ಸಖತ್ ಕ್ರೇಜ್ ಪಡೆದುಕೊಂಡ ಸ್ಕೋಡಾ ಕಾರು: ಎಲ್ಲವೂ ಉಡೀಸ್: ಏನೀ ಕಾರಿನ ವಿಶೇಷತೆ?
ಪ್ರಮುಖ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ತನ್ನ ಜನಪ್ರಿಯ ಆಕ್ಟೇವಿಯಾ ಆರ್‌ಎಸ್ (Skoda Octavia RS) ಅನ್ನು ಮತ್ತೆ ಭಾರತದಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಷನ್ ಕಾರಾಗಿದ್ದು, ಕೇವಲ 100 ಕಾರುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ಹೇಳಿತ್ತು. ಬುಕಿಂಗ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಎಲ್ಲಾ 100 ಯೂನಿಟ್ ಕಾರುಗಳನ್ನು ಗ್ರಾಹಕರು ಬುಕ್ ಮಾಡಿದ್ದಾರೆ. ವಿತರಣೆಗಳು ನವೆಂಬರ್ 6, 2025 ರಿಂದ ಪ್ರಾರಂಭವಾಗಲಿವೆ. ಕಾರಿನ ಬೆಲೆ ರೂ. 49,99,000 (ಎಕ್ಸ್-ಶೋರೂಂ)ಇದೆ. ಕಾರಿನ ಟಾಪ್ ವಿಶೇಷತಗೆಳು ಇಲ್ಲಿವೆ.
ಭಾರತದಲ್ಲಿ, ಆಕ್ಟೇವಿಯಾ RS ಮೊದಲ ಬಾರಿಗೆ 2004 ರಲ್ಲಿ ದೇಶದ ಮೊದಲ ಟರ್ಬೋಚಾರ್ಜ್ಡ್ ಪೆಟ್ರೋಲ್ ಕಾರಾಗಿ ಆಗಮಿಸಿ, ತಕ್ಷಣವೇ ಹೃದಯಗಳನ್ನು ಗೆದ್ದಿತು. ಆನಂತರ ಈ ಕಾರನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಯಿತು, ಆದರೆ ಸ್ಕೋಡಾ ಆಕ್ಟೇವಿಯಾ ಇಂದಿಗೂ ಹಲವರು ಉತ್ಸಾಹಿಗಳ ಫೇವರೆಟ್ ಆಗಿದೆ. ಇದೇ ಕಾರಣಕ್ಕೆ ಕಂಪನಿಯು ಸೀಮಿತ ಸಂಖ್ಯೆಯಲ್ಲಿ ಈ ಕಾರನ್ನು ಭಾರತದಲ್ಲಿ ಮತ್ತೆ ಮಾರಾಟ ಮಾಡುತ್ತಿದೆ.

ಇದೀಗ ಹೊಸ ಆಕ್ಟೇವಿಯಾ RS ಮರು ಬಿಡುಗಡೆಯೊಂದಿಗೆ, ಸ್ಕೋಡಾ ಆಟೋ ಇಂಡಿಯಾ ಸಾಟಿಯಿಲ್ಲದ ಡ್ರೈವ್ ಡೈನಾಮಿಕ್ಸ್, ದಿಟ್ಟ ವಿನ್ಯಾಸ ಮತ್ತು ಒರಿಜಿನಲ್ RS ಸ್ಪಿರಿಟ್ ಭರವಸೆ ನೀಡುತ್ತದೆ. ಇದು ವಿಶೇಷತೆ ಮತ್ತು ಥ್ರಿಲ್ ಬಯಸುವವರಿಗಾಗಿ ವಿಶೇಷವಾಗಿ ರಚಿಸಲಾದ ಪರ್ಫಾಮೆನ್ಸ್ ಮೆಷಿನ್ ಆಗಿದೆ. ಈ ಹೈ ಪರ್ಫಾಮೆನ್ಸ್ ಸೆಡಾನ್ ಯುಕೆ - ಸ್ಪೆಕ್ ಮಾಡಲ್ ಅನ್ನು ಆಧರಿಸಿದೆ ಎಂದು ಕಂಪನಿ ಹೇಳಿದೆ.
ಪ್ರತ್ಯೇಕವಾಗಿ ಸ್ಕೋಡಾ ಆಟೋ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಆಕ್ಟೇವಿಯಾ ಆರ್‌ಎಸ್‌ಗಾಗಿ ರೂ.2.5 ಲಕ್ಷಕ್ಕೆ ಪ್ರೀ - ಬುಕಿಂಗ್‌ಗಳು ಅಕ್ಟೋಬರ್ 6, 2025 ರಂದು ಪ್ರಾರಂಭವಾಗಿದ್ದವು. ಈ ಸೆಡಾನ್ ಕಾರು ಭಾರತಕ್ಕೆ ಸಂಪೂರ್ಣ ನಿರ್ಮಿತ ಘಟಕಗಳಾಗಿ (ಎಫ್‌ಬಿಯು) ಬರುತ್ತದೆ. ಧೀರ್ಘ ವಿರಾಮದ ನಂತರ ಜನಪ್ರಿಯ ಪ್ರೀಮಿಯಂ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಗೆ ಮರಳಿ ತರುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಬುಕ್ ಮಾಡಿದ್ದಾರೆ.

ಈ ಕಾರು ಮಾಂಬಾ ಗ್ರೀನ್, ಕ್ಯಾಂಡಿ ವೈಟ್, ರೇಸ್ ಬ್ಲೂ, ಮ್ಯಾಜಿಕ್ ಬ್ಲ್ಯಾಕ್ ಮತ್ತು ವೆಲ್ವೆಟ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಪೂರ್ಣ LED ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳು, ಡೈನಾಮಿಕ್ ಇಂಡಿಕೇರ್‌ಗಳೊಂದಿಗೆ LED ಟೈಲ್ ಲ್ಯಾಂಪ್‌ಗಳು, 225/40 R19 ಸ್ಪೋರ್ಟ್ಸ್ ಟೈರ್‌ಗಳೊಂದಿಗೆ ಗಮನಾರ್ಹವಾದ 19 - ಇಂಚಿನ ಎಲಿಯಾಸ್ ಆಂಥ್ರಾಸೈಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಇಂಟೀರಿಯರ್‌ನಲ್ಲಿ ಗ್ರಾಹಕರು 3-ಝೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗಾಗಿ ವೈರ್‌ಲೆಸ್ ಸಂಪರ್ಕದೊಂದಿಗೆ 32.77cm ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆಯಬಹುದು. ಕ್ಯಾಬಿನ್ ರೆಡ್ ಕಾಂಟ್ರಾಸ್ಟ್ ಸ್ಟಿಚಿಂಗ್‌ನೊಂದಿಗೆ ಸ್ಯೂಡಿಯಾ/ಲೆದರ್ ಅಪ್ಹೋಲ್ಸ್ಟರಿ, ಆಂಬಿಯೆಂಟ್ ಲೈಟಿಂಗ್ ಮತ್ತು ವರ್ಚುವಲ್ ಕಾಕ್‌ಪಿಟ್, ಎಲೆಕ್ಟ್ರಿಕ್ ಅಡ್ಜಸ್ಟಬಲ್ ಸ್ಪೋರ್ಟ್ಸ್ ಫ್ರಂಟ್ ಸೀಟ್‌ಗಳು, ಮೆಮೊರಿ, ಹೀಟ್ ಮತ್ತು ಮಸಾಜ್ ಫಂಕ್ಷನ್, ಅನ್ನು ಒಳಗೊಂಡಿದೆ.

ಆಕ್ಟೇವಿಯಾ ಆರ್‌ಎಸ್‌ನ 2.0 ಟಿಎಸ್‌ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ DSG ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಕೇವಲ 6.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು, ಗರಿಷ್ಠ ವೇಗವನ್ನು ಎಲೆಕ್ಟ್ರಾನಿಕ್ ಆಗಿ 250 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಇದು 195 ಕಿಲೋವ್ಯಾಟ್ (265 ಪಿಎಸ್) ಪವರ್ ಮತ್ತು 370 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಆಕ್ಟೇವಿಯಾ RS ಸ್ಕೋಡಾದ ಇತ್ತೀಚಿನ ADAS ಸೂಟ್‌ನೊಂದಿಗೆ ಸಜ್ಜುಗೊಂಡಿದೆ, ಇದರಲ್ಲಿ 10 ಏರ್‌ಬ್ಯಾಗ್‌ಗಳು, 360-ಡಿಗ್ರಿ ಏರಿಯಾ ವ್ಯೂ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹೆಡ್-ಅಪ್ ಡಿಸ್ಪ್ಲೇ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC), ಅಟಾನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಲೇನ್ ಅಸಿಸ್ಟ್ ಮತ್ತು ಇಂಟೆಲಿಜೆಂಟ್ ಪಾರ್ಕ್ ಅಸಿಸ್ಟ್ ಮತ್ತು ಡ್ರೈವಿಂಗ್ ಸ್ಟೆಬಿಲಿಟಿ ಸಿಸ್ಟಮ್‌ಗಳೊಂದಿಗೆ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.


Click it and Unblock the Notifications








