ಆಕರ್ಷಕ ಸನ್‌ರೂಫ್ ಜೊತೆಗೆ ಸಿಗುವ ಅಗ್ಗದ ಟಾಪ್-5 ಎಸ್‌ಯುವಿಗಳು: ಬೆಲೆ ಇಷ್ಟೇನಾ?
ಭಾರತದಲ್ಲಿ ಸದ್ಯ ಸನ್‌ರೂಫ್ ಕಾರುಗಳಿಗೆ ತುಂಬಾ ಡಿಮ್ಯಾಂಡ್ ಇದೆ. ಖರೀದಿದಾರರು ತಮ್ಮ ಬಜೆಟ್‌ನಲ್ಲಿ ಸನ್‌ರೂಫ್ ಕಾರು ಸಿಗುವಂತಾದರೆ ಖರೀದಿಸಲು ಮುಗಿಬೀಳುತ್ತಿದ್ದಾರೆ. ಸನ್‌ರೂಫ್ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಸ್‌ಯುವಿಗಳನ್ನು ನಾವು ನಿಮಗಾಗಿ ಹುಡುಕಿ ತಂದಿದ್ದೇವೆ. ಈ ಕಾರುಗಳು ಸಮಗ್ರ ವೈಶಿಷ್ಟ್ಯಗಳಲ್ಲಿ ಒಂದಾಗಿರುವ ಹಾಗೂ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿರುವ ಸನ್‌ರೂಫ್ ಅನ್ನು ಹೊಂದಿವೆ. ನೀವು ಕೂಡ ಸನ್ ರೂಫ್ ಹೊಂದಿರುವ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್‌ಯುವಿಯನ್ನು ಖರೀದಿಸಲು ಬಯಸಿದರೆ ಈ ಕೆಳಗಿನ ಕಾರುಗಳನ್ನು ಪರಿಗಣಿಸಿಬಹುದು.
ಹ್ಯುಂಡೈ ಎಕ್ಸ್ಟರ್: ಹ್ಯುಂಡೈ ಎಕ್ಸ್ಟರ್ ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ಇದನ್ನು ಎಸ್‌ಯುವಿ ಶೈಲಿಯ ವಾಹನವೆಂದು ಪರಿಗಣಿಸಲಾಗಿದೆ. ಎಕ್ಸ್‌ಟರ್‌ನ ಎಸ್ ಸ್ಮಾರ್ಟ್ ಟ್ರಿಮ್ ಸನ್‌ರೂಫ್ ಹೊಂದಿದ್ದು, ಇದನ್ನು ಇತ್ತೀಚೆಗೆ 7.69 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಇದು ಸನ್‌ರೂಫ್ ಹೊಂದಿರುವ ಭಾರತದ ಅತ್ಯಂತ ಕೈಗೆಟುಕುವ ಎಸ್‌ಯುವಿಯಾಗಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಟಾಟಾ ಪಂಚ್: ನೀವು ಸನ್‌ರೂಫ್ ಜೊತೆಗೆ ಉತ್ತಮ ಗುಣಮಟ್ಟದ ಕಾರನ್ನು ಹುಡುಕುತ್ತಿದ್ದರೆ, ಟಾಟಾ ಪಂಚ್ ಸರಿಯಾದ ಆಯ್ಕೆಯಾಗಿದೆ. ಏಕೆಂದರೆ ಟಾಟಾ ಪಂಚ್ ಎಸ್‌ಯುವಿ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಸನ್‌ರೂಫ್ ಹೊಂದಿರುವ ಟಾಟಾ ಪಂಚ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 8.35 ಲಕ್ಷಗಳಾಗಿದೆ. ಇದು 1.2-ಲೀಟರ್ ರೆವೊಟ್ರಾನ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೀಡಲಾಗಿದೆ.
ಟಾಟಾ ನೆಕ್ಸಾನ್: ಟಾಟಾ ಕಂಪನಿಯ ನೆಕ್ಸಾನ್ ಭಾರತದ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದನ್ನು ಇತ್ತೀಚೆಗೆ ಸನ್ ರೂಫ್‌ನೊಂದಿಗೆ ನವೀಕರಿಸಲಾಗಿದೆ. 1.2 ರೆವೊಟ್ರಾನ್ ಸ್ಮಾರ್ಟ್ ಪ್ಲಸ್ ಎಸ್ ಟ್ರಿಮ್ ಈಗ ಸನ್‌ರೂಫ್ ಸೇರ್ಪಡೆಯೊಂದಿಗೆ ಅಪ್‌ಡೇಟ್ ಆಗಿದೆ. ಭಾರತದಲ್ಲಿ ಟಾಟಾ ನೆಕ್ಸಾನ್ ಸ್ಮಾರ್ಟ್ ಪ್ಲಸ್ ಎಸ್ ಬೆಲೆ ರೂ. 9.20 (ಎಕ್ಸ್ ಶೋರೂಂ) ಲಕ್ಷವಿದೆ.

ಹ್ಯುಂಡೈ ವೆನ್ಯೂ: ಹ್ಯುಂಡೈ ತನ್ನ ಕಾರುಗಳನ್ನು ಮಾರುಕಟ್ಟೆಯಲ್ಲಿ ಸಮಗ್ರ ವೈಶಿಷ್ಟ್ಯಗಳೊಂದಿಗೆ ನವೀಕರಿಸುತ್ತಿದೆ. ಈ ಸಾಲಿನಲ್ಲಿ ಹ್ಯುಂಡೈ ವೆನ್ಯೂ ಕೂಡ ಇದ್ದು, ವೆನ್ಯೂ ಇ ಪ್ಲಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.32 ಲಕ್ಷಗಳಾಗಿದೆ. 1.2 ಲೀಟರ್ ಕಪ್ಪಾ ಎಂಜಿನ್ ಹೊಂದಿರುವ ಈ ಕಾರು, 83 ಬಿಹೆಚ್ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಮಹೀಂದ್ರಾ XUV 3XO: ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಸಹ ಸನ್ ರೂಫ್ ಹೊಂದಿದೆ. ಎಸ್‌ಯುವಿಯ ಎಂಎಕ್ಸ್ 2 ಪ್ರೊ ಟ್ರಿಮ್ ಸನ್‌ರೂಫ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.39 ಲಕ್ಷಗಳಾಗಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 ಬಿಹೆಚ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಹ ಪಡೆದುಕೊಂಡಿದ್ದು, ನಿರ್ಮಾಣ ಗುಣಮಟ್ಟದಲ್ಲೂ ಸೈ ಎನ್ನಿಸಿಕೊಂಡಿದೆ. ಇದು ಸದ್ಯ ಆಧುನಿಕ ವಿನ್ಯಾಸ, ಆಕರ್ಷಕ ಫೀಚರ್ಸ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಕಾರಾಗಿ ಗುರ್ತಿಸಿಕೊಂಡಿದೆ. ಮೇಲಿನ ಈ ಕಾರುಗಳಲ್ಲಿ ನಿಮ್ಮಿಷ್ಟದ ಕಾರನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications