ಬೆಲೆ ಕೇವಲ 6.89 ಲಕ್ಷ: 2025 ಟಾಟಾ ಆಲ್ಟ್ರೋಜ್ ಬೇಸ್ ವೇರಿಯಂಟ್ ಮಾಹಿತಿ

ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ 2025 ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ (Tata Altroz ​​facelift) ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಿದೆ. ಒಂದು ಕಾರು ಬಿಡುಗಡೆಯಾದರೆ ಅದರ ಬೇಸ್‌ ವೇರಿಯೆಂಟ್‌ನೊಂದಿಗೆ ಮೂಲ ಬೆಲೆಯನ್ನು ಪರಿಚಯಿಸಲಾಗುತ್ತದೆ. ಬಹುತೇಕರು ಈ ಬೇಸ್‌ ವೇರಿಯೆಂಟ್ ಬಗ್ಗೆ ತಿಳಿದುಕೊಳ್ಳುವ ಉತ್ಸಾವನ್ನು ಹೊಂದಿರುತ್ತಾರೆ. ಹಾಗಾಗಿಯೇ ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಆಲ್ಟ್ರೋಜ್ ಬೇಸ್‌ ವೇರಿಯೆಂಟ್‌ನ ಬೆಲೆಯಿಂದ ಹಿಡಿದು ಫೀಚರ್ಸ್‌ವರೆಗೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

2025ರ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಅನ್ನು ಸ್ಮಾರ್ಟ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್ ಎಸ್, ಕ್ರಿಯೇಟಿವ್ ಎಸ್, ಅಕಾಂಪ್ಲಿಷ್ಡ್ ಎಸ್ ಮತ್ತು ಅಕಾಂಪ್ಲಿಷ್ಡ್ ಪ್ಲಸ್ ಎಸ್ ಎಂಬ ಏಳು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಸ್ಮಾರ್ಟ್ (ಪೆಟ್ರೋಲ್) ಆರಂಭಿಕ ಹಂತದ ವೇರಿಯೆಂಟ್ (Base variant) ಆಗಿದೆ.

tata-altroz-facelift-base-variant-price-features-safety-details

2025ರ ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಬೇಸ್‌ ವೇರಿಯೆಂಟ್ ನಿಮಗೆ ರೂ. 6.89 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬೇಸ್‌ ವೇರಿಯೆಂಟ್‌ನಲ್ಲಿ ಪರಿಷ್ಕೃತ ಗ್ರಿಲ್ ಮತ್ತು ಬಂಪರ್ ಮೇಲೆ ಬೋಲ್ಡ್ ಬ್ಲ್ಯಾಕ್ ಸ್ಟ್ರಿಪ್, ಹ್ಯಾಲೋಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಎಲ್ಇಡಿ ಯುನಿಟ್‌ಗಳನ್ನು ಬೇಸ್‌ ವೇರಿಯೆಂಟ್‌ನಲ್ಲಿ ನೀಡಿಲ್ಲ.

ಫ್ಲಶ್-ಟೈಪ್ ಫ್ರಂಟ್ ಡೋರ್ ಹ್ಯಾಂಡಲ್‌, 16 ಇಂಚಿನ ಸ್ಟೀಲ್ ವೀಲ್‌ಗಳು, ಹಿಂಭಾಗದಲ್ಲಿ, ರೆಡ್ ಸ್ಟ್ರಿಪ್ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ. ಆಂಟೆನಾ, ರಿಯರ್ ವೈಪರ್, ವಾಷರ್ ಮತ್ತು ಡಿಫೋಗರ್ ನಂತಹ ವೈಶಿಷ್ಟ್ಯಗಳನ್ನು ಬೇಸ್‌ ವೇರಿಯೆಂಟ್‌ನಲ್ಲಿ ನೀಡಿಲ್ಲ. ಹಾಗೆಯೇ ಹಿಂಭಾಗದಲ್ಲಿ ಬಂಪರ್ ಬ್ಲಾಕ್ ಬಣ್ಣದ್ದಲ್ಲಿ ನೀಡಲಾಗಿದೆ.

tata-altroz-facelift-base-variant-price-features-safety-details

ಇಂಟೀರಿಯರ್: ಒಳಭಾಗದಲ್ಲಿ ಬಿಳಿ ಹೆಡ್ಲೈನರ್ ಹೊಂದಿರುವ ಸಂಪೂರ್ಣ ಕಪ್ಪು ಕ್ಯಾಬಿನ್ ಇದೆ. ಸರಳವಾದ ಕಪ್ಪು ಡ್ಯಾಶ್ ಬೋರ್ಡ್, ಶೈನಿಂಗ್ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್, ಸಣ್ಣ 4 ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್, ಎಸಿಗಾಗಿ ಫಿಸಿಕಲ್ ಬಟನ್ ಗಳನ್ನು ನೀಡಲಾಗಿದೆ. ಹಿಂಭಾಗದ ಪ್ರಯಾಣಿಕರಿಗೆ ಎಸಿ ವೆಂಟ್‌ಗಳು ಅಥವಾ ಆರ್ಮ್ ರೆಸ್ಟ್ ಗಳು ಸಿಗುವುದಿಲ್ಲ.

ಹಿಂಭಾಗದ ಹೆಡ್‌ರೆಸ್ಟ್‌ಗಳು ಸ್ಥಿರವಾಗಿದ್ದು, ಸರಿಹೊಂದಿಸಲು ಸಾಧ್ಯವಿಲ್ಲ. ಮ್ಯಾನುವಲ್ ಎಸಿ, ರಿಮೋಟ್ ಕೀಲೆಸ್ ಎಂಟ್ರಿ, ಎಲ್ಲಾ ಬಾಗಿಲುಗಳಲ್ಲಿ ಪವರ್ ವಿಂಡೋಗಳು ಮತ್ತು ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಂತಹ ಉಪಯುಕ್ತ ಫೀಚರ್‌ಗಳನ್ನು ನೀಡಲಾಗಿದೆ. ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಕೈಬಿಡಲಾಗಿದೆ.

tata-altroz-facelift-base-variant-price-features-safety-details

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಆರು ಏರ್ ಬ್ಯಾಗ್‌ ಗಳು, ಐಎಸ್ ಒಫಿಕ್ಸ್ ಮೌಂಟ್‌ಗಳು, ಎಲ್ಲಾ ಆಸನಗಳಿಗೆ 3 - ಪಾಯಿಂಟ್ ಸೀಟ್ ಬೆಲ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಹೊಂದಿದೆ.

ಎಂಜಿನ್: ಟಾಟಾ ಆಲ್ಟ್ರೋಜ್ ಬೇಸ್‌ ವೇರಿಯೆಂಟ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಪವರ್ ಟ್ರೇನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ. ಎರಡೂ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಇದು ಪೆಟ್ರೋಲ್ ನಲ್ಲಿ 88 ಪಿಎಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇನ್ನು ಸಿಎನ್‌ಜಿಯಲ್ಲಿ 73.5 ಪಿಎಸ್ ಪವರ್ ಮತ್ತು 103 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 28, 2025, 12:05 [IST]
English summary
Tata altroz facelift base variant price features safety details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+