Tata Altroz: ಅಗ್ಗದ ಬೆಲೆಯ ಬಹುಬೇಡಿಕೆಯ ಟಾಟಾ ಡೀಸೆಲ್ ಕಾರು: 23.64 ಕಿ.ಮೀ ಮೈಲೇಜ್!

ಟಾಟಾ ಆಲ್ಟ್ರೋಜ್ (Tata Altroz) ಸದ್ಯ ಭಾರತದಲ್ಲಿ ಅಗ್ಗದ ಬೆಲೆಯ ಬೆಸ್ಟ್ ಡೀಸೆಲ್ ಕಾರಾಗಿದ್ದು, ಇದರ ಆರಂಭಿಕ ಬೆಲೆಯು ರೂ.6.50 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಇದರ ಟಾಪ್ ಎಂಡ್ ಮಾದರಿಯ ಬೆಲೆಯು ರೂ.11.16 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಉಳಿದಂತೆ ಡೀಸೆಲ್ ವೇರಿಯೆಂಟ್ ವಿಷಯಕ್ಕೆ ಬಂದರೆ ರೂ. 8.70 ಲಕ್ಷ ಬೆಲೆಯಿದೆ. ಇದರ ಡೀಸೆಲ್ ವೆರಿಯೆಂಟ್ 345 ಲೀಟರ್ ಬೂಟ್ ಸ್ಪೇಸ್ ಅನ್ನು ನೀಡುತ್ತದೆ. ಆಲ್ಟ್ರೋಜ್ ಅನ್ನು 40 ರೂಪಾಂತರಗಳಲ್ಲಿ ನೀಡಲಾಗುತ್ತಿದ್ದು, ಇದರಲ್ಲಿ XE ಮತ್ತು XZ+ ವೇರಿಯೆಂಟ್‌ಗಳು ಡೀಸೆಲ್ ಎಂಜಿನ್‌ನಲ್ಲಿ ಸಿಗುತ್ತವೆ.

ಟಾಟಾ ಆಲ್ಟ್ರೋಜ್ ಡೀಸೆಲ್ ಎಂಜಿನ್ ಬಗ್ಗೆ ಮಾತನಾಡುವುದಾದ್ರೆ, ಇದರ 1.5 - ಲೀಟರ್ ಡೀಸೆಲ್ ಎಂಜಿನ್ 90PS ಪವರ್ ಮತ್ತು 200Nm ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಗೇರ್‌ಬಾಕ್ಸ್ ಜೋಡಿಸಲ್ಪಟ್ಟಿದೆ. ಪ್ರತಿ ಲೀಟರ್ ಡೀಸೆಲ್‌ಗೆ 23.64 kmpl ನಷ್ಟು ಮೈಲೇಜ್ ನೀಡುತ್ತದೆ.

tata-altroz-diesel-variant-price-mileage-features-details

ಟಾಟಾ ಆಲ್ಟ್ರೋಜ್ ಸುರಕ್ಷತೆ ಬಗ್ಗೆ ಹೇಳುವುದಾದ್ರೆ ಇದು 5-ಸ್ಟಾರ್ ಸುರಕ್ಷತೆ-ರೇಟೆಡ್ ಕಾರಾಗಿದ್ದು, ಗ್ಲೋಬಲ್ NCAP ತನ್ನ ಕ್ರ್ಯಾಶ್ ಪರೀಕ್ಷೆಗಳಲ್ಲಿ 5-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ನೀಡಿದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್-ಸೀಟ್ ಆಂಕರ್‌ಗಳು ಸೇರಿದಂತೆ ಹೆಚ್ಚಿನ ಫೀಚರ್‌ಗಳನ್ನು ಒಳಗೊಂಡಿದೆ.

ಟಾಟಾ ಆಲ್ಟ್ರೋಜ್ ವೈಶಿಷ್ಟ್ಯಗಳನ್ನು ನೋಡುವುದಾದ್ರೆ, ಟಾಟಾ ಆಲ್ಟ್ರೊಜ್ ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಲೆದರ್ ಸ್ಟೀರಿಂಗ್ ವೀಲ್, ಲೆದರ್ ಸೀಟ್‌ಗಳು, ಪವರ್ ವಿಂಡೋ, ಅಡ್ಜಸ್ಟಬಲ್ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು (ಮುಂಭಾಗ ಮತ್ತು ಹಿಂಭಾಗ) ಮತ್ತು ಹಿಂಭಾಗದ ಡಿಫಾಗರ್ ಅನ್ನು ಹೊಂದಿದೆ. ಈ ಹಲವಾರು ವೈಶಿಷ್ಟ್ಯಗಳು ರೂ 8.70 ಲಕ್ಷ ಬೆಲೆಯ ಬೇಸ್ ಡೀಸೆಲ್ ವೇರಿಯೆಂಟ್‌ನಲ್ಲಿ ಸಿಗುತ್ತವೆ.

tata-altroz-diesel-variant-price-mileage-features-details

ಟಾಟಾ ಆಲ್ಟ್ರೋಜ್ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ ಇದು ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್ ನೀಡುವ ಬೆಸ್ಟ್ ಕಾರಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹೊಂದಿದೆ.

ಮೂರು ಎಂಜಿನ್ ಆಯ್ಕೆ: ಟಾಟಾ ಆಲ್ಟ್ರೋಜ್ ಕಾರಿನಲ್ಲಿ 1.2-ಲೀಟರ್ NA ಪೆಟ್ರೋಲ್, 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. 5-ಸ್ಪೀಡ್ MT ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ ಪ್ರಮಾಣಿತವಾಗಿ ಬರುತ್ತದೆ. ಡೌನ್ ಟೌನ್ ರೆಡ್, ಆರ್ಕೇಡ್ ಗ್ರೇ, ಅವೆನ್ಯೂ ವೈಟ್, ಒಪೆರಾ ಬ್ಲೂ ಮತ್ತು ಕಾಸ್ಮಿಕ್ ಡಾರ್ಕ್ ಎಂಬ ಐದು ಮೊನೊಟೋನ್ ಬಣ್ಣದ ಆಯ್ಕೆಗಳನ್ನು ಹೊಂದಿದೆ.

tata-altroz-diesel-variant-price-mileage-features-details

ಟಾಟಾ ಆಲ್ಟ್ರೋಜ್ ರೇಸರ್ ಕೂಡ ಇದೆ: ಹೆಚ್ಚು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗಾಗಿ ಸಾಮಾನ್ಯ ಆಲ್ಟ್ರೊಜ್‌ನ ಸ್ಪೋರ್ಟಿಯರ್ ಪುನರಾವರ್ತನೆಯಾದ ಟಾಟಾ ಆಲ್ಟ್ರೋಜ್ ರೇಸರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದು ಸಾಮಾನ್ಯ ಆಲ್ಟ್ರೋಜ್‌ಗಿಂತ ಹೆಚ್ಚು ಪವರ್ ಹಾಗೂ ಟಾರ್ಕ್‌ನೊಂದಿಗೆ ಬರುತ್ತದೆ. ಹಾಗೆಯೇ ಹೆಚ್ಚಿನ ಫೀಚರ್ಸ್‌ನಿಂದ ಲೋಡ್ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 3, 2025, 11:34 [IST]
English summary
Tata altroz diesel variant price mileage features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+