Tata: ಕೇವಲ 6.89 ಲಕ್ಷಕ್ಕೆ ಫುಲ್ ಪ್ರೀಮಿಯಂ ಟಾಟಾ ಕಾರು ಬಿಡುಗಡೆ! ಡೀಸೆಲ್ ಎಂಜಿನ್ ಲಭ್ಯ!

ಟಾಟಾ ಮೋಟಾರ್ಸ್ (Tata Motors) ತನ್ನ ಬಹುನಿರೀಕ್ಷಿತ 2025ರ ಆಲ್ಟ್ರೋಜ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ 2025ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.89 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಈ ಕಾರು ಮುಖ್ಯವಾಗಿ ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಕಾಂಪ್ಲಿಷ್ಡ್ ಎಸ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಎಲ್ಲಾ ವೇರಿಯೆಂಟ್‌ಗಳ ಬುಕ್ಕಿಂಗ್ ಜೂನ್ 2 ರಿಂದ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಕಾರಿನ ಹೆಚ್ಚುವರಿ ವಿಶೇಷತೆಗಳು ಕೆಳಗಿವೆ.

2025ರ ಆಲ್ಟ್ರೋಜ್ ಈ ಬಾರಿ ಪ್ರೀಮಿಯಂ ಮತ್ತು ಐಷಾರಾಮಿ ವೈಶಿಷ್ಟ್ಯಗಳಿಂದ ತುಂಬಿದೆ. ಆರಾಮವನ್ನು ಗಮನದಲ್ಲಿಟ್ಟುಕೊಂಡು, ಆಲ್ಟ್ರೋಜ್ ಇಂಟೀರಿಯರ್‌ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಆಸನಗಳನ್ನು ನೀಡಲಾಗಿದೆ. ಇಂಟೀರಿಯರ್‌ನಲ್ಲಿ ಡ್ಯುಯಲ್ ಟೋನ್ ಕ್ಯಾಬಿನ್ ನೊಂದಿಗೆ ಡ್ಯಾಶ್ ಬೋರ್ಡ್‌ನಲ್ಲಿ ಸಾಫ್ಟ್ ಟಚ್, ಟ್ವಿನ್ 10.25-ಇಂಚಿನ ಡಿಜಿಟಲ್ ಕಾಕ್ ಪಿಟ್ ಹಾಗೂ ಹರ್ಮನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಜೊತೆಗೆ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

tata-altroz-2025-launched-in-india-at-the-price-6-89-lakh

ಇದು ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಆಡಿಯೊವರ್ ಎಕ್ಸ್‌ನ ಕಸ್ಟಮೈಸ್ಡ್ ಸೌಂಡ್ ಮೋಡ್‌ಗಳನ್ನು ಹೊಂದಿದೆ. ಬಾಹ್ಯ ವಿನ್ಯಾಸವನ್ನು ಬದಲಾಯಿಸುವುದರ ಹೊರತಾಗಿ, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಸ್ಟ್ಯಾಂಡರ್ಡ್ 16 - ಇಂಚಿನ ವೀಲ್‌ಗಳು, ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್‌ಗಳನ್ನು ನೀಡಲಾಗಿದೆ.

ಫೀಚರ್ಸ್: ಇಂಟಿಗ್ರೇಟೆಡ್ ನ್ಯಾವಿಗೇಷನ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಮಾನಿಟರ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ನಾಲ್ಕು ಫಾಸ್ಟ್ ಚಾರ್ಜಿಂಗ್ 65 ವ್ಯಾಟ್ ಟೈಪ್-ಸಿ ಪೋರ್ಟ್‌ಗಳನ್ನು ನೀಡಲಾಗಿದೆ. ನಾಲ್ಕು ರೀತಿಯ ವಾಯ್ಸ್ ಕಮಾಂಡ್ ಫಂಕ್ಷನ್‌ಗಳನ್ನು ಸಹ ಹೊಂದಿದೆ. ಎಕ್ಸ್ ಪ್ರೆಸ್ ಕೂಲಿಂಗ್ ಮತ್ತು ಕನೆಕ್ಟೆಡ್ ಕಾರ್‌ಟೆಕ್ 50 ಕ್ಕೂ ಹೆಚ್ಚು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ.

tata-altroz-2025-launched-in-india-at-the-price-6-89-lakh

ಸುರಕ್ಷತೆ: ಆಲ್ಟ್ರೋಜ್ ಫೇಸ್ ಲಿಫ್ಟ್ ಆರು ಏರ್ ಬ್ಯಾಗ್‌ಗಳು, 2 ಡಿ ಮತ್ತು 3 ಡಿ ಮೋಡ್‌ಗಳೊಂದಿಗೆ 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಎಮೆರ್ಜೆನ್ಸಿ ಎಸ್ಒಎಸ್ ಕಾಳ್ ಸೌಲಭ್ಯವನ್ನು ನೀಡುತ್ತದೆ. 16 ಇಂಚಿನ ವೀಲ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಮತ್ತು ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್ ಗಳಂತಹ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಎಂಜಿನ್ ಆಯ್ಕೆಗಳು: ಆಲ್ಟ್ರೋಜ್ ಫೇಸ್ ಲಿಫ್ಟ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಮತ್ತು ಸಿಎನ್‌ಜಿ ಟ್ರಿಮ್ ನಿಂದ ಪ್ರಾರಂಭವಾಗುವ ಮೂರು ವಿಭಿನ್ನ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. 1.2 ಲೀಟರಿನ ರೆವೊಟ್ರಾನ್ ಎನ್‌ಎ ಪೆಟ್ರೋಲ್ ಎಂಜಿನ್ 87 ಬಿಹೆಚ್ ಪವರ್ ಹಾಗೂ 115 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

tata-altroz-2025-launched-in-india-at-the-price-6-89-lakh

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು ಹೊಸ 5-ಸ್ಪೀಡ್ ಎಎಂಟಿ ಎಂಬ ಮೂರು ಟ್ರಾನ್ಸ್ ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 1.5 ಲೀಟರಿನ ಡೀಸೆಲ್ ಎಂಜಿನ್ 89 ಬಿಹೆಚ್ ಪವರ್ ಹಾಗೂ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇತ್ತ ಡೀಸೆಲ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುವುದಿಲ್ಲ.

ಟಾಟಾ ಮೋಟಾರ್ಸ್ ಪ್ರಕಾರ, ಡೀಸೆಲ್ ಆಲ್ಟ್ರೋಜ್ 12.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಆಲ್ಟ್ರೋಜ್ ಸಿಎನ್‌ಜಿ ಎನ್‌ಎ ಪೆಟ್ರೋಲ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಸುಮಾರು 72 ಬಿಹೆಚ್ ಪವರ್ ಮತ್ತು 103 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ವೇರಿಯೆಂಟ್‌ನಂತೆ, ಸಿಎನ್‌ಜಿ ಆವೃತ್ತಿಯು 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಮಾತ್ರ ಹೊಂದಿದೆ.

More from DriveSpark

Article Published On: Thursday, May 22, 2025, 15:23 [IST]
English summary
Tata altroz 2025 launched in india at the price 6 89 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+