ಬಹುಬೇಡಿಕೆಯ ಮಾರುತಿ ಬಲೆನೋ ಮುಂದೆ ಹೊಸ ಟಾಟಾ ಆಲ್ಟ್ರೋಜ್ ನಿಲ್ಲಬಲ್ಲದೆ? ಯಾವುದು ಬೆಸ್ಟ್?

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ 2025ರ ಆಲ್ಟ್ರೋಜ್ ಅನ್ನು ಆಕರ್ಷಕ ನವೀಕಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಿದ್ದು, ಈಗಿರುವ ಒಂದಷ್ಟು ಹ್ಯಾಚ್‌ಬ್ಯಾಕ್‌ಗಳಿಗೆ ನಡುಕ ಹುಟ್ಟಿಸಿದೆ. ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಸ್ಪರ್ಧೆಯನ್ನು ತೀವ್ರಗೊಳಿಸಿದೆ. ಈ ಸೆಗ್ಮೆಂಟಿನಲ್ಲಿ ಮೊದಲಿನಿಂದಲೂ ಅಗ್ಗದ ಬೆಲೆಗೆ ಸಿಗುತ್ತಿದ್ದ ಮಾರುತಿ ಸುಜುಕಿ ಬಲೆನೊಗೆ ನೇರ ಪ್ರತಿಸ್ಪರ್ಧಿಯಾಗಿದೆ. ಹೊಸ ಟಾಟಾ ಆಲ್ಟ್ರೋಜ್ ಯಾವೆಲ್ಲಾ ವಿಷಯದಲ್ಲಿ ಬಲೆನೊಗೆ ಪೈಪೋಟಿ ನೀಡುತ್ತದೆ ಎಂಬುದನ್ನು ಹೋಲಿಕೆ ಮಾಡಿ ವಿವರಸಿದ್ದೇವೆ.

ಬೆಲೆ: 2025ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಬೇಸ್‌ ವೇರಿಯೆಂಟ್ ಬೆಲೆಯು ರೂ 6.89 (ಎಕ್ಸ್‌ ಶೊರೂಂ) ಲಕ್ಷದಿಂದ ಟಾಪ್‌ ವೇರಿಯೆಂಟ್ ಬೆಲೆಯು ರೂ. 11.49 (ಎಕ್ಸ್‌ ಶೊರೂಂ) ಲಕ್ಷದವರೆಗೆ ಇದೆ. ಮಾರುತಿ ಬಲೆನೋ ವಿಷಯಕ್ಕೆ ಬಂದರೆ ಬೇಸ್‌ ವೇರಿಯೆಂಟ್ ಬೆಲೆಯು ರೂ. 6.70 ಲಕ್ಷ (ಎಕ್ಸ್‌ ಶೊರೂಂ) ದಿಂದ ಟಾಪ್‌ ವೇರಿಯೆಂಟ್ ಬೆಲೆಯು ರೂ. 9.42 ಲಕ್ಷ (ಎಕ್ಸ್‌ ಶೊರೂಂ)ವರೆಗೆ ಇದೆ.

tata-altroz-vs-maruti-baleno-price-features-engine-comparision

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ ಬಲೆನೊದಲ್ಲಿ ಹಿಲ್-ಹೋಲ್ಡ್ ಅಸಿಸ್ಟೆನ್ಸ್, ಎಬಿಎಸ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳನ್ನು ಹೊಂದಿದೆ. ಹಾಗೆಯೇ ಎರಡು ಏರ್ ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಇದರ ಟಾಪ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ.

ಇನ್ನು ಹೊಸ ಟಾಟಾ ಆಲ್ಟ್ರೋಜ್ ಸುರಕ್ಷತೆಗೆ ಸಂಬಂಧಿಸಿದಂತೆ, ಎಲ್ಲಾ ವೇರಿಯೆಂಟ್‌ಗಳಲ್ಲಿ ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಹೆಡ್ ಲೈಟ್‌ಗಳು, ಆಟೋಮ್ಯಾಟಿಕ್ ವೈಪರ್‌ಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್-ಸ್ಪಾಟ್ ಮಾನಿಟರ್ ಮತ್ತು ರಿಯರ್ ವ್ಯೂ ಕ್ಯಾಮೆರಾಗಳು ಟಾಪ್‌ ವೇರಿಂಟ್‌ಗಳಲ್ಲಿ ಲಭ್ಯವಿದೆ.

tata-altroz-vs-maruti-baleno-price-features-engine-comparision

ಫೀಚರ್ಸ್: ಹೊಸ ಆಲ್ಟ್ರೋಜ್ ಇದು ವೈರ್ ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, 16 ಇಂಚಿನ ಅಲಾಯ್ ವೀಲ್‌ಗಳು, ಸನ್‌ರೂಫ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಹಾಗೆಯೇ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಮತ್ತು 10.25-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಗಿದೆ.

ಬಲೆನೊದಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಸ್ಕ್ರೀನ್, ಪ್ರೊಜೆಕ್ಟರ್ ಹೆಡ್ ಲೈಟ್‌ಗಳು, ಹೆಡ್-ಅಪ್ ಡಿಸ್ ಪ್ಲೇ, 16 ಇಂಚಿನ ಅಲಾಯ್ ವೀಲ್‌ಗಳು ಮತ್ತು ವೈರ್‌ಲೆಸ್ ಸ್ಮಾರ್ಟ್ ಫೋನ್ ಸಂಪರ್ಕವನ್ನು ಹೊಂದಿದೆ. ಅದೇನೇ ಇದ್ದರೂ, ಇದು ಆಲ್ಟ್ರೊಜ್‌ನಂತೆ ಫುಲ್ಲಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಮತ್ತು ಸನ್‌ರೂಫ್ ಹೊಂದಿಲ್ಲ.

tata-altroz-vs-maruti-baleno-price-features-engine-comparision

ಎಂಜಿನ್: ಆಲ್ಟ್ರೋಜ್ ಈ ಸೆಗ್ಮೆಂಟಿನಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಏಕೈಕ ಕಾರಾಗಿದೆ. ಅಲ್ಲದೇ ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೂ ಬರುತ್ತದೆ. ಮ್ಯಾನುವಲ್, ಎಎಂಟಿ, ಡಿಸಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಇತ್ತ ಬಲೆನೊವನ್ನು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಮಾತ್ರ ನೀಡಲಾಗುತ್ತಿದ್ದು, ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 5, 2025, 17:59 [IST]
English summary
Tata altroz vs maruti baleno price features engine comparision
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+