ಸ್ಥಗಿತಗೊಂಡಿದ್ದ ಸ್ಕೋಡಾ ಕಾರು ಬಿಡುಗಡೆಗೆ ಸಜ್ಜು: ಕೇವಲ 100 ಮಾತ್ರ ಮಾರಾಟ... ಬೇಗ ಬುಕ್ ಮಾಡಿ!

ಸ್ಕೋಡಾ ಆಕ್ಟೇವಿಯಾ ಭಾರತಕ್ಕೆ ಮರಳುವುದಾಗಿ ಕಂಪನಿ ಘೋಷಿಸಿದ್ದು, ಬುಕಿಂಗ್‌ಗಳು ಈಗ ತೆರೆದಿವೆ. ಧೀರ್ಘ ವಿರಾಮದ ನಂತರ ಜನಪ್ರಿಯ ಪ್ರೀಮಿಯಂ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಗೆ ಮರಳಿ ತರಲಾಗುತ್ತಿದೆ. ಈ ವಿಶೇಷ ಕಾರಿನ ಕೇವಲ 100 ಯೂನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಈ ಕಾರಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರುವವರು ಇದನ್ನು ಪಡೆದುಕೊಳ್ಳಲು ತ್ವರಿತವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಬುಕಿಂಗ್ ಪ್ರಕ್ರಿಯೆಯು ಸ್ಕೋಡಾದ ಅಧಿಕೃತ ವೆಬ್‌ಸೈಟ್ ಮತ್ತು ಪ್ರಮುಖ ನಗರಗಳಲ್ಲಿನ ಆಯ್ದ ಡೀಲರ್‌ಶಿಪ್‌ಗಳಲ್ಲಿ ನಡೆಯುತ್ತಿದೆ.

ಸ್ಕೋಡಾ ಆಕ್ಟೇವಿಯಾ ಮುಖ್ಯಾಂಶಗಳು: 2025ರ ಹೊಸ ಸ್ಕೋಡಾ ಆಕ್ಟೇವಿಯಾ ಲಿಮಿಟೆಡ್ ಎಡಿಷನ್ ತನ್ನ ಪ್ರೀಮಿಯಂ ಸ್ಟೈಲಿಂಗ್, ಸುಧಾರಿತ ತಂತ್ರಜ್ಞಾನ, ಆಕರ್ಷಕ ಫೀಚರ್ಸ್ ಮತ್ತು ಸ್ಕೋಡಾದ ಯುರೋಪಿಯನ್ ಸುಸಜ್ಜಿತ ಕ್ಯಾಬಿನ್‌ನೊಂದಿಗೆ ಮರಳುತ್ತಿದೆ. ಈ ಕಾರು ಭಾರತೀಯ ಸೆಡಾನ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇದು ಚಾಲನಾ ಡೈನಾಮಿಕ್ಸ್, ಸೌಕರ್ಯ ಮತ್ತು ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

skoda-octavia-rs-bookings-officially-open-in-india

ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ ಟರ್ಬೊ - ಪೆಟ್ರೋಲ್ ಎಂಜಿನ್, ವರ್ಚುವಲ್ ಕಾಕ್‌ಪಿಟ್ ಡಿಸ್ಪ್ಲೇ, ಸುಧಾರಿತ ಸಂಪರ್ಕ ಆಯ್ಕೆಗಳು, ಮಲ್ಟಿ - ಝೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಸಿಗ್ನೇಚರ್ ಸುರಕ್ಷತಾ ಫೀಚರ್ಸ್ ಸೇರಿವೆ. ಈ ಹೈ ಪರ್ಫಾಮೆನ್ಸ್ ಸೆಡಾನ್‌ನ ಬೆಲೆಯನ್ನು ಅಕ್ಟೋಬರ್ 17, 2025 ರಂದು ಘೋಷಿಸಲಾಗುವುದು. ಈ 100 ಕಾರುಗಳು ಯುಕೆ - ಮಾಡಲ್‌ನ್ನು ಆಧರಿಸಿ ಸಂಪೂರ್ಣವಾಗಿ CBU ಆಗಿ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತದಲ್ಲಿ ಸೆಡಾನ್‌ಗಳಿಗೆ ಪ್ರಸ್ತುತ ಬೇಡಿಕೆ ಕಡಿಮೆಯಾಗಿರುವುದರಿಂದ ಈ ವಿಶೇಷ ಸ್ಕೋಡಾ ಆಕ್ಟೇವಿಯಾ ಲಭ್ಯತೆಯನ್ನು (ಆರಂಭದಲ್ಲಿ ಕೇವಲ 100 ಕಾರುಗಳ ಮಾರಾಟ) ಸೀಮಿತಗೊಳಿಸಲಾಗಿದೆ. ಮೊದಲು ಗ್ರಾಹಕರ ಪ್ರತಿಕ್ರಿಯೆಯನ್ನು ಪರೀಕ್ಷಿಸಿ ನಂತರ ವ್ಯಾಪಕ ಲಭ್ಯತೆಗೆ ಮುಂದಾಗಬಹುದು. ಸ್ಕೋಡಾದ ಈ ಕ್ರಮವು ಸೆಡಾನ್ ವಿಭಾಗದಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

skoda-octavia-rs-bookings-officially-open-in-india

ಸೀಮಿತ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿರುವುದರಿಂದ ಖರೀದಿದಾರರಿಗೆ ಕಾರಿನ ಅಪೇಕ್ಷಣೀಯತೆ ಮತ್ತು ಮರು-ಮಾರಾಟ ಮೌಲ್ಯವನ್ನು ಹೆಚ್ಚಿಸುತ್ತದೆ. ಕಾರು ಉತ್ಸಾಹಿಗಳಿಗೆ ಮತ್ತು ವಿಶೇಷ ಯುರೋಪಿಯನ್ ಸೆಡಾನ್ ಅನುಭವವನ್ನು ಬಯಸುವವರಿಗೆ, ಸ್ಕೋಡಾ ಆಕ್ಟೇವಿಯಾ ಭಾರತಕ್ಕೆ ಸೀಮಿತ ಮರಳುವಿಕೆಯು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಇದು ತಲೆಮಾರುಗಳಾದ್ಯಂತ ಪರ್ಫಾಮೆನ್ಸ್, ನಿಖರತೆ ಮತ್ತು ಚಾಲನಾ ಉತ್ಸಾಹವನ್ನು ಪ್ರತಿನಿಧಿಸುತ್ತದೆ.

ತೀಕ್ಷ್ಣವಾದ ವಿನ್ಯಾಸ, ದಿಟ್ಟ ನಿಲುವು ಮತ್ತು ಹೆಚ್ಚಿನ ವಿಶೇಷತೆಯೊಂದಿಗೆ, ಹೊಸ ಆಕ್ಟೇವಿಯಾ ಆರ್‌ಎಸ್ ಆಕಾಂಕ್ಷೆ ಮತ್ತು ಉತ್ಸಾಹದ ಸಂಕೇತವಾಗಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಸಜ್ಜಾಗಿದೆ. ಭಾರತದಲ್ಲಿ ಈ ಬಿಡುಗಡೆಯು ಕೇವಲ ಕಾರಿನ ಮರಳುವಿಕೆಯಲ್ಲ, ಬದಲಾಗಿ ಒಂದು ಚೈತನ್ಯದ ಮರಳುವಿಕೆ - ಕಾರ್ಯಕ್ಷಮತೆ, ಆಕಾಂಕ್ಷೆ ಮತ್ತು ಚಾಲನೆಯ ನಿಜವಾದ ರೋಮಾಂಚನವನ್ನು ಸಂಕೇತಿಸುವ ದಂತಕಥೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಸ್ಕೋಡಾ ಆಕ್ಟೇವಿಯಾ ಮೊದಲ ಬಾರಿಗೆ 2004 ರಲ್ಲಿ ದೇಶದ ಮೊದಲ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರಾಗಿ ಆಗಮಿಸಿ, ತಕ್ಷಣವೇ ಗ್ರಾಹಕರ ಹೃದಯಗಳನ್ನು ಗೆದ್ದಿತು. ಐಕಾನಿಕ್ ಪರ್ಫಾರ್ಮೆನ್ಸ್ ಹೊಂದಿರುವ ಈ ಸೆಡಾನ್ ಕಾರು, ಭಾರತಕ್ಕೆ ಸಂಪೂರ್ಣ ನಿರ್ಮಿತ ಘಟಕಗಳಾಗಿ (CBU) ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

ಒಟ್ಟಾರೆ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಅಧಿಕೃತವಾಗಿ ಭಾರತಕ್ಕೆ ಮರಳುತ್ತಿದ್ದು, ಅಕ್ಟೋಬರ್ 6, 2025 ರಂದು ಸ್ಕೋಡಾ ಇಂಡಿಯಾದ ವೆಬ್‌ಸೈಟ್ ಮೂಲಕ ಪ್ರತ್ಯೇಕವಾಗಿ ಪ್ರೀ - ಬುಕಿಂಗ್‌ಗಳು ಪ್ರಾರಂಭವಾಗಲಿವೆ. ಈ ಹೈ ಪರ್ಫಾಮೆನ್ಸ್ ಸೆಡಾನ್‌ನ ಬೆಲೆಯನ್ನು ಅಕ್ಟೋಬರ್ 17, 2025 ರಂದು ಘೋಷಿಸಲಾಗುವುದು. ಯುಕೆ - ಸ್ಪೆಕ್ ಮಾದರಿಯನ್ನು ಆಧರಿಸಿದ ಮತ್ತು ಸಂಪೂರ್ಣವಾಗಿ CBU ಗಳಾಗಿ ಆಮದು ಮಾಡಿಕೊಳ್ಳಲಾದ ಕೇವಲ 100 ಕಾರುಗಳು ಈ ವರ್ಷ ದೇಶದಲ್ಲಿ ಲಭ್ಯವಿರುತ್ತವೆ.

More from DriveSpark

Article Published On: Tuesday, October 7, 2025, 11:45 [IST]
English summary
Skoda octavia rs bookings officially open in india
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+