟೀಜ್ ಬೆಲೆಯು ರೂ. 12,89,000 (ಎಲ್ಲಾ ಬೆಲೆಗಳು ಎಕ್ಸ್‌ ಶೋರೂಂ) ಇದೆ.

More from DriveSpark

Article Published On: Monday, August 11, 2025, 14:37 [IST]
English summary
Skoda launched 25th anniversary editions of kylaq kushaq and slavia
Read more on skoda new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+