Tata: ಸನ್‌ರೂಫ್‌ನೊಂದಿಗೆ ನಾಳೆ ಹೊಸ ಪುಟ್ಟ ಟಾಟಾ ಕಾರು ಬಿಡುಗಡೆ: ಗೇಮ್ ಚೇಂಜರ್?
ಟಾಟಾ ಮೋಟಾರ್ಸ್ (Tata Motors) ಹ್ಯಾಚ್‌ಬ್ಯಾಕ್ ಸೆಗ್ಮೆಂಟಿನಲ್ಲಿ ಹೊಸ 2025 ರ ಆಲ್ಟ್ರೊಜ್ ಅನ್ನು ಕಳೆದ ವಾರ ಅನಾವರಣಗೊಳಿಸಿದೆ. ಗಮನಾರ್ಹವಾದ ಬಾಹ್ಯ ಮತ್ತು ಒಳಾಂಗಣ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದರೆ ಬಿಡುಗಡೆ ಮಾತ್ರ ಮಾಡಿರಲಿಲ್ಲ, ಕೊನೆಗೂ ಆ ಸಮಯ ಬಂದಿದೆ. ಸಾಕಷ್ಟು ಟೀಸರ್‌ಗಳನ್ನು ಹೊರಬಿಟ್ಟ ನಂತರ ಇದೀಗ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಾಳೆ ಬಿಡುಗಡೆಯಾಗಲಿದೆ. ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪೈಪೋಟಿ ನೀಡಲಿರುವ 2025ರ ಟಾಟಾ ಆಲ್ಟ್ರೋಜ್ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಹೊಸ ಮುಂಬರಲಿರುವ ಟಾಟಾ ಆಲ್ಟ್ರೋಜ್ ಅನ್ನು ಸ್ಮಾರ್ಟ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್ ಎಸ್, ಅಕಾಂಪ್ಲಿಷ್ಡ್ ಮತ್ತು ಅಕಾಂಪ್ಲಿಷ್ಡ್ ಪ್ಲಸ್ ಎಸ್ ಎಂಬ ಹೊಸ ವೇರಿಯೆಂಟ್‌ಗಳೊಂದಿಗೆ ನೀಡಲಾಗುವುದು. ಗ್ರಾಹಕರಿಗೆ ಹೊಸ ಅನುಭವ ಹಾಗೂ ಫೀಚರ್ಸ್ ವಿಷಯದಲ್ಲಿ ಹೊಸತನವಿರಲಿ ಎಂಬ ಉದ್ದೇಶದಿಂದ ಹಲವು ಟ್ರಿಮ್‌ಗಳನ್ನು ಪರಿಚಯಿಸಲಾಗಿದೆ.

ಹೊಸ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ದೊಡ್ಡ ಇನ್ಫೋಟೈನ್ಮೆಂಟ್ ಸ್ಕ್ರೀನ್, ಹೊಸ ಸ್ಟೀರಿಂಗ್ ವೀಲ್, ಏರ್ ಪ್ಯೂರಿಫೈಯರ್, 360-ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ನವೀಕರಿಸಿದ ಇನ್ಸ್ಟ್ರುಮೆಂಟ್ ಪ್ಯಾನಲ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ಗಳು, ಸನ್‌ರೂಫ್ ಮತ್ತು ಟಚ್-ಆಧಾರಿತ ಎಚ್ವಿಎಸಿ ಪ್ಯಾನಲ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್ ನೀಡಲಾಗಿದೆ.
ಯಾಂತ್ರಿಕವಾಗಿ, ವಾಹನ ತಯಾರಕರು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆಲ್ಟ್ರೊಜ್ ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೆ ನೀಡಲಾಗುವುದು. ಜೊತೆಗೆ ಮ್ಯಾನುವಲ್‌ನೊಂದಿಗೆ ಸಿಎನ್‌ಜಿ ಆವೃತ್ತಿಯನ್ನು ನೀಡಲಾಗುವುದು. ಹಾಗೆಯೇ 1.5-ಲೀಟರ್ ಡೀಸೆಲ್ ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುವುದು.

ಡಿಸೈನ್ ಕುರಿತ ಟಾಪ್ ಹೈಲೆಟ್‌ಗಳನ್ನು ನೋಡುವುದಾದ್ರೆ, ಹೊರಭಾಗವು ಹೊಸ ಗ್ರಿಲ್ ವಿನ್ಯಾಸ ಮತ್ತು ಫ್ಲಶ್ - ಫಿಟ್ಟಿಂಗ್ ಡೋರ್ ಹ್ಯಾಂಡಲ್ ಗಳನ್ನು ಒಳಗೊಂಡಿದ್ದರೆ, 'ಲುಮಿನೇಟ್' ಎಂದು ಕರೆಯಲ್ಪಡುವ ಮುಂಭಾಗದ ಎಲ್ಇಡಿ ಲೈಟ್‌ಗಳನ್ನು ನೀಡಲಾಗಿದೆ. ಹಾಗೆಯೇ ಹಿಂಭಾಗದಲ್ಲಿ ಈಗ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ.
ನಿರೀಕ್ಷೆಗಳು: 360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್ ಗಳು, ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ ಪ್ರಯಾಣಿಕರಿಗೆ ಎಸಿ ವೆಂಟ್ ಗಳು, ವಾಯ್ಸ್ ಆಕ್ಟಿವೇಟೆಡ್ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ. ಜೊತೆಗೆ ಟಾಟಾ ADAS ಸಹ ಪರಿಚಯಿಸುವ ನಿರೀಕ್ಷೆಯಿದೆ, ಆದರೆ ಈ ಬಗ್ಗೆ ಹೆಚ್ಚಿನ ವಿವರಗಳಿಲ್ಲ.

ಟಾಟಾ ಆಲ್ಟ್ರೋಜ್ 2020 ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಕಾಲಾನಂತರದಲ್ಲಿ, ಆಲ್ಟ್ರೋಜ್ ಶ್ರೇಣಿಯು 2021 ರಲ್ಲಿ ಡಾರ್ಕ್ ಎಡಿಷನ್, 2022 ರಲ್ಲಿ ಡ್ಯುಯಲ್-ಕ್ಲಚ್ ಡಿಸಿಎ, 2023 ರಲ್ಲಿ ಟ್ವಿನ್-ಸಿಲಿಂಡರ್ ಸಿಎನ್‌ಜಿ ಮತ್ತು 2024 ರಲ್ಲಿ ರೇಸರ್ ಎಡಿಷನ್‌ನೊಂದಿಗೆ ಗ್ರಾಹಕರ ಮನಗೆದ್ದಿದೆ. ಇದೀಗ 2025 ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರು ಯಾವ ಮಟ್ಟಿಗೆ ಜನರ ಮನಗೆಲ್ಲಲಿದೆ ಕಾದುನೋಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications