Tata: ಕೇವಲ 6.89 ಲಕ್ಷಕ್ಕೆ ಸನ್‌ರೂಫ್ ಕಾರು: 360 ಡಿಗ್ರಿ ಕ್ಯಾಮರಾ... ಡೀಸೆಲ್ ಎಂಜಿನ್ ಕೂಡ ಲಭ್ಯ!
ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ ಡಿಸೈನ್, ಆಕರ್ಷಕ ಫೀಚರ್ಸ್ ಹಾಗೂ ಡೀಸೆಲ್ ಎಂಜಿನ್‌ನೊಂದಿಗೆ ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಪರಿಚಯಿಸಲಾಗಿದೆ. ಸುರಕ್ಷತೆ ವಿಷಯದಲ್ಲೂ ರಾಜಿಯಾಗದೇ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ಮೂಲಕ ಟಾಟಾ ಮೋಟಾರ್ಸ್ ತನ್ನ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಈ ಹೊಸ ಕಾರಿನ ಆರಂಭಿಕ ಬೆಲೆಗಳು ಎಕ್ಸ್ ಶೊರೂಂ ದರದಂತೆ ರೂ 6.89 ಲಕ್ಷವಿದೆ. ಈ ಸಣ್ಣ ಹ್ಯಾಚ್‌ಬ್ಯಾಕ್‌ನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಕೂಡ ನೀಡಲಾಗಿದೆ.
ಹೊಸ ಆಲ್ಟ್ರೋಜ್ ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್, ಅಕಾಂಪ್ಲಿಷ್ಡ್ ಎಸ್ ಎಂಬ ವೇರಿಯೆಂಟ್‌ಗಳನ್ನು ಹೊಂದಿದ್ದು, ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ವೇರಿಯೆಂಟ್ ವಾರು ಬೆಲೆಗಳನ್ನು ನೋಡುವುದಾದ್ರೆ, ಸ್ಮಾರ್ಟ್ ಪೆಟ್ರೋಲ್- ರೂ. 6.89 ಲಕ್ಷ, ಸ್ಮಾರ್ಟ್ ಸಿಎನ್‌ಜಿ- ರೂ. 7.89 ಲಕ್ಷ, ಪ್ಯೂರ್ ಪೆಟ್ರೋಲ್- ರೂ. 7.69 ಲಕ್ಷ, ಪ್ಯೂರ್ ಸಿಎನ್‌ಜಿ- ರೂ. 8.79 ಲಕ್ಷ ಬೆಲೆಯಿದೆ.

ಪ್ಯೂರ್ ಡೀಸೆಲ್- ರೂ 8.99 ಲಕ್ಷ, ಕ್ರಿಯೇಟಿವ್ ಪೆಟ್ರೋಲ್- ರೂ. 8.69 ಲಕ್ಷ, ಕ್ರಿಯೇಟಿವ್ ಸಿಎನ್‌ಜಿ- ರೂ. 9.79 ಲಕ್ಷ, ಅಕಾಂಪ್ಲಿಷ್ಡ್ ಎಸ್ ರೂ. 9.99 ಲಕ್ಷ, ಅಕಾಂಪ್ಲಿಷ್ಡ್ ಎಸ್ ಸಿಎನ್‌ಜಿ- ರೂ. 11.09 ಲಕ್ಷ ಹಾಗೂ ಅಕಾಂಪ್ಲಿಷ್ಡ್ ಎಸ್ ಡೀಸೆಲ್- ರೂ. 11.29 ಲಕ್ಷ ಬೆಲೆಗಳನ್ನು ಹೊಂದಿವೆ (ಎಲ್ಲವೂ ಎಕ್ಸ್ ಶೊರೂಂ ಬೆಲೆಗಳಾಗಿವೆ).
ಫೀಚರ್ಸ್ ವಿಷಯಕ್ಕೆ ಬಂದರೆ ಹೊಸ ಆಲ್ಡ್ರೋಜ್ ಫೇಸ್‌ಲಿಫ್ಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 50 ಕ್ಕೂ ಹೆಚ್ಚು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಸಂಪರ್ಕಿತ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ವೇಗದ ಚಾರ್ಜಿಂಗ್ 65W ಟೈಪ್-ಸಿ ಪೋರ್ಟ್‌ಗಳು, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಿಕ್ ಸನ್‌ರೂಫ್ ನಂತಹ ಹಲವು ಫೀಚರ್ಸ್ ಹೊಂದಿದೆ.

ಇವಿಷ್ಟೆ ಅಲ್ಲದೆ ಹ್ಯಾಚ್‌ಬ್ಯಾಕ್ ನೆಕ್ಸಾನ್ ತರಹದ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಶೈನಿ-ಬ್ಲಾಕ್ ಪ್ಯಾನಲ್ ಮತ್ತು ಮಧ್ಯದಲ್ಲಿ ಶೈನಿ ಟಾಟಾ ಲೋಗೋವನ್ನು ಹೊಂದಿದೆ. ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಒಂದು ಚಾಲಕನಿಗೆ (ಸಂಪೂರ್ಣ ಡಿಜಿಟಲ್) ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ) ಸೇರಿದಂತೆ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತೆ ವಿಷಯಕ್ಕೆ ಬಂದರೆ 2025 ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಬಾರಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹಾಗೆಯೇ 2D ಮತ್ತು 3D ಮೋಡ್‌ಗಳೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ ಬರುತ್ತದೆ.

ಇದು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, 1.2-ಲೀಟರ್ NA ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಮತ್ತು CNG ಹೊಂದಿರುವ 1.2-ಲೀಟರ್ NA ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು ಹೊಸ 5-ಸ್ಪೀಡ್ AMT ಟ್ರಾನ್ಸ್‌ಮಿಷನ್ ಆಯ್ಕೆಯಿದೆ. CNG ಮತ್ತು ಡೀಸೆಲ್ ಕೇವಲ ಮ್ಯಾನುವಲ್ ಮಾತ್ರ ಹೊಂದಿವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications