ಮೊನ್ನೆಯಷ್ಟೆ ಬಿಡುಗಡೆಯಾದ ಟಾಟಾ ಏಸ್ ಗೋಲ್ಡ್ ಪ್ಲಸ್ ಡೀಸೆಲ್ ಮಿನಿ-ಟ್ರಕ್ ವಿಶೇಷತೆಗಳು
ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಮೊನ್ನೆಯಷ್ಟೆ ತನ್ನ ಅತ್ಯಂತ ಜನಪ್ರಿಯ ಏಸ್ ಸರಣಿಯ ಕೈಗೆಟಕುವ ಬೆಲೆಯ ಡೀಸೆಲ್ ಏಸ್ ಗೋಲ್ಡ್+ ವಾಹನವನ್ನು ಬಿಡುಗಡೆ ಮಾಡಿದೆ. ಕೇವಲ ರೂ. 5.52 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಉನ್ನತ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸುಧಾರಿತ ಲೀನ್ ಎನ್ಓಎಕ್ಸ್ ಟ್ರ್ಯಾಪ್ (LNT) ತಂತ್ರಜ್ಞಾನ ಹೊಂದಿರುವ ಏಸ್ ಗೋಲ್ಡ್+ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಟಾಟಾ ತಿಳಿಸಿದೆ. ಈ ವಾಹನದ ಇನ್ನೂ ಹಲವು ವಿಶೆಷತೆಗಳು ಇಲ್ಲಿವೆ.
ಹೊಸ ಟಾಟಾ ಡೀಸೆಲ್ ಏಸ್ ಗೋಲ್ಡ್+ ಈ ವಿಭಾಗದಲ್ಲಿ ಅತ್ಯಂತ ಕಡಿಮೆ ಮಾಲೀಕತ್ವ ವೆಚ್ಚದ ಭರವಸೆ ನೀಡುತ್ತದೆ. ಹಾಗಾಗಿ ಈ ವಾಹನವು ಮೌಲ್ಯ ಪ್ರಜ್ಞೆಯ ಉದ್ಯಮಿಗಳಿಗೆ ಸೂಕ್ತ ಆಯ್ಕೆಯಾಗಿ ಮೂಡಿಬಂದಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಪ್ರತೀ ಪ್ರಯಾಣದಲ್ಲಿಯೂ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡುತ್ತದೆ.

ಈ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಉಪಾಧ್ಯಕ್ಷ ಪಿನಾಕಿ ಹಲ್ದಾರ್, "ಎರಡು ದಶಕಗಳ ಹಿಂದೆ ಬಿಡುಗಡೆಯಾಗಿರುವ ಟಾಟಾ ಏಸ್ ಅಂದಿನಿಂದಲೂ ಭಾರತದಾದ್ಯಂತ ಕೊನೆಯ ಮೈಲಿ ಸಾರಿಗೆ ವ್ಯವಸ್ಥೆಯನ್ನು ಸತತವಾಗಿ ಬದಲಿಸುತ್ತಾ ಬಂದಿದೆ. ಲಕ್ಷಾಂತರ ಉದ್ಯಮಿಗಳಿಗೆ ಅಭಿವೃದ್ಧಿ ಹೊಂದಲು ಬೇಕಾದ ಶಕ್ತಿ ಒದಗಿಸಿದೆ.
ಪ್ರತೀ ಸಲ ಅಪ್ ಗ್ರೇಡ್ ಮಾಡುವಾಗಲೂ ಸುಧಾರಿತ ತಂತ್ರಜ್ಞಾನಗಳು, ಬಹುಮುಖ ಫೀಚರ್ ಗಳು ಮತ್ತು ಹೆಚ್ಚು ಸೌಲಭ್ಯ ಹೊಂದುವಂತೆ ವಿಕಸನಗೊಂಡಿದೆ. ಏಸ್ ಗೋಲ್ಡ್+ನ ಬಿಡುಗಡೆಯು ಈ ಪರಂಪರೆಯನ್ನು ಮುಂದುವರೆಸುತ್ತಿದ್ದು, ಉದ್ಯಮ ಕಾರ್ಯಾಚರಣೆಗಳನ್ನು ಸರಳಗೊಳಿಸುವ, ಲಾಭದಾಯಕತೆಯನ್ನು ಹೆಚ್ಚಿಸುವ ಮತ್ತು ಭಾರತದ ಉದ್ಯಮಶೀಲತೆಯ ಮನೋಭಾವವನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ" ಎಂದು ಹೇಳಿದರು.
900 ಕೆ.ಜಿ ಲೋಡ್ ಸಾಮರ್ಥ್ಯ ಮತ್ತು ಬಹುವಿಧ ಲೋಡ್ ಡೆಕ್ ಸಂರಚನೆಗಳಲ್ಲಿ ಈ ವಾಹನ ಲಭ್ಯವಿದ್ದು, ವಿವಿಧ ಸರಕು ಸಾಗಾಣಿಕಾ ಅಗತ್ಯಗಳಿಗೆ ತಕ್ಕಂತೆ ವೈವಿಧ್ಯಮಯತೆ ಮತ್ತು ದಕ್ಷತೆ ಒದಗಿಸುತ್ತದೆ. 22ಪಿಎಸ್ ಪವರ್ ಮತ್ತು 55 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಟರ್ಬೋಚಾರ್ಜ್ಡ್ Dicor ಎಂಜಿನ್ ಹೊಂದಿರುವ ಏಸ್ ಗೋಲ್ಡ್+ ವಿವಿಧ ಉದ್ಯಮಗಳಲ್ಲಿ ಬಳಸುವಂತೆ ನಿರ್ಮಾಣಗೊಂಡಿದೆ.
ಟಾಟಾ ಮೋಟಾರ್ಸ್ ನ ಸಣ್ಣ ವಾಣಿಜ್ಯ ವಾಹನ ಮತ್ತು ಪಿಕಪ್ ಶ್ರೇಣಿಯು ಡೀಸೆಲ್, ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಸೇರಿದಂತೆ ವಿವಿಧ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. ಏಸ್ ಪ್ರೊ, ಏಸ್, ಇಂಟ್ರಾ ಮತ್ತು ಯೋಧಾ ಒಳಗೊಂಡಿದ್ದು, 750 ಕೆ.ಜಿಯಿಂದ ಹಿಡಿದು 2- ಟನ್ ವರೆಗಿನ ಲೋಡ್ ಸಾಮರ್ಥ್ಯಗಳನ್ನು ಹೊಂದಿದೆ.
ಟಾಟಾ ಮೋಟಾರ್ಸ್ ನ 2,500 ಸರ್ವೀಸ್ ಕೇಂದ್ರಗಳು ಮತ್ತು ತರಬೇತಿ ಪಡೆದ ತಂತ್ರಜ್ಞರ ಸ್ಟಾರ್ ಗುರು ವ್ಯವಸ್ಥೆಯು ಗ್ರಾಹಕರಿಗೆ ಸೂಕ್ತ ನೆರವನ್ನು ಒದಗಿಸಲಿದ್ದು, ಏಸ್ ಗೋಲ್ಡ್+ ವಾಹನವು ಉದ್ಯಮದ ಬೆಳವಣಿಗೆಗೆ ಮತ್ತು ಸರಕು ಸಾಗಾಣಿಕೆಗೆ ಸೂಕ್ತ ವಾಹನವಾಗಿದೆ. ಈ ಅತ್ಯುತ್ತಮ ಎಂಜಿನಿಯರಿಂಗ್ ಹೊಂದಿರುವ ವಾಹನಗಳ ಶ್ರೇಣಿಗೆ Sampoorna Seva 2.0 ಯೋಜನೆ ಲಭ್ಯವಿದ್ದು, ಎಎಂಸಿ ಪ್ಯಾಕೇಜ್ ಗಳು, ನಿಜವಾದ ಬಿಡಿಭಾಗಗಳು ಮತ್ತು 24x7 ರಸ್ತೆಬದಿ ಸಹಾಯ ಒದಗಿಸಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








