ಟಾಟಾ ಎಂದು ಸುಮ್ಮನೆ ಹೇಳುವುದಿಲ್ಲ... ಇದೇ ಸಾಕ್ಷಿ! ಬೃಹತ್ ಎಸ್‌ಯುವಿ ಪರಿಸ್ಥಿತಿ ನೋಡಿ!

ಹೊಸ ಕಾರನ್ನು ಖರೀದಿಸುವ ಮುನ್ನ ನಿರ್ಮಾಣ ಗುಣಮಟ್ಟ ಹೆಚ್ಚಾಗಿ ಪರಿಶೀಲಿಸಲಾಗುತ್ತದೆ. ನಂತರ ವಾಹನದ ಡಿಸೈನ್, ಫೀಚರ್ಸ್ ಹಾಗೂ ಮೈಲೇಜ್ ಅನ್ನು ನೋಡಿ ಖರೀದಿಸುತ್ತಾರೆ. ಇಲ್ಲಿ ಮುಖ್ಯವಾಗಿ ವಾಹನಗಳ ಗುಣಮಟ್ಟವನ್ನು ನಿರ್ಣಯಿಸುವ ಸುರಕ್ಷತಾ ರೇಟಿಂಗ್ ನೀಡುವ ಏಜೆನ್ಸಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುರಕ್ಷತಾ ರೇಟಿಂಗ್ ನೀಡುವ ಮೂಲಕ ಖರೀದಿದಾರರಿಗೆ ವಾಹನಗಳ ಬಗ್ಗೆ ಅರಿವು ಮೂಡಿಸುತ್ತವೆ. ಪ್ರತಿ ಬಾರಿ ನಿರ್ಮಾಣ ಗುಣಮಟ್ಟದ ಬಗ್ಗೆ ಮಾತನಾಡುವಾಗ, ಟಾಟಾ ಮತ್ತು ಮಹೀಂದ್ರಾದಂತಹ ಭಾರತೀಯ ಬ್ರಾಂಡ್‌ಗಳು ಹೆಚ್ಚಾಗಿ ನೆನಪಿಗೆ ಬರುತ್ತವೆ. ಸದ್ಯ ಈ ಎರಡು ಬ್ರಾಂಡ್‌ಗಳೆ ಟಾಪ್ ಸುರಕ್ಷಿತ ಕಾರುಗಳನ್ನು ಮಾರಾಟ ಮಾಡುತ್ತಿವೆ.

ಆದ್ರೆ ಈ ಎರಡೂ ಬ್ರಾಂಡ್‌ಗಳ ಕಾರುಗಳೇ ಡಿಕ್ಕಿಯಾದ್ರೆ? ಹೌದು, ಇಲ್ಲಿ ಮಹೀಂದ್ರಾ ಥಾರ್ ಮತ್ತು ಟಾಟಾ ಆಲ್ಟ್ರೋಜ್ ಪರಸ್ಪರ ಡಿಕ್ಕಿಯಾಗಿರುವ ವಿಡಿಯೋ ವೈರಲ್ ಆಗಿದೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕಳೆದ ವಾರ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಮುಖಾಮುಖಿ ಡಿಕ್ಕಿಯಾಗಿರುವಂತೆ ಕಾಣುತ್ತಿದೆ. ಟಾಟಾ ಆಲ್ಟ್ರೋಜ್ ಬಾನೆಟ್ ಹಾನಿಯಾಗಿದ್ದು, ಮುಂಭಾಗದ ಬಂಪರ್ ಮತ್ತು ಸೈಡ್ ಫೆಂಡರ್ ನಜ್ಜುಗುಜ್ಜಾಗಿದೆ.

tata-altroz-and-mahindra-thar-collision-kerala-viral-video

ಹೆಡ್ ಲ್ಯಾಂಪ್‌ಗಳು ಸಹ ಹಾನಿಗೊಳಗಾಗಿದ್ದು, ಏರ್ ಬ್ಯಾಗ್‌ಗಳು ತೆರೆದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಅಪಘಾತದ ಪರಿಣಾಮವು ಕ್ಯಾಬಿನ್ ಓಳಗಿನವರೆಗೆ ತಲುಪೇ ಇಲ್ಲ, ಆದರೆ ಮುಂಭಾಗದ ಬಂಪರ್, ಗ್ರಿಲ್, ಫೆಂಡರ್ ಮತ್ತು ಬಾನೆಟ್ ಮಾತ್ರ ಹಾನಿಗೊಳಗಾಗಿದೆ. ಈ ಮೂಲಕ ಟಾಟಾ ಆಲ್ಟ್ರೋಜ್ ಮತ್ತೊಮ್ಮೆ ತನ್ನ ನಿರ್ಮಾಣ ಗುಣಮಟ್ಟವನ್ನು ಸಾಭೀತು ಪಡಿಸಿಕೊಂಡಿದೆ.

ಮಹೀಂದ್ರಾ ಥಾರ್ ವಿಷಯಕ್ಕೆ ಬಂದರೆ ಕಾರಿನ ಮುಂಭಾಗದ ಆಕ್ಸಲ್ ಮತ್ತು ವ್ಹೀಲ್ ಮುರಿದಿವೆ. ಈ ಕಾರಿನಲ್ಲೂ ವಾಹನದ ಕ್ಯಾಬಿನ್‌ವರೆಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಎರಡೂ ವಾಹನಗಳಲ್ಲಿನ ಎ-ಪಿಲ್ಲರ್‌ಗಳು ಹಾಗೇ ಉಳಿದಿವೆ, ಮತ್ತು ಎರಡೂ ಕಾರುಗಳು ಉತ್ತಮವಾಗಿ ಪ್ರಯಾಣಿಕರಿಗೆ ರಕ್ಷಣೆ ನೀಡಿವೆ. ಎರಡೂ ವಾಹನಗಳಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಅಪಘಾತದಿಂದ ಪಾರಾಗಿದ್ದಾರೆ.

tata-altroz-and-mahindra-thar-collision-kerala-viral-video

ಮಹೀಂದ್ರಾ ಥಾರ್ ಮತ್ತು ಟಾಟಾ ಆಲ್ಟ್ರೋಜ್ ಎರಡೂ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರುಗಳು ಎಂಬುದನ್ನು ಮರೆಯಬಾರದು. ಮಹೀಂದ್ರಾ ಥಾರ್ 4 - ಸ್ಟಾರ್ ರೇಟಿಂಗ್ ಗಳಿಸಿದರೆ, ಆಲ್ಟ್ರೊಜ್ ಪೂರ್ಣ ಐದು ಸ್ಟಾರ್ ರೇಟಿಂಗ್ ಗಳಿಸಿರುವ ಹ್ಯಾಚ್‌ಬ್ಯಾಕ್ ಆಗಿದೆ. ಒಟ್ಟಾರೆ ಎರಡೂ ದೇಶೀಯ ಕಾರುಗಳು ತಮ್ಮ ನಿರ್ಮಾಣ ಗುಣಮಟ್ಟವನ್ನು ಸಾಭೀತು ಪಡಿಸಿಕೊಂಡಿವೆ.

ಟಾಟಾ ಆಲ್ಟ್ರೋಜ್ ಮತ್ತು ಮಹೀಂದ್ರಾ ಥಾರ್ ಎರಡರ ಬಾಡಿ ಪ್ಯಾನೆಲ್‌ಗಳು ಹಾನಿಗೊಳಗಾಗಿದ್ದರೂ, ಅವುಗಳ ಫ್ರೇಮ್‌ಗಳು ಅಥವಾ ಚಾಸಿಸ್ ಪ್ರಬಲವಾಗಿವೆ. ಚಾಸಿಸ್ ಬಲವಾಗಿಲ್ಲದಿದ್ದರೆ, ಗಟ್ಟಿಮುಟ್ಟಾಗಿ ಕಾಣುವ ಬಾಡಿ ಪ್ಯಾನಲ್ ಯಾವುದಕ್ಕೂ ಪ್ರಯೋಜನವಿಲ್ಲ. ಹಾಗಾಗಿ ಕಾರಿನ ನಿರ್ಮಾಣ ಗುಣಮಟ್ಟವನ್ನು ಅದರ ಬಾಡಿ ಪ್ಯಾನೆಲ್‌ಗಳನ್ನು ನೋಡಿ ನಿರ್ಣಯಿಸಬಾರದು.

ಭಾರತದಲ್ಲಿ ನಿತ್ಯ ಅದೆಷ್ಟೋ ವಾಹನ ಅಪಘಾತಗಳು ಸಂಭವಿಸುತ್ತವೆ, ವಾಹನ ಚಾಲಕರು ಜಾಗರೂಕ ಚಾಲನೆ ಮಾಡುವುದು ಉತ್ತಮ. ಕಾರು ಚಾಲನೆ ಮಾಡುವಾಗ ಸಂಪೂರ್ಣವಾಗಿ ರಸ್ತೆಯ ಮೇಲೆ ನಿಮ್ಮ ಗಮನವಿರಬೇಕು, ಎಲ್ಲಾ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸಬೇಕು. ಹೀಗಿದ್ದಾಗ ಮಾತ್ರ ಒಂದು ವೇಳೆ ಅಪಘಾತ ನಡೆದರೂ ಸಂಭವನೀಯ ಹಾನಿಯನ್ನು ಬಹುತೇಕ ತಪ್ಪಿಸಬಹುದು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 24, 2025, 11:59 [IST]
English summary
Tata altroz and mahindra thar collision kerala viral video
Read more on off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+